ಕಲಬುರಗಿ ಜಲ್ಲೆಯ ಚಿತ್ತಾಪುರ ತಾಲೂಕಿನಲ್ಲಿರುವ ಅಂಗನವಾಡಿ ಶಾಲೆಗಳು ಯಾವುದೇ ಕಾನ್ವೆಂಟ್ ಶಾಲೆಗಳಿಗೂ ಕಮ್ಮಿ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ನವೀನ್ ಕುಮಾರ್ ಹೇಳಿದರು.
ತಾಲೂಕಿನ ದಂಡೋತಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಹಾಗೂ ಅಜೀಮ್ ಪ್ರೇಮ್ ಜೀ ಫೌಂಡೇಶನ್ ಜಿಲ್ಲಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ನಡೆದ ಬಾಲ ಮೇಳ, ಚಿಣ್ಣರ ಚಿಲಿಪಿಲಿ ಅಂಗನವಾಡಿ ಮಕ್ಕಳ ಹಬ್ಬ ಕಾರ್ಯಕ್ರಮದ ಭಾಗವಾಗಿದ್ದ ಅವರು ಮಾತನಾಡಿದರು.
ತಾಲೂಕಿನ ಅಂಗನವಾಡಿ ಶಾಲೆಗಳಲ್ಲಿನ ವ್ಯವಸ್ಥೆ ಮತ್ತು ಕಾರ್ಯಕರ್ತೆಯರು ಮಕ್ಕಳಿಗೆ ಕಲಿಸುವ ಪಾಠ ಹಾಗೂ ಮಕ್ಕಳೊಂದಿಗೆ ಮಕ್ಕಳಾಗಿ, ಮಕ್ಕಳಿಂದ ಮಾಡಿಸುವ ವಿವಿಧ ಚಟುವಟಿಕೆಗಳನ್ನು ನೋಡಿದರೆ ಸಾವಿರಾರು ರೂಪಾಯಿ ಖರ್ಚು ಮಾಡಿ ನಮ್ಮ ಮಕ್ಕಳನ್ನು ಸೇರಿಸುವ ಕಾನ್ವೆಂಟ್ ಶಾಲೆಗಳಿಗಿಂತ ನಮ್ಮ ಅಂಗನವಾಡಿ ಕೇಂದ್ರಗಳು ಮೇಲಾಗಿವೆ. ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ ವಲಯ ಅಂಗನವಾಡಿ ಮೇಲ್ವಿಚಾರಕಿಯರು, ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಪಡುತ್ತಿರುವ ಶ್ರಮ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ದಂಡೋತಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಬೂಬ್ ಪಟೇಲ್ ಮಾತನಾಡಿ, ಬೇರೆ ಕಡೆಗಳಲ್ಲಿ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯತಿಗಳಿಂದ ಅಂಗನವಾಡಿ ಶಾಲೆಗಳಿಗೆ ಅದೇಷ್ಟೋ ಅನುದಾನ ನೀಡಿದರು ಸಹ, ಮಕ್ಕಳಿಗೆ ಕಲಿಸುವ ಉತ್ಸಾಹ ಇರುವುದಿಲ್ಲ. ಅಥಹದರಲ್ಲಿ ದಂಡೋತಿ ವಲಯದಲ್ಲಿ ಬರುವ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಉತ್ತಮ ಕಾರ್ಯಕರ್ತೆಯರಿಂದಲೇ ನಮ್ಮ ಗ್ರಾಮಕ್ಕೆ ಗಾಂಧಿ ಗ್ರಾಮ ಪುರಸ್ಕಾರ ದೊರಕಿದೆ ಎಂದರು.
ಅಜೀಮ್ ಪ್ರೇಮ್ ಜೀ ಫೌಂಡೇಶನ್ನಿನ ಶೃತಿ, ರವಿಚಂದ್ರ, ರೇಣುಕಾ, ತರುಣ ಅವರು ಮಕ್ಕಳಿಗೆ ಮತ್ತು ಮಕ್ಕಳ ಪಾಲಕರಿಗೆ ವಿವಿಧ ಚಟುವಟಿಕೆಗಳನ್ನು ಮಾಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಲೀಲಾ ಪಾಳೇದಕರ್, ಉಪಾಧ್ಯಕ್ಷೆ ಶರಣಬಸ್ಸಮ್ಮ ಕವಡೆ, ಶಾಲೆಯ ಸಹ ಶಿಕ್ಷಕರಾದ ಮಲ್ಲಣ್ಣ, ಶಿವಲೀಲಾ, ಸಷಿಯುನ್ನಿಸಾ, ಮೌನೇಶ್ ವಿಶ್ವಕರ್ಮ ಸೇಡಂ, ವೈದ್ಯರಾದ ರಜಿವುಲ್ ಖಾದ್ರಿ, ಮೇಲ್ವಿಚಾರಕಿಯರಾದ ಶೀಲಾ ದೇವಿ, ಕವಿತಾ ಪಾಟೀಲ್, ಶೋಭಾ, ಸುನಿತಾ, ಗೀತಾ ಯಡ್ರಾಮಿ, ಗ್ರಾಮದ ಮುಖಂಡರಾದ ದಾವೂದ್ ಪಟೇಲ್, ರಷೀದ್ ಪಠಾಣ್, ರಮೇಶ್ ಕವಡೆ, ಅಂಗನವಾಡಿ ಶಿಕ್ಷಕಿಯರಾದ ವಿದ್ಯಾನಿಧಿ ಕವಡೆ, ಅಕ್ಕಮಹಾದೇವಿ ಬೃಂಗಿಮಠ, ಸರಸ್ವತಿ, ರಾಧಾಬಾಯಿ, ಬಸಮ್ಮ, ಆಲಿಯಾ, ರೇಖಾ, ದೇವಿಂದ್ರಮ್ಮಾ ಪಾಟೀಲ್, ಸುಮಲತಾ ಬಟಿಗೇರಿ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ಆಶಾ ಕಾರ್ಯಕರ್ತೆಯರು ಗ್ರಾಮದ ಮುಖಂಡರು ಇದ್ದರು.