ತಮ್ಮ ಕರ್ತವ್ಯದ ಕೊನೆಯ ದಿನವಾದ ಜನವರಿ 31ರಂದು ಜ್ಞಾನವಾಪಿ ಮಸೀದಿಯ ವ್ಯಾಸ್ ತೆಹಖಾನದೊಲಗೆ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅನುಮತಿ ನೀಡಿ ತೀರ್ಪು ಪ್ರಕಟಿಸಿದ ಹಾಗೂ ಅದೇ ದಿನ ನಿವೃತ್ತರಾದ ಜಿಲ್ಲಾ ನ್ಯಾಯಾಧೀಶ ವಾರಣಾಸಿ ಎ ಕೆ ವಿಶ್ವೇಶ ಅವರನ್ನು ಉತ್ತರ ಪ್ರದೇಶ ಸರ್ಕಾರ ಸ್ಥಾಪಿಸಿರುವ ಡಾ. ಶಕುಂತಳಾ ಮಿಶ್ರಾ ನ್ಯಾಷನಲ್ ರಿಹ್ಯಾಬಿಲಿಟೇಶನ್ ವಿಶ್ವವಿದ್ಯಾಲಯ, ಲಖನೌ ಇಲ್ಲಿನ ಲೋಕ್‌ಪಾಲ್ ಆಗಿ ಸರ್ಕಾರ ನೇಮಿಸಿದೆ.
ಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಉದ್ದೇಶ ಹೊಂದಿರುವ ಈ ವಿಶ್ವವಿದ್ಯಾಲಯದ ಓಂಬಡ್ಸ್ಮ್ಯಾನ್ ಆಗಿ ನಿವೃತ್ತ ನ್ಯಾಯಾಧೀಶ ವಿಶ್ವೇಶ ಕಾರ್ಯನಿರ್ವಹಿಸಲಿದ್ದು ಮೂರು ವರ್ಷ ಅವಧಿಯ ತನಕ ಈ ಹುದ್ದೆಯಲ್ಲಿರಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಭುತ್ವ ಪೋಷಿತ ಮೈತೇಯಿ ಮಿಲಿಟೆಂಟ್ ಅಟ್ಟಹಾಸ ಮತ್ತು ಮಣಿಪುರ ಪೊಲೀಸರ ಅಸಹಾಯಕತೆ
