ಕಲಬುರಗಿ ಜಿಲ್ಲೆಯ ದಕ್ಷಿಣ ಕ್ಷೇತ್ರದ ಸೀತಾನೂರ ಗ್ರಾಮದಲ್ಲಿ ನಾನಾ ಯೋಜನೆಗಳ ಕಾಮಗಾರಿಗಾಗಿ ರಸ್ತೆಯನ್ನು ಹಗೆಯಲಾಗಿದ್ದು, ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆಯನ್ನು ರಿಪೇರಿ ಮಾಡದೇ, ಹಾಗೆ ಬಿಟ್ಟು ಹೋಗಿರುವ ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ.
ಜಲ ಜೀವನ ಮಷೀನ್ ಮನೆ ಮನೆಗೆ ನಲ್ಲಿ ನಿರ್ಮಿಸಿ ನೀರು ಬರುವಂತೆ ಮಾಡಿರುವುದರಿಂದ ಎಷ್ಟರ ಮಟ್ಟಿಗೆ ಫಲಕಾರಿ ಆಗಿದೆಯೋ ಗೊತ್ತಿಲ್ಲ? ಆದರೆ, ಜೆ.ಜೆ.ಎಮ್ ಕಾಮಗಾರಿ ಕಳಪೆ ಮಟ್ಟದಾಗಿದೆ ಎಂಬುವ ಆರೋಪ ಕೂಡ ಗ್ರಾಮದಲ್ಲಿ ಕೇಳಿಬರುತ್ತಿದ್ದು, ಈ ಕಾಮಗಾರಿಯಿಂದ ಎಷ್ಟು ಉಪಯೋಗವಾಗಿದೆಯೋ ಗೊತ್ತಿಲ್ಲ. ಇದರಿಂದ ರಸ್ತೆಯಂತೂ ಹಾಳಾಗಿದ್ದು ನಿಜ ಎನ್ನುತ್ತಾರೆ ಗ್ರಾಮಸ್ಥರು.
ಚನ್ನಾಗಿದ್ದ ರಸ್ತೆಗಳನ್ನು ಒಡೆದು ರಸ್ತೆ ಮಧ್ಯಭಾಗದಲ್ಲಿ ಪೈಪ್ ಅಳವಡಿಸಿದ್ದಾರೆ. ಈಗ ಈ ರಸ್ತೆಗಳ ಸ್ಥಿತಿ ನೋಡಲು ಆಗುತ್ತಿಲ್ಲ. ತುಂಬಾ ಭೀಕರ ಸ್ಥಿತಿಗೆ ರಸ್ತೆಗಳು ತಲುಪಿದ್ದು ಕಾಮಗಾರಿ ಮುಗಿದ ಬಳಿಕ ಒಡೆದ ರಸ್ತೆ ದುರಸ್ತಿ ಮಾಡದೇ ಹಾಗೆ ಬಿಟ್ಟಿರುವುದಕ್ಕೆ ಗ್ರಾಮಸ್ಥರು ನಿಷಾದ ವ್ಯಕ್ತ ಪಡಿಸುತ್ತಿದ್ದಾರೆ.
ರಸ್ತೆ ಒಡೆದು ಪೈಪ್ ಹಾಕಿ ಕಾಂಕ್ರೇಟ್ ಚೂರುಗಳಿಂದ ಗುಂಡಿಗಳು ಮುಚ್ಚಿ ಬಿಟ್ಟಿದ್ದು, ಕಾಮಗಾರಿ ಮುಗಿದ ಬಳಿಕ ರಸ್ತೆ ಪ್ಯಾಚ್ ವರ್ಕ್ ಕೂಡ ಮಾಡದೇ ಬಿಟ್ಟಿದ್ದು, ಇರುವುದರಿಂದ ಬೈಕ್ ಸವಾರರಿಗೆ ತುಂಬಾ ತೊಂದರೆಯಾಗುತ್ತಿದ್ದು, ಬೈಕ್ ಕಂಟ್ರೋಲ್ ತಪ್ಪಿ ಗಾಡಿ ಸ್ಕಿಡ್ ಆಗಿ ಸವಾರರು ಬಿದ್ದಿರುವ ಘಟನೆಗಳು ನಡೆದಿವೆ. ಇದರಿಂದ ಬೈಕ್ ಸವಾರರು ತುಂಬಾ ಆತಂಕ, ಭಯದಿಂದ ಬೈಕ್ ಓಡಿಸುತ್ತಾರೆ ಎನ್ನುತ್ತಾರೆ ಸ್ಥಳೀಯರು.
ಸಣ್ಣ ಮಕ್ಕಳು, ವಯಸ್ಸಾದ ವೃದ್ಧರು, ಕಣ್ಣು ಕಾಣದೆ ಇರುವವರು ರಸ್ತೆಯಲ್ಲಿ ನಡೆದುಕೊಂಡು ಹೋಗಲು ಆಗುವುದಿಲ್ಲ. ಕಲ್ಲುಗಳು ಕಾಲಿಗೆ ತಾಗಿ ಬೀಳುತ್ತಿದ್ದಾರೆ. ಜೆ.ಜೆ.ಎಮ್ ಕಾಮಗಾರಿಯಿಂದ ಸಂಪೂರ್ಣ ರಸ್ತೆ ಹದಗೆಟ್ಟಿದೆ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗಾ ಈ ರಸ್ತೆ ದುರಸ್ತಿ ಮಾಡಿಕೊಡಬೇಕು ಎಂದು ಸೀತಾನೂರು ಗ್ರಾಮಸ್ಥರು ಈ ದಿನ. ಕಾಮ್ ಮೂಲಕ ಆಗ್ರಹಿಸಿದ್ದಾರೆ.