ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪೊಲೀಸರು ನಕ್ಸಲ್ ಹೋರಾಟದ ಪ್ರಕರಣಗಳ ತನಿಖೆಯನ್ನು ಚುರುಕುಗೊಳಿಸಿದ್ದು, ಇದೀಗ ಮತ್ತೋರ್ವ ನಕ್ಸಲ್ ಹೋರಾಟಗಾರ್ತಿಯನ್ನು ವಶಕ್ಕೆ ಪಡೆದುಕೊಂಡಿರುವುದು ವರದಿಯಾಗಿದೆ.
ನಕ್ಸಲ್ ಹೋರಾಟಗಾರ್ತಿ ಶೃಂಗೇರಿಯ ಶ್ರೀಮತಿ ಎಂಬುವವರನ್ನು ವಶಕ್ಕೆ ಪಡೆದಿರುವ ಪೊಲೀಸರು ಮಾರ್ಚ್ 04 ರಂದು ಬೆಳಿಗ್ಗೆ 10.30ಕ್ಕೆ ತೀರ್ಥಹಳ್ಳಿ ಜೆಎಂಎಫ್‌ಸಿ ಕೋರ್ಟ್‌ಗೆ ಹಾಜರುಪಡಿಸಿದ್ದಾರೆಂದು ತಿಳಿದುಬಂದಿದೆ.
ಕೇರಳದ ತ್ರಿಶೂರ್ ಜಿಲ್ಲೆಯ ವಿಯೂರ್ ಜೈಲಿನಿಂದ ʼಬಾಡಿ ವಾರೆಂಟ್ʼ ಮೇಲೆ ತೀರ್ಥಹಳ್ಳಿಗೆ ಕರೆತಂದಿರುವ ಪೊಲೀಸರು, ಆಗುಂಬೆ ಪೊಲೀಸ್ ಠಾಣೆ ಪ್ರಕರಣ ಸಂಬಂಧ ಕೋರ್ಟ್‌ಗೆ ಹಾಜರುಪಡಿಸಿರುವುದಾಗಿ ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಪಿಲಿಚಾಮುಂಡಿ ದೇವಸ್ಥಾನದ ಭಂಡಾರ ಮನೆ ಧ್ವಂಸ; ಮೂವರ ಬಂಧನ
ಪೊಲೀಸರು ಶ್ರೀಮತಿಯನ್ನು ಹೆಚ್ಚಿನ ಭದ್ರತೆಯಲ್ಲಿ ಕೇರಳದಿಂದ ಶಿವಮೊಗ್ಗ ಜೈಲಿಗೆ ಕರೆ ತಂದಿದ್ದಾರೆ. ನಕ್ಸಲ್ ಹೋರಾಟದಲ್ಲಿ ಬಿ ಜಿ ಕೃಷ್ಣಮೂರ್ತಿ ಜತೆ ಶೃಂಗೇರಿಯ ಶ್ರೀಮತಿ ಗುರುತಿಸಿಕೊಂಡಿದ್ದರು.
2023 ನವೆಂಬರ್ 7 ರಂದು ಶ್ರೀಮತಿಯನ್ನು ಕೇರಳ ಪೊಲೀಸರು ಬಂಧಿಸಿದ್ದರು. ವಿಚಾರಣೆ ಬಳಿಕ ಅವರನ್ನು ತ್ರಿಶೂರ್ ಜೈಲಿನಲ್ಲಿ ಇರಿಸಿದ್ದರು ಎನ್ನಲಾಗಿದೆ.
