ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಹಳೇ ಮೈಸೂರು ಭಾಗಗಳಲ್ಲಿ ಬೆಂಕಿಯ ಕಾವು ಏರುತ್ತಿದ್ದು, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ 50ಕ್ಕೂ ಹೆಚ್ಚು ಅಗ್ನಿಶಾಮಕ ಕರೆಗಳಿಗೆ ಸ್ಪಂದಿಸುವ ಕಠಿಣ ಕೆಲಸವನ್ನು ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಹೊಂದಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿಗೆ ಹಗಲಿನಲ್ಲಿ ಸರಾಸರಿ 30ರಿಂದ 35 ಕರೆಗಳು ಬರುತ್ತಿದ್ದು, ರಾತ್ರಿಯಲ್ಲಿ ಈ ಸಂಖ್ಯೆ 10 ರಷ್ಟಿರುವುದಾಗಿ ತಿಳಿಸಿದ್ದಾರೆ.
“ಸಾರ್ವಜನಿಕರು, ರೈತರು ಮತ್ತು ವ್ಯಾಪಾರ ಸಂಸ್ಥೆಗಳ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಾಗಿ ಹೆಚ್ಚಿನ ಬೆಂಕಿ ಸಂಭವಿಸುತ್ತಿದೆ. ಕಡಿಮೆ ತೇವಾಂಶದಿಂದಾಗಿ ಬೇಸಿಗೆಯಲ್ಲಿ ದಹನಕಾರಿ ವಸ್ತುಗಳ ಸಾಮಾನ್ಯ ಬೆಂಕಿ ಹೆಚ್ಚಾಗಿರುತ್ತದೆ. ಬೇಸಿಗೆಯಲ್ಲಿ ಅರಣ್ಯ ಪ್ರದೇಶಗಳ ಬಳಿ ಬೆಂಕಿ ಕಾಣಿಸಿಕೊಳ್ಳುವುದು ಸವಾಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಅಗ್ನಿಶಾಮಕ ಕರೆಗಳಿಗೆ ಸ್ಪಂದಿಸಲು ಅಗ್ನಿಶಾಮಕ ವಾಹನಗಳ ಕೊರತೆ ಉಂಟಾಗಿದ್ದು, ಇಲಾಖೆ ಎದುರಿಸುತ್ತಿರುವ ದೊಡ್ಡ ಸವಾಲಾಗಿದೆ. ಇಲಾಖೆಯ ಒಡೆತನದ ಹೆಚ್ಚಿನ ಅಗ್ನಿಶಾಮಕ ಎಂಜಿನ್ ವಾಹನಗಳು 15 ವರ್ಷಗಳಿಗಿಂತ ಹಳೆಯವು ಮತ್ತು ಅಂತಹ ವಾಹನಗಳನ್ನು ಬಳಸದಂತೆ ಕೇಂದ್ರ ಸರ್ಕಾರದ ನಿರ್ದೇಶನದಿಂದಾಗಿ ಫಿಟ್ನೆಸ್ ಪ್ರಮಾಣಪತ್ರದ ನಂತರ ಮರು ನೋಂದಣಿಯಾಗಿಲ್ಲ. ಆ ವಾಹನಗಳನ್ನು ಅಗ್ನಿಶಾಮಕ ಕೇಂದ್ರಗಳಲ್ಲಿ ನಿಲ್ಲಿಸಲಾಗಿದ್ದು, ಕೆಲವು ಮಾತ್ರ ಕರೆಗಳಿಗೆ ಸ್ಪಂದಿಸಲು ಬಳಸಲಾಗುತ್ತಿದೆ” ಎಂದು ಅಗ್ನಿಶಾಮಕ ಸಿಬ್ಬಂದಿಗಳು ತಿಳಿಸಿದ್ದಾರೆ.
ಬೇಸಿಗೆಯಲ್ಲಿ ಆಗಾಗ್ಗೆ ಬೆಂಕಿಯ ಕರೆಗಳು ಬರುತ್ತಿರುವುದರಿಂದ ಸಿಬ್ಬಂದಿಗಳು ಸದಾ ಎಚ್ಚರವಾಗಿರುವಂತಾಗಿದೆ.
“ಸಾರ್ವಜನಿಕರು ಮತ್ತು ಸಂಬಂಧಪಟ್ಟ ಜನರಲ್ಲಿ ಅಗ್ನಿ ಸುರಕ್ಷತಾ ಜಾಗೃತಿಯ ಕೊರತೆಯಿಂದ ಬೆಂಕಿ ಘಟನೆಗಳಿಗೆ ಕಾರಣವಾಗುತ್ತಿದೆ” ಎಂದು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಚಂದನ್ ಪಿ ಹೇಳುತ್ತಾರೆ.
“ನಿವಾಸಿಗಳಿಗೆ ಅಗ್ನಿ ಸುರಕ್ಷತೆಯ ಬಗ್ಗೆ ಜಾಗೃತಿ ಇಲ್ಲ. ಏಕೆಂದರೆ ಅವರು ತಮ್ಮ ನಿವಾಸಗಳ ಬಳಿ ಕಸಕ್ಕೆ ಬೆಂಕಿ ಹಚ್ಚುತ್ತಲೇ ಇರುತ್ತಾರೆ. ಇದು ನೆರೆಯ ಅಥವಾ ಪಕ್ಕದ ಪ್ರದೇಶಗಳಿಗೆ ಬೆಂಕಿಯನ್ನು ಹರಡುತ್ತದೆ. ಕೆಲವು ರೈತರೂ ಕೂಡ ತಮ್ಮ ಹೊಲಗಳಲ್ಲಿ ಕಬ್ಬನ್ನು ಸುಡುವುದನ್ನು ನಿಲ್ಲಿಸಿಲ್ಲ. ಇಂತಹ ನಿರ್ಲಕ್ಷ್ಯಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಬೆಂಕಿ ಅವಘಡ ಪ್ರಕರಣಗಳಿಗೆ ಕಾರಣವಾಗುತ್ತಿದೆ” ಎಂದು ಹೇಳಿದರು.
“ಇದಲ್ಲದೆ, ನಾವು ನೆಲದ ಬೆಂಕಿ ಎಂದು ಕರೆಯುವುದು “ರಸ್ತೆ ಬದಿಯಲ್ಲಿ ಒಣಗಿದ ಹುಲ್ಲು ಮತ್ತು ಎಲೆಗಳ ಮೇಲೆ ಎಸೆಯುವ ಸಿಗರೇಟ್/ಬೀಡಿಗಳಿಂದ ಬೆಂಕಿ ಹೊತ್ತಿಕೊಳ್ಳುತ್ತದೆ. ಇಂತಹ ಘಟನೆಗಳು ಅರಣ್ಯ ಪ್ರದೇಶಗಳ ಸಮೀಪದಲ್ಲಿ ನಡೆದರೆ, ಬೇಸಿಗೆ ಕಾಲಾವಾಗಿರುವುದರಿಂದ ಬೆಂಕಿ ಕಾಡಿಗೆ ಹರಡಬಹುದು. ಆದ್ದರಿಂದ, ಸಾರ್ವಜನಿಕರು ಜಾಗರೂಕರಾಗಿರಬೇಕು. ನಿರ್ಲಕ್ಷ್ಯ ವಹಿಸಬಾರದು” ಎಂದು ಅಧಿಕಾರಿ ಸಲಹೆ ನೀಡಿದರು.
“ಇತ್ತೀಚೆಗೆ, ಕೈಗಾರಿಕೆಗಳಲ್ಲಿ ಎರಡು ಬೆಂಕಿ ಘಟನೆಗಳು ವರದಿಯಾಗಿವೆ. ನಾವು ಗಮನಿಸಿರುವುದು ಏನೆಂದರೆ, ಬೆಂಕಿಯ ಕರೆಗಳಿಗೆ ಹಾಜರಾಗಲು ಅವರು ಸಾಕಷ್ಟು ನೀರಿನ ಸಂಗ್ರಹವನ್ನು ಮಾಡಲಿಲ್ಲ. ಬಿಸಾಡಲಾದ ಗಾಜಿನ ಬಾಟಲಿಗಳಿಗೆ ಸೂರ್ಯನ ಕಿರಣಗಳು ಗೋಚರವಾಗುವುದರಿಂದ ಶಾಖಕ್ಕೆ ಬಾಟಲಿ ಸಿಡಿದು ಕೂಡ ಬೆಂಕಿ ಹೊತ್ತಿಕೊಳ್ಳಲು ಕಾರಣವಾಗಿದೆ. ಬೇಸಿಗೆಯಲ್ಲಿ ಕಸದ ರಾಶಿಗಳಲ್ಲಿ ಬೆಂಕಿ ಅಪಘಾತಗಳು ಸಂಭವಿಸುತ್ತವೆ. ಆದ್ದರಿಂದ, ಬೇಸಿಗೆಯಲ್ಲಿ ಬೆಂಕಿಯನ್ನು ನಿಭಾಯಿಸುವಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸುವ ಮೂಲಕ ಸಹಕರಿಸಬೇಕು” ಎಂದು ಅಧಿಕಾರಿ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಎಕ್ಸ್‌ಪ್ರೆಸ್ ಕೆನಾಲ್‌ಗೆ ಮಾಧುಸ್ವಾಮಿ ವಿರೋಧ
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಆರ್‌ಎಫ್‌ಒ, “ಹಳೆಯ ಅಗ್ನಿಶಾಮಕ ಎಂಜಿನ್ ವಾಹನಗಳನ್ನು ಬಳಸುತ್ತಿಲ್ಲ” ಎಂದು ಹೇಳಿದರು.
