ಯುಎಸ್‌ ಚುನಾವಣೆ | ಟ್ರಂಪ್‌, ಬೈಡನ್‌ಗೆ ದೇಣಿಗೆ ನೀಡಲ್ಲ ಎಂದ ಎಲಾನ್‌ ಮಸ್ಕ್‌

Date:

Advertisements

ಯುಎಸ್ ಚುನಾವಣೆಯಲ್ಲಿ ಟೆಸ್ಲಾ ಸಿಇಒ, ಬಿಲಿಯನೇರ್ ಎಲಾನ್‌ ಮಸ್ಕ್‌ ಅವರು ಅಧ್ಯಕ್ಷ ಸ್ಥಾನಕ್ಕೆ ಕಣದಲ್ಲಿರುವ ಡೊನಾಲ್ಡ್ ಟ್ರಂಪ್‌ಗೆ ದೇಣಿಗೆ ನೀಡಲಿದ್ದಾರೆ ಎಂದು ಸುದ್ದಿಯಾಗಿದೆ. ಫ್ಲೋರಿಡಾದಲ್ಲಿ ಎಲಾನ್ ಮಸ್ಕ್‌ರನ್ನು ಟ್ರಂಪ್‌ ಭೇಟಿಯಾಗಿದ್ದ ಹಿನ್ನೆಲೆಯಲ್ಲಿ ಈ ಊಹಾಪೋಹಗಳು ಎದ್ದಿವೆ.

ಆದರೆ, ಈ ವದಂತಿಯನ್ನು ಎಲಾನ್‌ ಮಸ್ಕ್‌ ನಿರಾಕರಿಸಿದ್ದಾರೆ. “ನಾನು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ಗೆ ಆಗಲಿ ಅಥವಾ ಡೆಮೊಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್‌ಗೆ ಆಗಲಿ ಈ ವರ್ಷದ ಚುನಾವಣೆಯಲ್ಲಿ ದೇಣಿಗೆಯನ್ನು ನೀಡುವುದಿಲ್ಲ,” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬೈಡನ್ ಜೊತೆ ಸಾರ್ವತ್ರಿಕ ಚುನಾವಣೆಯಲ್ಲಿರುವ ಟ್ರಂಪ್‌ಗೆ ಗಮನಾರ್ಹ ನಗದು ಅನಾನುಕೂಲತೆ ಇದೆ ಎಂದು ವರದಿಗಳು ಹೇಳುತ್ತದೆ. ಹೀಗಿರುವಾಗ ಎಲಾನ್ ಮಸ್ಕ್‌ನ ಈ ಹೇಳಿಕೆಯು ಟ್ರಂಪ್‌ ಮೇಲೆ ಪರಿಣಾಮ ಬೀರುವುದು ಸ್ಪಷ್ಟ.

Advertisements

ಟ್ರಂಪ್‌ನ ಕೊನೆಯ ರಿಪಬ್ಲಿಕನ್ ಪ್ರತಿಸ್ಪರ್ಧಿ, ನಿಕ್ಕಿ ಹ್ಯಾಲೆ ಬುಧವಾರ ರೇಸ್‌ನಿಂದ ಹೊರಬಿದಿದ್ದಾರೆ. ಈಗ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಜೋ ಬೈಡನ್‌ ಹಾಗೂ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ನಡುವೆ ತೀವ್ರ ಪೈಪೋಟಿ ನಡೆಯುವುದು ಖಚಿತವಾಗಿದೆ.

ಇನ್ನು ವಿಶ್ವದಲ್ಲೇ ಎರಡನೇ ಅತೀ ಶ್ರೀಮಂತ ವ್ಯಕ್ತಿಯಾಗಿರುವ ಎಲಾನ್‌ ಮಸ್ಕ್‌ರನ್ನು ಟ್ರಂಪ್ ಫ್ಲೋರಿಡಾದಲ್ಲಿ ಭೇಟಿಯಾಗಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ತನ್ನ ಪ್ರಚಾರಕ್ಕೆ ನಗದು ಕೊರತೆಯನ್ನು ಎದುರಿಸುತ್ತಿರುವ ಟ್ರಂಪ್‌ ಈಗ ಮಸ್ಕ್ ಬಳಿ ದೇಣಿಗೆ ಕೇಳಲು ಭೇಟಿಯಾಗಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಈಗ ಎಲಾನ್‌ ಮಸ್ಕ್‌ ಹೇಳಿಕೆಯಿಂದಾಗಿ ಈ ಬಿಲಿಯನೇರ್‌ ನೇರವಾಗಿ ಅಭ್ಯರ್ಥಿಗಳಿಗೆ ದೇಣಿಗೆ ನೀಡುವುದಿಲ್ಲ ಎಂಬುವುದು ಸ್ಪಷ್ಟವಾಗಿದೆ.

ಈ ಹಿಂದೆ ವಿಶ್ವದ ಶ್ರೀಮಂತ ವ್ಯಕ್ತಿಯಾಗಿದ್ದ ಟ್ವಿಟ್ಟರ್ (ಎಕ್ಸ್) ಮಾಲೀಕ ಎಲಾನ್ ಮಸ್ಕ್ ಇತ್ತೀಚಿಗಷ್ಟೆ ತನ್ನ ಸ್ಥಾನವನ್ನು ಕಳೆದುಕೊಂಡಿದ್ದಾರೆ. 227.6 ಬಿಲಿಯನ್ ಡಾಲರ್ ಹೊಂದಿರುವ ಎಲ್‌ವಿಎಂಎಚ್‌ ಸಿಇಒ ಮಸ್ಕ್‌ ಅನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೆ ಏರಿದ್ದಾರೆ. ಫೋರ್ಬ್ಸ್ ರಿಯಲ್ ಟೈಮ್ ಪ್ರಕಾರ ಮಸ್ಕ್ ಆದಾಯ ಸದ್ಯ 195.8 ಬಿಲಿಯನ್ ಡಾಲರ್ ಆಗಿದೆ.

ಇನ್ನು 2022ರಲ್ಲಿ ಎಲಾನ್ ಮಸ್ಕ್ ರಿಪಬ್ಲಿಕನ್ ಕಾಂಗ್ರೆಸ್‌ನ ಅಭ್ಯರ್ಥಿಗೆ ಮತ ಹಾಕುವಂತೆ ಕರೆ ನೀಡಿದ್ದರು. ಫೆಡರಲ್ ಎಲೆಕ್ಷನ್ ಕಮಿಷನ್ ಪ್ರಕಾರ 2009ರಿಂದ ಎಲಾನ್ ಮಸ್ಕ್ ರಾಜಕಾರಣಿಗಳಿಗೆ ಅಥವಾ ಪಕ್ಷಗಳಿಗೆ 1 ಮಿಲಿಯನ್ ಡಾಲರ್‌ಗಿಂತ ಕಡಿಮೆ ದೇಣಿಗೆ ನೀಡಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತದ ಮೇಲೆ ಅಮೆರಿಕ ದ್ವೇಷ: ಟ್ರಂಪ್‌ಗೆ ನೊಬೆಲ್ ನೀಡುವಂತೆ ಮೋದಿ ಶಿಫಾರಸು ಮಾಡಿದ್ರೆ ಎಲ್ಲವೂ ಸರಿಹೋಗತ್ತ?

ಪಾಕಿಸ್ತಾನವು 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್‌ ಅವರನ್ನು ಶಿಫಾರಸು ಮಾಡುವುದಾಗಿ...

ಗಾಝಾದಲ್ಲಿ ನರಮೇಧ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಇಸ್ರೇಲ್ ರಾಯಭಾರಿ ನಡುವೆ ವಾಕ್ಸಮರ

ಗಾಝಾದಲ್ಲಿ 'ಅಲ್‌ಝಝೀರಾ' ಸಂಸ್ಥೆಯ ಪತ್ರಕರ್ತನನ್ನು ಇಸ್ರೇಲ್ ಹತ್ಯೆಗೈದಿದೆ. ಈ ಹತ್ಯೆಯನ್ನು ಕಾಂಗ್ರೆಸ್‌...

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

Download Eedina App Android / iOS

X