ಕೊಪ್ಪಳ | ʼನಮ್ಮ ನಡಿಗೆ ಮಾದಕ ಮುಕ್ತ ಸಮಾಜದ ಕಡೆಗೆʼ ಜಾಗೃತಿ ಕಾರ್ಯಕ್ರಮ

Date:

Advertisements

ನಮ್ಮ ಯುವಕರು ಪ್ರಸ್ತುತ ದಿನಗಳಲ್ಲಿ ಅಮಲು ಪದಾರ್ಥಕ್ಕೆ, ಮದ್ಯಪಾನಕ್ಕೆ ಹಾಗೂ ಮಾದಕ ದ್ರವ್ಯ ಚಟಗಳಿಗೆ ವ್ಯಾಪಕವಾಗಿ ಬಲಿಯಾಗುತ್ತಿದ್ದಾರೆ ಎಂದು ಸಾಲಿಡಾರಿಟಿ ಯೂತ್‌ ಮೂವ್‌ಮೆಂಟ್ ಕರ್ನಾಟಕ ರಾಜ್ಯಾಧ್ಯಕ್ಷ ಲಬೀದ್ ಶಾಫಿ ಬೇಸರ ವ್ಯಕ್ತಪಡಿಸಿದರು.

ಕೊಪ್ಪಳದಲ್ಲಿ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್‌ನಿಂದ ಹಮ್ಮಿಕೊಂಡಿದ್ದ ʼʼ ಎಂಬ ಜಾಗೃತಿ ನಡಿಗೆಗೆ ಚಾಲನೆ ನೀಡಿ ಮಾತನಾಡಿದರು.

“ಪ್ರಸ್ತುತದಲ್ಲಿ ಡ್ರಗ್ಸ್ ಸೇವಿಸುವವರ ಸರಾಸರಿ ವಯಸ್ಸು 12 ಎಂದು ಗುರುತಿಸಲಾಗುತ್ತಿದೆ. ಅಂದರೆ ಶಾಲಾ ವಠಾರದಲ್ಲಿಯೂ ಈ ಮಾದಕ ದ್ರವ್ಯ ಕೂಡ ವ್ಯಾಪಕ ಜಾಲವಾಗಿ ಹರಡಿದೆ. ಇದು ಒಂದು ಸಾಮಾಜಿಕ ಪಿಡುಗು ಎಂದು ಗುರುತಿಸಲಾಗಿದೆ. ಇದನ್ನು ಎಲ್ಲ ಕೆಡುಕುಗಳ ಕೇಂದ್ರವೆಂದು ಕರೆಯಲಾಗಿದೆ. ಒಂದು ವರದಿಯ ಪ್ರಕಾರ ಆತ್ಮಹತ್ಯೆ ಮಾಡಿಕೊಳ್ಳುವ ಮೂರನೇ ಒಂದು ಭಾಗದಷ್ಟು ಮಂದಿ ಮಾದಕ ದ್ರವ್ಯ ಸೇವನೆ ಹಿನ್ನಲೆಯಿಂದ ಕೂಡಿರುತ್ತಾರೆಂಬ ಅಂಕಿ ಅಂಶಗಳು ತಿಳಿದುಬಂದಿವೆ” ಎಂದು ಹೇಳಿದರು.

Advertisements

“2020ರಲ್ಲಿ 9,169 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, ಯುವಕರು ಮಾದಕ ದ್ರವ್ಯ ಚಟದಿಂದ ಆತ್ಮಹತ್ಯೆ  ಮಾಡಿಕೊಂಡಿರುವುದಾಗಿ ಅಂಕಿ ಅಂಶಗಳು ಹೊರಬಂದಿವೆ. ಒಟ್ಟಿನಲ್ಲಿ ಎಲ್ಲ ರೀತಿಯಲ್ಲಿ ನಮ್ಮ ಹೊಸ ತಲೆಮಾರುಗಳನ್ನು ದುರ್ಬಲಗೊಳಿಸುವಂತಹ ಅವರ ಅಭಿವೃದ್ಧಿಯನ್ನು ಅವರ ಕ್ರಿಯಾಶೀಲತೆಯನ್ನು ಕುಂಠಿತಗೊಳಿಸುವಂತಹ ಮಹಾ ಪಿಡುಗಾಗಿ ಗೆದ್ದಲು ಹುಳುಗಳಂತೆ ಈ ಮಾದಕ ದ್ರವ್ಯ ಪದಾರ್ಥ ನಮ್ಮ ಯುವಸಮೂಹವನ್ನು ನಾಶ ಮಾಡುವುದರಲ್ಲಿ ತೊಡಗಿದೆ” ಎಂದರು.

“ಮದ್ಯಪಾನ ಚಟವು ಮನುಷ್ಯನ ಆತ್ಮವನ್ನು ಹಾಳು ಮಾಡುತ್ತದೆ. ಅವನನ್ನು ಮೃತ ಸಮಾನವನ್ನಾಗಿ ಮಾಡುತ್ತದೆ ಎಂದು 1939ರಲ್ಲಿ ಹರಿಜನ ಪತ್ರಿಕೆಯಲ್ಲಿ ಬರೆಯಲಾಗಿತ್ತು. ಹೆಂಡತಿ, ತಾಯಿ, ಸಹೋದರಿ, ಮಗಳು ಎಂಬ ಒಂದು ವಿವೇಚನಾ ಶಕ್ತಿಯನ್ನೂ ಅವನಿಂದ ಇಲ್ಲದಾಗಿಸುವಂತಹ ಒಂದು  ಅತ್ಯಂತ ಕೆಟ್ಟ ನೀಚ ಕೃತ್ಯವೆಂದು ಮಹಾತ್ಮ ಗಾಂಧೀಜಿಯವರು ಹೇಳಿದ್ದಾರೆ. ಮದ್ಯಪಾನ ಮುಕ್ತ, ಅಮಲು ಪದಾರ್ಥ ಮುಕ್ತ ಸಮಾಜವಾಗಬೇಕೆಂಬುದು ಗಾಂಧೀಜಿಯವರ ಕನಸು ಮತ್ತು ಅವರ ಗುರಿಯಾಗಿತ್ತು” ಎಂದು ಹೇಳಿದರು.

ಅಲ್ಲಮ ಪ್ರಭು ಬೆಟ್ಟದೂರು ಮಾತನಾಡಿ, “ರಾಜ್ಯ ಗೃಹ ಇಲಾಖೆಗಳ ಅಂಕಿ ಅಂಶಗಳ ಪ್ರಕಾರ ಕರ್ನಾಟಕದಲ್ಲಿ ಪ್ರತಿದಿನ ಸರಾಸರಿ 16 ಡ್ರಗ್ಸ್ ಪ್ರಕರಣಗಳು ಕಂಡುಬರುತ್ತಿದ್ದು, ಅದರಲ್ಲಿ ಮಾದಕ ವಸ್ತುಗಳ ಸೇವನೆ, ಸ್ವಾಧೀನ ಮತ್ತು ವ್ಯವಹರಗಳ ಪ್ರಕರಣಗಳು ದಾಖಲಾಗುತ್ತಿವೆ. ದೇಶದ ವಿವಿಧ ನಗರಗಳ 16 ರಿಂದ 20 ವರ್ಷದ ಸಾವಿರ ಯುವಕರಲ್ಲಿ ಸಮೀಕ್ಷೆಯೊಂದನ್ನು ನಡೆಸಲಾಗಿದ್ದು, ಅದರಲ್ಲಿ ಶೇ.47 ಮಂದಿ ಸಿಗರೇಟ್ ಸೇವಿಸುವುದಾಗಿದ್ದು, ಶೇ.20ರಷ್ಟು ಯುವಕರು ಮಾದಕ ದ್ರವ್ಯ ಸೇವಿಸಿದ್ದಾರೆ. ಅದರಲ್ಲಿ ಶೇ. 83ರಷ್ಟು ಯುವಕರಿಗೆ ಈ ಚಟದಿಂದ ಹೇಗೆ ಹೊರಬರಬೇಕೆಂಬುದು ತಿಳಿದಿಲ್ಲ. ಇದು ಪ್ರಸ್ತುತ ಯುವಕರು ಅನುಭವಿಸುತ್ತಿರುವ ಒಂದು ಜ್ವಲಂತ ಸಮಸ್ಯೆಯಾಗಿದ್ದು, ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಈ ಮಾದಕ ವಸ್ತುವಿನ ಜಾಲವು ರಾಜಾರೋಷವಾಗಿ ನಮ್ಮ ಮದ್ಯೆ ವ್ಯಾಪಿಸಿರುವುದು ದುರಂತವಾಗಿದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ವಿಜಯನಗರ | ಕಟ್ಟಡ ಕಾರ್ಮಿಕರ ರಕ್ಷಣೆ, ಸಾಮಾಜಿಕ ಭದ್ರತೆಗೆ ಆಗ್ರಹ

ಮಫ್ತಿ ನಜೀರ್ ಅಹಮದ್ ಹಾಗೂ ಎಂ ಲಾಯಕ್ ಅಲಿ, ಅಲ್ಲಮಪ್ರಭು ಬೆಟ್ಟದೂರು, ಲಬೀದ್  ಶಾಫಿ, ಆದಿಲ್ ಪಟೇಲ್, ಆಸಿಫ್ ಕರ್ಕಿಹಳ್ಳಿ, ಇಸಾಖ್ ಫುಜೆಲ್, ಅಬ್ದುಲ್ ಹಸೀಬ್, ಜಕ್ರಿಯಾ, ಇಲಿಯಾಸ್, ಗೌಸ್ ಪಟೇಲ್ ಸೇರಿದಂತೆ ಜಮಾ ಅತ್ ಹಿಂದ್ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

Download Eedina App Android / iOS

X