ಚಾಮರಾಜನಗರ ಜಿಲ್ಲೆಯ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸೋಮವಾರ ಕಾಡ್ಗಿಚ್ಚು ಉಂಟಾಗಿದ್ದು, 50 ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ನಾಶವಾಗಿರುವ ಘಟನೆ ನಡೆದಿದೆ.
“ಇದು ವಿಧ್ವಂಸಕ ಕೃತ್ಯವಾಗಿದ್ದು, ಬಿಆರ್‌ಟಿಯ ಪುಣಜನೂರು ವಲಯದ ಮೂರು ಸ್ಥಳಗಳಲ್ಲಿ ಸೋಮವಾರ ದುಷ್ಕರ್ಮಿಗಳು ಅರಣ್ಯ ಪ್ರದೇಶದೊಳಗೆ ಬೆಂಕಿ ಹಚ್ಚಿದ್ದಾರೆ. ಸ್ಥಳೀಯರೇ ಬೆಂಕಿ ಹಾಕಿರುವ ಅನುಮಾನ ಇದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಿದ್ದೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದೇವೆ” ಎಂದು ಬಿಆರ್‌ಟಿ ಹುಲಿ ಮೀಸಲು ನಿರ್ದೇಶಕ ದೀಪ್ ಜೆ ಕಾಂಟ್ರ್ಯಾಕ್ಟರ್ ತಿಳಿಸಿದ್ದಾರೆ.
ಬೆಂಕಿ ಅವಘಡಗಳ ಬಗ್ಗೆ ತಿಳಿದ ಕೂಡಲೇ ಅರಣ್ಯ ಸಿಬ್ಬಂದಿ ತ್ವರಿತವಾಗಿ ಕಾರ್ಯಪ್ರವೃತ್ತರಾಗಿ ಎರಡು ಸ್ಥಳಗಳಲ್ಲಿ ಬೆಂಕಿಯನ್ನು ಯಶಸ್ವಿಯಾಗಿ ನಂದಿಸಿದರು. ಮತ್ತೊಂದು ಸ್ಥಳದಲ್ಲಿ ಬೆಂಕಿಯನ್ನು ನಂದಿಸುವ ಪ್ರಯತ್ನಗಳು ನಡೆಯುತ್ತಿವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಕಾಡಾನೆ ದಾಳಿ; ಕೂದಲೆಳೆ ಅಂತರದಲ್ಲಿ ಕೂಲಿಕಾರ್ಮಿಕ ಪಾರು
“ಅರಣ್ಯ ನಾಶವಾಗಿರುವುದನ್ನು ಮೌಲ್ಯಮಾಪನ ಮಾಡಿದ ಬಳಿಕ ಹಾನಿ ಪ್ರದೇಶದ ನಿಖರ ವ್ಯಾಪ್ತಿ ತಿಳಿಯುತ್ತದೆ” ಎಂದು ಡಿಸಿಎಫ್ ಹೇಳಿದರು.
