‘ವಾಹನಗಳ ಲಾಂಗ್ ಜಂಪ್?’: ಮುಂಬೈನ ಎರಡು ಫ್ಲೈಓವರ್‌ಗಳ ನಡುವೆ 6 ಅಡಿ ಅಂತರ; ಬಿಜೆಪಿ-ಶಿವಸೇನೆ ಸರ್ಕಾರದ ವಿರುದ್ಧ ಟ್ರೋಲ್

Date:

Advertisements

ಮಹಾರಾಷ್ಟ್ರದ ಮುಂಬೈನಲ್ಲಿ ಎರಡು ಪ್ರಮುಖ ಫ್ಲೈಓವರ್‌ಗಳನ್ನು ಜೋಡಿಸಲು ಉದ್ದೇಶಿಸಿದ್ದ ಕಾಮಗಾರಿ 6 ಅಡಿ ಲಂಬವಾದ ಅಂತರದ ನಡುವೆ ನಿಂತಿದೆ. ಒಂದು ಸೇತುವೆ ಆರು ಅಡಿ ಕೆಳಭಾಗದಲ್ಲಿದ್ದರೆ, ಮತ್ತೊಂದು ಆರು ಅಡಿ ಮೇಲ್ಬಾಗದಲ್ಲಿ ನಿಂತಿದೆ. ಆ ಸೇತುವೆಗಳ ಕಾಮಗಾರಿಯಿಂದಾಗಿ ಬೃಹತ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಅಪಹಾಸ್ಯಕ್ಕೆ ಒಳಗಾಗಿದೆ. ವಾಹನಗಳು ಎರಡೂ ಸೇತುವೆಗಳ ನಡುವೆ ಲಾಂಗ್‌ ಜಂಪ್‌ ಮಾಡಬೇಕೇ ಎಂದು ನಗರವಾಸಿಗಳು ಮತ್ತು ವಾಹನ ಚಾಲಕರು ಮುಂಬೈ ಪಾಲಿಕೆ ವಿರುದ್ಧ ಕಿಡಿಕಾರಿದ್ದಾರೆ. ಹಲವಾರು ನೆಟ್ಟಿಗರು ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರವನ್ನು ಟ್ರೋಪ್‌ ಮಾಡುತ್ತಿದ್ದಾರೆ.

ಅಂಧೇರಿ ಪೂರ್ವ ಮತ್ತು ಪಶ್ಚಿಮಕ್ಕೆ ಸಂಪರ್ಕಿಸುವ ಪ್ರಮುಖ ಗೋಖಲೆ ಸೇತುವೆಯ ಒಂದು ಭಾಗವನ್ನು ಸೋಮವಾರ ಸಂಜೆ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ದೇಶದ ಅತ್ಯಂತ ಜನನಿಬಿಡ ರೈಲುಮಾರ್ಗದ ಮೇಲೆ ಸೇತುವೆ ನಿರ್ಮಿಸಲಾಗಿದೆ ಎಂದು ಬಿಎಂಸಿ ಹೇಳಿದೆ. ಈ ಸೇತುವೆಯನ್ನು ಬಿಎಂಸಿ ವಾಸ್ತುಶಿಲ್ಪದ ಅದ್ಭುತ ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.

ಗೋಖಲೆ ಸೇತುವೆಯು ಅಂದೇರಿಯಿಂದ ಜುಹು ಹಾಗೂ ಬಾಂದ್ರಾದಂತಹ ಉಪನಗರಗಳ ಕಡೆಗೆ ಸಂಚಾರಿಸುವ ಸಂಪರ್ಕ ಕೊಂಡಿಯಾಗಿತ್ತು. ಸೇತುವೆಯು ಬರ್ಫಿವಾಲಾ ಫ್ಲೈಓವರ್‌ಗೆ ಸಂಪರ್ಕ ಹೊಂದಿತ್ತು. ಆದರೆ, 2018ರಲ್ಲಿ ಗೋಖಲೆ ಸೇತುವೆಯ ಒಂದು ಭಾಗವು ಕುಸಿದು ಇಬ್ಬರು ಸಾವನ್ನಪ್ಪಿದ್ದರು. ಅದನ್ನು ಮರುನಿರ್ಮಾಣ ಮಾಡಲು 2022ರಲ್ಲಿ ಸೇತುವೆಯ ಉಳಿದ ಭಾಗವನ್ನು ಕೆಡವಲಾಗಿತ್ತು.

Advertisements

ಇದೀಗ, ಗೋಖಲೆ ಸೇತುವೆಯನ್ನು ಸಂಚಾರಕ್ಕೆ ಮುಕ್ತವಾಗಿದೆ ಎಂಬ ಸುದ್ದಿ ಕೇಳಿ ವಾಹನ ಸವಾರರು ತಮ್ಮ ಪ್ರಯಾಣದ ಸಮಯ ಕಡಿಮೆಯಾಗುತ್ತದೆ ಎಂದು ಭಾವಿಸಿದ್ದರು ಮತ್ತು ಸೇತುವೆ ಉದ್ಘಾಟನೆಯನ್ನು ಸ್ವಾಗತಿಸಿದ್ದರು. ಅದರೆ, ಈಗ ಆ ಸೇತುವೆಯ ಎತ್ತರದಲ್ಲಿ ವ್ಯತ್ಯಾಸ ಕಾರಣದಿಂದಾಗಿ, ಬರ್ಫಿವಾಲಾ ಫ್ಲೈಓವರ್‌ಅನ್ನು ಸಂಪರ್ಕಿಸುತ್ತಿಲ್ಲ. ಹೀಗಾಗಿ, ಸೇತುವೆಯು ತನ್ನ ನಿರ್ಮಾಣದ ಉದ್ದೇಶವನ್ನು ಪೂರೈಸುವುದಿಲ್ಲ ಎಂದು ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿದೆ.

 

2022ರಲ್ಲಿ ಶಿವಸೇನೆಯನ್ನು ವಿಭಜಿಸಿ ಉದ್ಧವ್ ಠಾಕ್ರೆ ಸರ್ಕಾರದ ಪತನಕ್ಕೆ ಕಾರಣವಾದ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಶಿವಸೇನೆ ಉದ್ದವ್ ಠಾಕ್ರೆ ಬಣದ ನಾಯಕ ಆದಿತ್ಯ ಠಾಕ್ರೆ ವಾಗ್ದಾಳಿ ನಡೆಸಿದ್ದಾರೆ. ‘ಸೇತುವೆಗಳ ನಡುವಿನ ಎತ್ತರವು ಭ್ರಷ್ಟ ಆಡಳಿತದ ಪರಿಣಾಮವಾಗಿದೆ’ ಎಂದು ಟೀಕಿಸಿದ್ದಾರೆ.

“ಹೌದು, ನಿಜವಾಗಿಯೂ ಭಾರತದಲ್ಲಿ, ಬಹುಶಃ ಜಗತ್ತಿನಲ್ಲೇ ಇದೇ ಮೊದಲನೆಯದು. 2 ಸೇತುವೆಗಳು ಪರಸ್ಪರ 6 ಅಡಿ ಎತ್ತರದ ವ್ಯತ್ಯಾಸವನ್ನು ಹೊಂದಿವೆ!” ಎಂದು ಠಾಕ್ರೆ ವ್ಯಂಗ್ಯವಾಡಿದ್ದಾರೆ.

“2022ರ ನವೆಂಬರ್‌ನಿಂದ ಸುಮಾರು 16 ತಿಂಗಳ ಕಾಲ ಗೋಖಲೆ ಸೇತುವೆಯನ್ನು ಮುಚ್ಚಲಾಗಿತ್ತು. ಈಗ ಆ ಸೇತುವೆಗಳನ್ನು ತಪ್ಪಾಗಿ ಜೋಡಿಸಲಾಗಿದೆ” ಎಂದು ಉದ್ಧವ್ ತಂಡದ ನಾಯಕ ಆನಂದ್ ದುಬೆ ಗಮನಸೆಳೆದಿದ್ದಾರೆ.

“ಬಿಎಂಸಿ, ರೈಲ್ವೆ ಮತ್ತು ಗುತ್ತಿಗೆದಾರರ ನಡುವೆ ಸಮನ್ವಯವಿಲ್ಲವೇ? ಸೇತುವೆಗಳ ನಡುವೆ 1.5 ಮೀಟರ್ ಎತ್ತರ ವ್ಯತ್ಯಾಸವಿದೆ. ಸರ್ಕಾರಕ್ಕೆ ಏನು ಬೇಕು? ಮುಂಬೈ ಜನರು ಲಾಂಗ್ ಜಂಪ್ ಮಾಡಿ ಫ್ಲೈಓವರ್ ತಲುಪಬೇಕೆಂದು ಅವರು ನಿರೀಕ್ಷಿಸುತ್ತಾರೆಯೇ? ರಾಜ್ಯ ಸರ್ಕಾರವು ನಿಷ್ಕಾಳಜಿ ಮಾತ್ರವಲ್ಲದೆ ಮುಂಬೈನವರಿಗೆ ಮೋಸ ಮಾಡಿದೆ” ಎಂದು ದುಬೆ ಆರೋಪಿಸಿದ್ದಾರೆ.

ಆದಾಗ್ಯೂ, ಮುಖ್ಯಮಂತ್ರಿ ಶಿಂಧೆ ಬಣವು ರೈಲ್ವೇಯ ಹೊಸ ನೀತಿಯಿಂದಾಗಿ ಈ ಅಸ್ಪಷ್ಟತೆ ಸಂಭವಿಸಿದೆ ಎಂದು ಹೇಳಿಕೊಂಡಿದೆ, ಗೋಖಲೆ ಸೇತುವೆಯನ್ನು ರೈಲ್ವೇ ಹಳಿಗಳ ಮೇಲೆ ನಿರ್ಮಿಸಲಾಗಿರುವುದರಿಂದ ಅದನ್ನು ಹೆಚ್ಚುವರಿ 1.5 ಮೀಟರ್‌ಗಳಷ್ಟು ಎತ್ತರಿಸಬೇಕಾದ ಅಗತ್ಯವಿತ್ತು ಎಂದು ಹೇಳಿಕೊಂಡಿದೆ.

 

“ಸೇತುವೆ ನಿರ್ಮಾಣದ ಸಮಯದಲ್ಲಿ, ರೈಲ್ವೆಯ ಹೊಸ ನೀತಿಯಿಂದಾಗಿ, ಸೇತುವೆಯ ಎತ್ತರವನ್ನು 1.5 ಮೀಟರ್ ಹೆಚ್ಚಿಸಬೇಕಾಗಿತ್ತು. ಸೇತುವೆಯನ್ನು ಮೊದಲು ನಿರ್ಮಿಸಿದಾಗ, ಅದರ ವಿನ್ಯಾಸವನ್ನು ಬರ್ಫಿವಾಲಾ ಫ್ಲೈಓವರ್ ಜೊತೆಗೆ ಸಿದ್ಧಪಡಿಸಲಾಗಿತ್ತು. ಆದರೆ, ಈಗ ಸೇತುವೆಯ ಎತ್ತರವನ್ನು ಹೆಚ್ಚಿಸಲಾಗಿದೆ. ಬರ್ಫಿವಾಲಾ ಸೇತುವೆ ಈಗ ಅದರ ಕೆಳಗೆ ಇದೆ. ನಾವು ಐಐಟಿ ಮತ್ತು ವೀರಮಾತಾ ಜೀಜಾಬಾಯಿ ತಾಂತ್ರಿಕ ಸಂಸ್ಥೆ (ವಿಜೆಟಿಐ) ಸಹಾಯ ಕೇಳಿದ್ದೇವೆ. ಅಗತ್ಯವಿದ್ದರೆ ರಾಂಪ್ ನಿರ್ಮಿಸುತ್ತೇವೆ” ಎಂದು ಶಿಂಧೆ ತಂಡದ ನಾಯಕ ಮತ್ತು ಸ್ಥಳೀಯ ಶಾಸಕ ಅಮಿತ್ ಸತಮ್ ಹೇಳಿದ್ದಾರೆ.

ಈ ವರ್ಷದ ಡಿಸೆಂಬರ್‌ ವೇಳೆಗೆ ಎಲ್ಲ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ. ಸೇತುವೆಯನ್ನು ಸಂಪೂರ್ಣವಾಗಿ ಬಳಕೆಗೆ ತೆರೆಯಲಾಗುತ್ತದೆ ಎಂದು ಶಿವಸೇನೆ ವಕ್ತಾರ ಕೃಷ್ಣ ಹೆಗಡೆ ಹೇಳಿದ್ದಾರೆ.

“ಸೇತುವೆಯನ್ನು ಮುಚ್ಚಿದ್ದರಿಂದ ನಾವು ದೀರ್ಘ ಟ್ರಾಫಿಕ್ ಜಾಮ್ ಎದುರಿಸುತ್ತಿದ್ದೆವು. ಈ ಹಿಂದೆ ಸೇತುವೆ ಇದ್ದಾಗ, ಅಂಧೇರಿ ಪೂರ್ವದಿಂದ ಪಶ್ಚಿಮಕ್ಕೆ ಹೋಗಲು ಐದು ನಿಮಿಷಗಳನ್ನು ತೆಗೆದುಕೊಳ್ಳುತ್ತಿತ್ತು. ಸೇತುವೆ ಕೆಡವಿದ ಬಳಿಕ, ಸುಮಾರು ಒಂದು ಗಂಟೆ ಬೇಕಾಗುತ್ತಿದೆ. ಈಗ ಸೇತುವೆ ಪೂರ್ಣಗೊಂಡಿದೆ. ಆದರೆ, ಇಂತಹ ದೊಡ್ಡ ತಪ್ಪು ಮಾಡಿದ್ದಾರೆ. ಅವರು ರ‍್ಯಾಂಪ್ ನಿರ್ಮಿಸಿದರೂ, ಸೇತುವೆಯನ್ನು ಮತ್ತೆ ಮುಚ್ಚದೆ, ಅದು ಸಾಧ್ಯವೇ” ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X