ಚೀನಾದೊಂದಿಗೆ ಉಚಿತ ಸೇನಾ ನೆರವು ಸ್ವೀಕರಿಸುವ ಒಪ್ಪಂದ ಮಾಡಿಕೊಂಡ ನಂತರ ಭಾರತೀಯ ಸೇನೆಗೆ ಮಾಲ್ಡೀವ್ಸ್ ಸಂಪೂರ್ಣ ತಡೆಯೊಡ್ಡಲು ನಿರ್ಧರಿಸಿದೆ.
ಮೇ 10ರ ನಂತರ ಸೇನಾ ಉಡುಪು ಮಾತ್ರವಲ್ಲ ನಾಗರಿಕ ಉಡುಪುಗಳಲ್ಲೂ ನಮ್ಮ ದ್ವೀಪಕ್ಕೆ ಕಾಲಿಡುವಂತಿಲ್ಲ ಎಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ತಿಳಿಸಿದ್ದಾರೆ.
ಭಾರತೀಯರ ಅಧಿಕಾರಿಗಳ ತಂಡ ಮಾಲ್ಡೀವ್ಸ್ ನ ಮೂರು ವಾಯುಪಡೆಯ ವಿಭಾಗದಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಮೊಹಮ್ಮದ್ ಮೊಯಿಝು ಈ ಹೇಳಿಕೆ ನೀಡಿದ್ದಾರೆ. ಮಾರ್ಚ್ 10ರೊಳಗೆ ಎರಡೂ ರಾಷ್ಟ್ರಗಳು ತಮ್ಮ ಸೇನಾ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳಬೇಕು ಗಡುವಿನ ಒಪ್ಪಂದವಿದೆ.
ಸಮಾರಂಭವೊಂದರಲ್ಲಿ ಮಾತನಾಡಿದ ಮೊಯಿಝು, ಕೆಲವರು ಭಾರತೀಯ ಪಡೆಗಳನ್ನು ಮಾಲ್ಡೀವ್ಸ್‌ನಿಂದ ಉಚ್ಚಾಟಿಸಿರುವುದಕ್ಕೆ ಸರ್ಕಾರದ ಯಶಸ್ಸು ಎಂದು ಸುಳ್ಳುಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ತಿಳಿಸಿದರು.
“ಭಾರತೀಯ ಪಡೆ ನಿರ್ಗಮಿಸುತ್ತಿಲ್ಲ, ಅವರು ತಮ್ಮ ಸೇನಾ ಉಡುಪುಗಳೊಂದಿಗೆ ಬದಲಿಸಿ ವಾಪಸಾಗುತ್ತಾರೆ. ನಮ್ಮ ಹೃದಯದೊಳಗೆ ಅನುಮಾನಗಳನ್ನು ತುಂಬಿಕೊಳ್ಳುವ ಹಾಗೂ ಸುಳ್ಳುಗಳ ನ್ನು ಹಂಚಿಕೊಳ್ಳುವ ಆಲೋಚನೆಗಳಲ್ಲಿ ತೊಡಗಬಾರದು” ಎಂದು ಮೊಯಿಝು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸುಳ್ಳು ಸೃಷ್ಟಿಸಿ, ಬೆಂಕಿ ಹಚ್ಚಿ, ಭಯ ಬಿತ್ತುವವರು ಯಾರು?
“ಸೇನಾ ವಸ್ತ್ರ ಹಾಗೂ ನಾಗರಿಕ ಉಡುಪುಗಳಲ್ಲೂ ಭಾರತೀಯ ಪಡೆಗಳು ಮೇ 10 ರ ನಂತರ ಬರುವಂತಿಲ್ಲ. ಭಾರತೀಯ ಸೇನೆ ತಮ್ಮ ಸಾಮಾನ್ಯ ಬಟ್ಟೆಯನ್ನು ಧರಿಸಿ ಈ ದೇಶದಲ್ಲಿ ಉಳಿದುಕೊಳ್ಳುವಂತಿಲ್ಲ. ನಾನು ವಿಶ್ವಾಸದೊಂದಿಗೆ ಹೇಳುತ್ತಿದ್ದೇನೆ” ಎಂದು ಮಾಲ್ಡೀವ್ಸ್ ಅಧ್ಯಕ್ಷರು ಹೇಳಿದರು.
“ನಾವು ಇದನ್ನು ಸಾಧಿಸುತ್ತೇವೆಂದು ನನಗೆ ಆತ್ಮವಿಶ್ವಾಸವಿದೆ. ಕೆಲವೊಂದು ನಿಯಮಾವಳಿಗಳ ಕಾರಣದಿಂದ ಈ ಯೋಜನೆ ಜಾರಿಗೊಳಿಸಲು ತಡವಾಗಲಿದೆ” ಎಂದು ಮೊಹಮ್ಮದ್ ಮುಯಿಝು ತಿಳಿಸಿದರು.
ಜನವರಿಯಲ್ಲಿ ಭಾರತದ ಪ್ರಧಾನಿ ಲಕ್ಷದ್ವೀಪಕ್ಕೆ ಭೇಟಿ ಕೊಟ್ಟ ನಂತರ ಎರಡೂ ರಾಷ್ಟ್ರಗಳಲ್ಲಿ ಉಂಟಾದ ರಾಜತಾಂತ್ರಿಕ ವಿವಾದಗಳ ನಂತರ ಮಾಲ್ಡೀವ್ಸ್ ಅಧ್ಯಕ್ಷರ ಹೇಳಿಕೆ ಹೊರಬಿದ್ದಿದೆ.
ಕಳೆದ ಕೆಲವು ವರ್ಷಗಳಿಂದ ಎರಡು ಹೆಲಿಕಾಪ್ಟರ್ ಹಾಗೂ ಡ್ರೋನರ್ ವಾಯುಪಡೆ ಬಳಸಿಕೊಂಡು ಜನರಿಗೆ ಮಾನವೀಯ ಹಾಗೂ ವೈದ್ಯಕೀಯ ಸ್ಥಳಾಂತರಿಸುವಿಕೆಯ ಸೇವೆ ಒದಗಿಸಲು ಭಾರತೀಯ ಮೂರು ವಿಭಾಗಗಳ 88 ಸೇನಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದೆ.
ಫೆ.2 ರಂದು ದೆಹಲಿಯಲ್ಲಿ ನಡೆದ ಎರಡೂ ದೇಶಗಳ ಉನ್ನತ ಮಟ್ಟದ ಸಭೆಯ ನಂತರ ಉಭಯ ದೇಶಗಳ ಸೇನಾ ಪಡೆ ಮೇ 10ರೊಳಗೆ ವಾಪಸ್ ಆಗಲಿವೆ. ಮೊದಲ ಹಂತವು ಮಾ.10ರೊಳಗೆ ಪೂರ್ಣಗೊಳ್ಳಬೇಕಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಅಧಿಕಾರ ಸ್ವೀಕರಿಸಿದ ಮೊಯಿಝು ಭಾರತದ ಪಡೆಗಳನ್ನು ತಮ್ಮ ದ್ವೀಪ ರಾಷ್ಟ್ರದಿಂದ ವಾಪಸ್ ಕಳಿಸುವುದಾಗಿ ಜನತೆಗೆ ವಾಗ್ದಾನ ನೀಡಿದ್ದರು.
