ಪ್ರತೀ ತಿಂಗಳು ಪಂಚ ಗ್ಯಾರಂಟಿಗಳಾದ ಅನ್ನಭಾಗ್ಯ ಯೋಜನೆಯಡಿ 12ಕೋಟಿ, ಗೃಹಲಕ್ಷ್ಮಿ ಯೋಜನೆಗೆ 44 ಕೋಟಿ, ಗೃಹಜ್ಯೊತಿಗೆ 10 ಕೋಟಿ ಹಾಗೂ ಶಕ್ತಿ ಯೋಜನೆಗೆ ಅಂದಾಜು 20 ಕೋಟಿ ಹಾಗೂ ಯುವನಿಧಿ ಸೇರಿದಂತೆ ಒಟ್ಟಾರೇ ಗದಗ ಜಿಲ್ಲೆಗೆ ಗ್ಯಾರಂಟಿ ಯೋಜನೆಯಡಿ ಪ್ರತೀ ತಿಂಗಳು 100 ಕೋಟಿ ಸರ್ಕಾರದ ಅನುದಾನ ಬಳಕೆಯಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ ಅವರು ಹೇಳಿದರು.
ಗದಗ ಜಿಲ್ಲೆಯ ರೋಣ ಹಾಗೂ ಗಜೇಂದ್ರಗಡ ತಾಲೂಕು ಆಡಳಿತಗಳ ಸಹಯೋಗದಲ್ಲಿ ರೋಣ ಪಟ್ಟಣದ ದ್ರೋಣಾಚಾರ್ಯ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ನಡೆದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿದರು.
ಚುನಾವಣಾ ಪೂರ್ವದಲ್ಲಿ ಗ್ಯಾರಂಟಿ ಕಾರ್ಡಗಳನ್ನು ಮನೆ ಮನೆಗೆ ತಲುಪಿಸಿದ್ದೇವು. ಅದೇ ರೀತಿ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳನ್ನು ಸಹ ಮನೆ ಮನೆಗೆ ತಲುಪಿಸಿದ್ದೇವೆ. ಕಾಂಗ್ರೆಸ್ ಪಕ್ಷದ ಮೇಲೆ ಜನರಿಗೆ ಇರುವ ವಿಶ್ವಾಸ ಬಹುದೊಡ್ಡದು, ಅದನ್ನು ಉಳಿಸಿಕೊಂಡಿದ್ದೇವೆ. ಅದೇ ರೀತಿ ಮುಂದೆಯೂ ಕಾಂಗ್ರೆಸ್ ಸರ್ಕಾರಕ್ಕೆ ಜನಾಶೀರ್ವಾದ ಇರಲಿ ಎಂದರು.
ಜನರ ವಿಶ್ವಾಸಕ್ಕೆ ಕಾಂಗ್ರೆಸ್ ಎಂದು ದ್ರೋಹ ಬಗೆದಿಲ್ಲ. ಬಡವರ, ದಲಿತರ, ಅಲ್ಪಸಂಖ್ಯಾತರ, ಹಿಂದೂಳಿದ ವರ್ಗದವರ ಏಳ್ಗೆಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸಭಲತೆ ಸೃಷ್ಟಿಯಾಗಿದೆ. ಬಡವರ ಆರ್ಥಿಕ ಗುಣಮಟ್ಟ ಹೆಚ್ಚಾಗುತ್ತಿದೆ ಎಂದರು.
ಗಜೇಂದ್ರಗಡದಿಂದ ಕಾಲಕಾಲೇಶ್ವರಕ್ಕೆ 2024ರ ವರ್ಷದಲ್ಲಿಯೇ ಕೇಬಲ್ ಕಾರ್ ಯೋಜನೆ ಆರಂಭಿಸಲಾಗುವುದು ಎಂದು ರಾಜ್ಯ ಕಾನೂನು, ನ್ಯಾಯ ಮಾನನ ಹಕ್ಕುಗಳು ಸಂಸದೀಯ ವ್ಯವಹಾರಗಳು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರಾದ ಎಚ್.ಕೆ. ಪಾಟೀಲ ತಿಳಿಸಿದರು.
ಕಂದಾಯ ಸಚಿವ ಕೃಷ್ಣ ಬೈರೆಗೌಡ ಮಾತನಾಡಿ, ಸರ್ಕಾರ ನೀಡಿರುವ ಗ್ಯಾರಂಟಿ ಗಳು ಜನಸಾಮಾನ್ಯರಿಗೆ ತಲುಪಿದೆಯೇ ಎಂಬ ಖಾತರಿಗಾಗಿ ಈ ಗ್ಯಾರಂಟಿ ಸಮಾವೇಶದ ಉದ್ದೇಶವಾಗಿದೆ ಎಂದರು.
ಬಡ ಜನರ ಜೀವನವನ್ನು ಆರ್ಥಿಕವಾಗಿ ಸಬಲೀಕರಣ ವಾಗುವಲ್ಲಿ ಗ್ಯಾರಂಟಿಗಳ ಪಾತ್ರ ಪ್ರದಾನವಾಗಿದ್ದು , ಮಹಿಳೆಯರು ಸ್ವಾಲಂಬನೆಯಾಗಿ ಬದುಕಲು ಶಕ್ತಿ ಯೋಜನೆ ಉಪಯುಕ್ತವಾಗಿದೆ ಎಂದರು.
ವಿರೋದ ಪಕ್ಷದವರ ಅಧಿಕಾರಾವಧಿಯಲ್ಲಿ ಹಣದ್ದುಬರ ಹೆಚ್ಚಾಗಿ ಶ್ರೀಮಂತರ ತೆರಿಗೆಯನ್ನು ಕಡಿಮೆಗೊಳಿಸಿ ಜನಸಾಮಾನ್ಯರ ಮೇಲೆ ತೆರಿಗೆಯನ್ನು ಹೆಚ್ಚು ಮಾಡಿ ದಿನನಿತ್ಯದ ಜೀವನದ ಮೇಲೆ ಭರೆ ಎಳೆದಂತ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಗಳ ಮೂಲಕ ಪ್ರತಿ ಕುಟುಂಬಕ್ಕೆ ನೇರವಾಗಿ ಅಥವಾ ಪರೋಕ್ಷ ವಾಗಿ ಪ್ರತಿ ತಿಂಗಳು 4-5 ಸಾವಿರ ಆರ್ಥಿಕ ಹೊರೆಯನ್ನು ಕಡಿಮೆಮಾಡಿವಲ್ಲಿ ಗ್ಯಾರಂಟಿ ಪಾತ್ರ ಹೆಚ್ಚಿದೆ ಎಂದು ನುಡಿದರು.
ಭ್ರಷ್ಟಾಚಾರ ರಹಿತವಾಗಿ ಗ್ಯಾರಂಟಿ ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ತಲುಪುವುದರ ಮೂಲಕ ಗ್ಯಾರಂಟಿ ಸಮಾವೇಶ ಸಾರ್ಥಕ ಸಮಾವೇಶ ವಾಗಿದೆ ಎಂದು ಅವರು ಹೇಳಿದರು.
ರಾಜ್ಯ ಖನೀಜ ನಿಗಮದ ಅಧ್ಯಕ್ಷ ಹಾಗೂ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳಿಗೆ ಮಹತ್ವ ಕೊಟ್ಟು, ಎರಡು ತಿಂಗಳಲ್ಲಿ ಅನುಷ್ಠಾನ ಗೊಳಿಸಲಾಯಿತು. ನಿಮಗೆಲ್ಲ ಅಭಿನಂದನೆಸಲ್ಲಿಸುವ ಕಾರ್ಯಕ್ರಮ ಇದಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್. ಕೆ. ಪಾಟೀಲ ಹಾಗೂ ಕಂದಾಯ ಸಚಿವರಾದ ಕೃಷ್ಣ ಬೈರೆಗೌಡ ಅವರು ತಮ್ಮ ಕೆಲಸದ ಒತ್ತಡದ ಮಧ್ಯಯೂ ಆಗಿಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಅಭಿನಂದನೆಗಳು. ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಾಬಾಸಾಬ ನೇಮಗೌಡ ಸೇರಿದಂತೆ ಜಿಲ್ಲಾಡಳಿತಕ್ಕೆ ಧನ್ಯವಾದ ತಿಳಿಸಿದರು.
ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ಸರ್ಕಾರ ರಚನೆಗೆ ಆಶೀರ್ವಾದ ಮಾಡಿದ್ದೀರಿ. ನಿಮಗೆ ನೀಡಿದ ಗ್ಯಾರಂಟಿ ಬರವಸೆ ಈಡೆರಿಸಿದ್ದಾರೆ ಸಿಎಂ ಸಿದ್ದರಾಮಯ್ಯ. 2024ರಲ್ಲಿ ನೀಡಿದ 168 ಬರವಸೆಗಳನ್ನು ಸಹ ಇಡೇರಿಸಿದ್ದರು ಎಂಬುದನ್ನು ನೆನಪಿಡಬೇಕು ಎಂದರು.
ಮುಖ್ಯಮಂತ್ರಿಯಾದ ತಕ್ಷಣ ಮೊದಲು ಗ್ಯಾರಂಟಿ ಘೋಷಣೆ ಮಾಡಿದವರು ಸಿದ್ದರಾಮಯ್ಯ. ಅದನ್ನು ಅನುಷ್ಠಾನ ಮಾಡಿದ್ದಾರೆ. ಇಂದಿನ ವ್ಯವಸ್ಥೆಯಲ್ಲಿ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿ ಜಾರಿ ಮಾಡಿದೆ ಜಿಲ್ಲಾಡಳಿತ ಎಂದು ಹೇಳಿದರು.
ತಾಲೂಕಿನ ಇಟಗಿಯಲ್ಲಿ 120ಕೋಟಿ ವೆಚ್ಚದಲ್ಲಿ 220/10 ವಿದ್ಯುತ್ ಪರಿವರ್ತಕ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದರಿಂದ ಈ ಭಾಗದ ರೈತರ ವಿದ್ಯತ್ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ. ಅಲ್ಲದೇ ಗಜೇಂದ್ರಗಡ ದಲ್ಲಿ ೬ ಕೋಟಿ ವೆಚ್ಚದಲ್ಲಿ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್ ನಿರ್ಮಾಣಕ್ಕೂ ಸಹ ಚಾಲನೆ ದೊರೆತಿದೆ ಎಂದರು.
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಶಾಸಕರಾದ ಬಸವರಾಜ ರಾಯರೆಡ್ಡಿ ಅವರು ಮಾತನಾಡಿ, ಕಳೆದ ಚುನಾವಣೆಯಲ್ಲಿ ಮತದಾರರಾದ ತಾವು ಬಹುಮತ ನೀಡಿದ್ದಿರಿ. ಆರು ತಿಂಗಳಲ್ಲಿ ಐದು ಗ್ಯಾರಂಟಿ ಯೋಜನೆ ಪರಿಣಾಮಕಾರಿ ಅನುಷ್ಠಾನ ಮಾಡಲಾಗಿದೆ. ಕ್ರಾಂತಿಕಾರ ಆರ್ಥಿಕ ಬದಲಾವಣೆಗೆ ಸರ್ಕಾರ ಸಾಕ್ಷಿ. ಇಂತಹ ಕಾರ್ಯಕ್ರಮ ಭಾರತದಲ್ಲಿ ಎಲ್ಲಿಯು ಇಲ್ಲ. ಪ್ರತೀ ದಿನಕ್ಕೆ 60ಲಕ್ಷ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ ಎಂದರು.
ದೇಶದಲ್ಲಿ ಅನ್ನಭಾಗ್ಯ ಯೋಜನೆ ಆರಂಭವಾದಾಗ 2 ರೂ.ಗೆ ಕೆ.ಜಿ ಅಕ್ಕಿ ನೀಡಲಾಗುತ್ತಿತ್ತು. ನಂತರ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು 2013ರಲ್ಲಿ ಆಹಾರ ಬದ್ರತಾ ಕಾಯ್ದೆ ಜಾರಿಮಾಡಿ, ಹಸಿವು ನೀಗಿಸಿದ್ದಾರೆ. ಅದೇ ರೀತಿ ಸಿದ್ದರಾಮಯ್ಯ ಅನ್ನ ಭಾಗ್ಯ ಜಾರಿ ಮಾಡಿದರು. ರಾಜ್ಯದ ಬಡವರ ಹಸಿವು ನೀಗಿಸಿ, ಹಸಿವು ಮುಕ್ತ ಕರ್ನಾಟಕ ಮಾಡಿದ್ದಾರೆ ಎಂದರು.
ರಾಜ್ಯದ 1.27ಕೋಟಿ ಕುಟುಂಬದ 4.37ಕೋಟಿ ಸದಸ್ಯರಿಗೆ ಅನ್ನಭಾಗ್ಯದಡಿ ಅಕ್ಕಿ ಹಾಗೂ ಸಹಾಯಧನ ನೀಡಲಾಗುತ್ತಿದೆ. ಇದಕ್ಕಾಗಿ 11 ಸಾವಿರ ಕೋಟಿ ವೆಚ್ಚವಾಗುತ್ತಿದೆ. ಗೃಹ ಲಕ್ಷ್ಮಿ ಯೊಜನೆಯಡಿ 1.16ಕೋಟಿ ಮಹಿಳಾ ಯಜಮಾನಿಗೆ ಪ್ರತಿ ತಿಂಗಳು 2000 ಮೊತ್ತ ನೇರವಾಗಿ ನೀಡಲಾಗುತ್ತಿದೆ. ಇದಕ್ಕಾಗಿ 2300ಕೋಟಿ ಪ್ರತಿ ತಿಂಗಳ ವೆಚ್ಚ ಮಾಡುತ್ತಿದೆ. ಗೃಹಜ್ಯೋತಿ ಯೋಜನೆಯಲ್ಲಿ ಉಚಿತ ವಿದ್ಯುತ್ ನೀಡಲು 8000ಕೋಟಿ ನೀಡಿದೆ. ಯುವನಿಧಿ ಸೇರಿದಂತೆ ಈವರೆಗೆ 30 ಸಾವಿರಕ್ಕೂ ಅಧಿಕ ಅನುದಾನ ಸರ್ಕಾರ ನೀಡಿದೆ ಎಂದರು.
ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ದಿವಾಳಿ ಆಗಿಲ್ಲ, ಆಗೋದು ಇಲ್ಲ. ರಾಜ್ಯ ಆರ್ಥಿಕ ವಾಗಿ ಉತ್ತಮ ಸ್ಥಿತಿಯಲ್ಲಿದೆ. 3.71ಲಕ್ಷ ಕೋಟಿ ಆಯವ್ಯಯವನ್ನು ಸಿಎಂ ಮಾಡಿದ್ದು, ಇದರಲ್ಲಿ 52 ಸಾವಿಕ ಕೋಟಿ ಗ್ಯಾರಂಟಿ ಯೋಜನೆಗಳಿಗೆ ಮೀಸಲಿರಿಸಿದ್ದಾರೆ. ಗ್ಯಾರಂಟಿ ಯೋಜನೆ ನಿರಂತರ ಇರಲಿವೆ ಎಂದರು.
ವೇದಿಕೆಯಲ್ಲಿ ಕೆ.ಎಂ.ಎಪ್ ಮಾಜಿ ಅಧ್ಯಕ್ಷ ಅಸೂಟಿ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಾಬಾಸಾಬ ನೇಮಗೌಡ, ಎಸಿ ಡಾ. ವೆಂಕಟೇಶ ನಾಯ್ಕ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪ್ರಶಾಂತ, ಶಶಿಕಾಂತ ಕೋಟೊಮನಿ, ತಾಲೂಕಿನ ಅಧಿಕಾರಿಗಳಾದ ರವಿ ಎ. ಎನ್, ನಾಗರಾಜ.ಕೆ, ಮೋಹನ್.ಡಿ, ಕಿರಣಕುಮಾರ ಕುಲಕರ್ಣಿ, ಎಸ್.ಎಸ್. ಬೀಳಗಿ, ರಮೇಶ್ ಗೋಂದಕರ, ಬಸವರಾಜ ಬಳಗಾನೂರ, ರಾಮಪ್ಪ ಹೊಸಮನಿ ಹಾಜರಿದ್ದರು.ರೋಣ
