ಮುಂದಿನ ಲೋಕಸಭಾ ಚುನಾವಣೆಗೆ ತುಮಕೂರು ಕ್ಷೇತ್ರದಲ್ಲಿ ನೊಳಂಬ ಲಿಂಗಾಯತರಿಗೆ ಟಿಕೆಟ್ ಕೊಡುವಂತೆ ನೊಳಂಬ ಲಿಂಗಾಯತ ಸಮುದಾಯದ ಮಠಾಧೀಶರು ಆಗ್ರಹಿಸಿದ್ದಾರೆ.
ತುಮಕೂರಿನ ಮುರುಘಾ ರಾಜೇಂದ್ರ ಸಭಾಭವನದಲ್ಲಿ ಶುಕ್ರವಾರ ಬೆಟ್ಟದಹಳ್ಳಿ ಮಠ
ಚಂದ್ರಶೇಖರ್ ಮಹಾಸ್ವಾಮಿಜಿ, ಗೊಲ್ಲಹಳ್ಳಿ ಮಠದ ವಿಭವವಿದ್ಯಾ ಶಂಕರ್ ಸ್ವಾಮಿಜಿ, ತಮ್ಮಡಿಹಳ್ಳಿ ಮಠದ ಮಲ್ಲಿಕಾರ್ಜುನ ದೇಸಿಕೇಂದ್ರ ಸ್ವಾಮಿಜಿ, ಗೋಡೆಕೆರೆ ಮಹಾ ಸಂಸ್ಥಾನ ಶ್ರೀ ಮೃತ್ಯುಂಜಯ ದೇಸಿಕೇಂದ್ರ ಸ್ವಾಮಿಜಿಗಳು ಜಂಟಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.
“ರಾಜ್ಯದ 8 ಜಿಲ್ಲೆಯಲ್ಲಿ ನೊಳಂಬ ಲಿಂಗಾಯತರಿದ್ದಾರೆ. ಅದರಲ್ಲೂ ತುಮಕೂರಲ್ಲಿ ಅತಿಹೆಚ್ಚು ನೊಳಂಬ ಲಿಂಗಾಯತರಿದ್ದಾರೆ. ಹಾಗಾಗಿ ಎರಡೂ ರಾಷ್ಟ್ರೀಯ ಪಕ್ಷಗಳು ತುಮಕೂರು ಜಿಲ್ಲೆಯ ಲೋಕಸಭಾ ಟಿಕೆಟ್ ನೊಳಂಬ ಲಿಂಗಾಯತರಿಗೆ ಕೊಡಬೇಕು” ಎಂದು ಸ್ವಾಮೀಜಿಗಳು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಹಂತನಮನೆ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ; ಪ್ರಕರಣ ದಾಖಲಿಸಲು ಪೊಲೀಸರ ಮೀನಮೇಷ
ಪರೋಕ್ಷವಾಗಿ ವಿ.ಸೋಮಣ್ಣರನ್ನು ವಿರೋಧಿಸಿದ ಮಠಾಧಿಪತಿಗಳು, “ನೊಳಂಬ ಸಮುದಾಯಕ್ಕೆ ಸೇರಿದ ಬಿಜೆಪಿ ಆಕಾಂಕ್ಷಿ ಮಾಜಿ ಸಚಿವ ಮಾಧುಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ, ವಕ್ತಾರ ಸಿ ಎನ್ ಚಂದ್ರಶೇಖರ್ ಅವರಿಗೆ ಟಿಕೆಟ್ ಕೊಡುವಂತೆ ಹಾಗೂ ಕಾಂಗ್ರೆಸ್‌ನಲ್ಲಿ ನೊಳಂಬ ಲಿಂಗಾಯತ ಸಮುದಾಯಕ್ಕೆ ಸೇರಿದ ತಿಪಟೂರು ಶಾಸಕ ಷಡಕ್ಷರಿ, ಮುಖಂಡ ಲೋಕೇಶ್ವರ್ ಅವರಿಗೆ ಟಿಕೆಟ್ ನೀಡಬೇಕು” ಎಂದು ಸ್ವಾಮೀಜಿಗಳು ಒತ್ತಾಯಿಸಿದರು.