ವಿಜಯಪುರ | ಭಾರತೀಯರು ಸಹಬಾಳ್ವೆಯಿಂದ ಜೀವನ ಸಾಗಿಸಬೇಕು: ಡಾ. ಅಸಂಗ ವಾಂಖೇಡೆ

Date:

ಭಾರತೀಯರಾದ ಎಲ್ಲರೂ ಸಮಭಾವ ಸಹಬಾಳ್ವೆಯಿಂದ ಜೀವನವನ್ನು ಸಾಗಿಸಬೇಕು ಎಂದು ಅಮೇರಿಕದ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಅಸೋಸಿಯೆಟ್ ಎಡಿಟರ್ ಡಾ.ಅಸಂಗ ವಾಂಖೇಡೆ ಹೇಳಿದರು.

ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕೋಶದ ವತಿಯಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ. ಬಿ.ಆರ್. ಅಂಬೇಡ್ಕ‌ರ್‌ ರವರ ಸಮಗ್ರತೆಯ ವಿಚಾರದಲ್ಲಿ ಸಾಮಾಜಿಕ ನ್ಯಾಯ ಮತ್ತು ಅದರ ಶ್ರೇಯೋಭಿವೃದ್ಧಿ ಹಾಗೂ ಭಾರತೀಯ ದಂಡ ಸಂಹಿತೆ ಮತ್ತು ಸಮಾನತೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು ಹಾಗೂ ಡಾ. ಬಿ. ಆರ್.ಆರ್ ಅಂಬೇಡ್ಕರ್ ರವರ ಜೀವನದ ಹೋರಾಟದ ಬಗ್ಗೆ ವಿವರಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಾರ್ಯಕ್ರಮದಲ್ಲಿ ವಿವಿಯ  ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲಾ ಮಾತನಾಡಿ, ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಪಾ. ಜಾ/ಪ. ಪಂ ನಿಂದ ಇಂತಹ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸುವುದರಿಂದ ವಿದ್ಯಾರ್ಥಿಗಳಿಗೆ ಅಭ್ಯಾಸ ಮಾರ್ಗದರ್ಶಿ ಮತ್ತು ವಿದೇಶದಲ್ಲಿ ಪ. ಜಾ/ಪ. ಪಂ ವಿದ್ಯಾರ್ಥಿಗಳಿಗೆ ಲಭಿಸುವ ಪ್ರಾಯೋಜಕತ್ವ ಕುರಿತು ಮಾಹಿತಿ ಲಭಿಸುತ್ತದೆ. ಅಂತಹ ವಿದೇಶಿ ಪ್ರಾಯೋಗಿಕತ್ವಗಳನ್ನು ನಮ್ಮ ವಿದ್ಯಾರ್ಥಿನಿಯರು ಕೂಡ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಕೇಂದ್ರ ಹಾಗೂ ಪ.ಜಾ/ಪ.ಪಂ ನಿಂದ ಇಂತಹ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸುವುದರಿಂದ ವಿದ್ಯಾರ್ಥಿಗಳಿಗೆ ಅಭ್ಯಾಸ ಮಾರ್ಗದರ್ಶಿ ಲಭಿಸಿದಂತಾಗುತ್ತದೆ ಮತ್ತು ವಿದೇಶದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಲಭಿಸುವ ಪ್ರಾಯೋಜಕತ್ವ ಕುರಿತು ಮಾಹಿತಿ ಲಭಿಸುತ್ತಿದೆ. ಅಂತಹ ವಿದೇಶಿ ಪ್ರಾಯೋಜಕತ್ವಗಳನ್ನು ನಮ್ಮ ವಿದ್ಯಾರ್ಥಿನಿಯರು ಕೂಡ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಹಿಳಾ ವಿವಿಯ ಕುಲ ಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಭಾರತೀಯರಾದ ನಾವು-ನೀವೆಲ್ಲ ಒಂದೇ, ಜಾತಿಮತ ಬೇಧ-ಭಾವ ಇಲ್ಲದೆ ಸಮಾನ ಮನಸ್ಸಿನಿಂದ ಬದುಕಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕೋಶದ ನಿರ್ದೇಶಕಿ ಪ್ರೊ. ಲಕ್ಷ್ಮಿದೇವಿ ವಾಯ್, ಡಾ. ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಸಂಜೀವಕುಮಾರ ಗಿರಿ, ವಿವಿಧ ಅಧ್ಯಯನ ವಿಭಾಗಗಳ ಭೋಧಕ, ಭೋಧಕೇತರ ವರ್ಗದವರು, ಸಂಶೋಧನಾ ವಿದ್ಯಾರ್ಥಿನಿಯರು, ಅತಿಥಿ ಉಪನ್ಯಾಸಕರು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಡಾ. ಸಂಜೀವ್ ಕುಮಾರ್ ಗಿರಿ ಸ್ವಾಗತಿಸಿದರು. ಜೈವಿಕ ಮಾಹಿತಿ ಅಧ್ಯಯನ ವಿಭಾಗದ ಸಂಯೋಜಕ ಡಾ. ಬಾಬು ಆರ್.ಎಲ್ ಹೊಂದಿಸಿದರು. ಸಂಶೋಧನಾ ವಿದ್ಯಾರ್ಥಿನಿ ವಿದ್ಯಾಶ್ರೀ ಎನ್. ಸೂರ್ಯವಂಶಿ ಕಾರ್ಯಕ್ರಮ ನಿರೋಪಿಸಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ತವ್ಯ ಸಂಬಂಧಿತ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವಂತಿಲ್ಲ; ಪೊಲೀಸರಿಗೆ ಆಯುಕ್ತರ ಎಚ್ಚರಿಕೆ

ಪೊಲೀಸ್‌ ಸಿಬ್ಬಂದಿಗಳು ಸಮವಸ್ತ್ರದಲ್ಲಿರುವ ತಮ್ಮ ಫೋಟೋ, ವಿಡಿಯೋ, ರೀಲ್ಸ್‌ ಸೇರಿದಂತೆ ಕರ್ತವ್ಯಕ್ಕೆ...

ಮಡಿಕೇರಿ | ಗ್ಯಾರಂಟಿ ಯೋಜನೆಗಳನ್ನು ಅರ್ಹರಿಗೆ ತಲುಪಿಸಬೇಕು: ಧರ್ಮಜ ಉತ್ತಪ್ಪ

ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳ ಪ್ರಗತಿ ಸಂಬಂಧಿಸಿದಂತೆ ಜಿಲ್ಲಾ ಅನುಷ್ಠಾನ ಸಮಿತಿ...

ಕೊಡಗು | ನಿಧಿ ಆಸೆಗೆ ಮನೆಯ ಕೋಣೆಯಲ್ಲೇ ಗುಂಡಿ ಕೊರೆದ ದುರುಳರು ಪೊಲೀಸರ ಬಲೆಗೆ

ನಿಧಿಯ ಆಸೆಗೆ ಜೋತುಬಿದ್ದು ವಾಸದ ಮನೆಯ ಕೋಣೆಯಲ್ಲಿ ಗುಂಡಿ ತೋಡಿ ಶೋಧಿಸಿದ...

ಮಂಡ್ಯ | ಕಡತನಾಳು ಶಾಲೆಯಲ್ಲಿ ಡೆಂಘೀ ವಿರೋಧಿ ಮಾಸಾಚರಣೆ

ಆರೋಗ್ಯ ಮತ್ತು ಕ್ಷೇಮ ಕೇಂದ್ರ, ಬಲ್ಲೇನಹಳ್ಳಿ, ತಾಲೂಕು ಆರೋಗ್ಯ ಕೇಂದ್ರ ಹಾಗೂ...