ಮಂಡ್ಯ | ಡಿಸ್ಟಿಲರಿ ಘಟಕಕ್ಕೆ ವಿರೋಧ: ನಿಮ್ಮ ಅಭಿಪ್ರಾಯವನ್ನೇ ವರದಿ ಸಲ್ಲಿಸುವೆ; ಡಿಸಿ ಭರವಸೆ

Date:

Advertisements

ಕೋರಮಂಡಲ ಸಕ್ಕರೆ ಕಾರ್ಖಾನೆಯ ಸುತ್ತಮುತ್ತಲಿನ ಸಾವಿರಾರು ಸಾರ್ವಜನಿಕರು, ರೈತಪರ ಹೋರಾಟಗಾರರು ಪರಿಸರ ಸ್ನೇಹಿಗಳು ಅಪಾಯಕಾರಿ ಘಟಕಗಳಾದ ಡಿಸ್ಟಿಲರಿ ಮತ್ತು ಎಥನಾಲ್ ಬೇಡವೇ ಬೇಡ ಎಂದ ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ ಕಾರಣ ಸಭೆಯಲ್ಲಿ ನಡೆದ ಅಭಿಪ್ರಾಯವನ್ನೇ ಸರ್ಕಾರಕ್ಕೆ ಪ್ರಾಮಾಣಿಕವಾಗಿ ವರದಿ ಸಲ್ಲಿಸುತ್ತೇನೆ ಎಂದು ಜಿಲ್ಲಾಧಿಕಾರಿ ಕುಮಾರ್ ತಿಳಿಸಿದರು.

ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲೂಕಿನ ಮಾಕವಳ್ಳಿ ಗ್ರಾಮದ ಸಮೀಪವಿರುವ ಕೋರಮಂಡಲ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಡಿಸ್ಟಿಲರಿ ಮತ್ತು ಎಥನಾಲ್ ಘಟಕ ನಿರ್ಮಾಣಕ್ಕೆ ಕಾರ್ಖಾನೆ ಮುಂದಾಗಿದೆ. ಈ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲು ಕಾರ್ಖಾನೆ ಬಳಿ ಸಾರ್ವಜನಿಕ ಸಭೆ ಕರೆಯಲಾಗಿತ್ತು. ಸಭೆಗೆ ಜಿಲ್ಲಾಧಿಕಾರಿ ಕುಮಾರ್‌ ಆಗಮಿಸುತ್ತಿದ್ದಂತೆ, ಕಾರ್ಖಾನೆಯ ಸುತ್ತಮುತ್ತಲಿನ ಗ್ರಾಮಗಳಾದ ಮಾಕವಳ್ಳಿ, ಕರೋಟಿ, ಕಾರಿಗನಹಳ್ಳಿ, ಮಾಣಿಕನಹಳ್ಳಿ, ವಡ್ಡರಹಳ್ಳಿ, ಹೆಗ್ಗಡಹಳ್ಳಿ, ಲಿಂಗಾಪುರ, ಚೌಡೇನಹಳ್ಳಿ, ರಾಮನಹಳ್ಳಿ, ಬಿಚೇನಹಳ್ಳಿ, ಮಲ್ಲೇನಹಳ್ಳಿ, ಕುಂದನಹಳ್ಳಿ ಗ್ರಾಮೀಣ ಭಾಗದ ರೈತರು ಕಾರ್ಖಾನೆಯ ಮುಖ್ಯದ್ವಾರದಲ್ಲೇ ವಿರೋಧಪಡಿಸಿದ್ದಾರೆ. ಕಾರ್ಖಾನೆಯ ವಿರುದ್ಧ ಘೋಷಣೆ ಕೂಗಿದ್ದಾರೆ.

ರೈತರೊಂದಿಗೆ ಮಾನತಾಡಿದ ಜಿಲ್ಲಾಧಿಕಾರಿ, “ನಿಮ್ಮ ಅಭಿಪ್ರಾಯ ಸಂಗ್ರಹಿಸಲೆಂದೇ ಬಂದಿದ್ದೇವೆ, ನೀವು ಏನು ಅಭಿಪ್ರಾಯ ವ್ಯಕ್ತಪಡಿಸುತ್ತೀರೋ ಆ ವರದಿಯನ್ನೇ ಯಾರ ಮುಲಾಜಿಗೂ ಬಗ್ಗದೆ ಸರ್ಕಾರಕ್ಕೆ  ಪ್ರಾಮಾಣಿಕವಾಗಿ ಸಲ್ಲಿಸುತ್ತೇನೆ” ಎಂಬ ಭರವಸೆಯ ನೀಡಿದ್ದಾರೆ. ನೂರಾರು ಮಹಿಳೆಯರು, ರೈತರು, ಪರಿಸರ ಪ್ರೇಮಿಗಳು ಒಂದೇ ಧ್ವನಿಯಲ್ಲಿ ಡಿಸ್ಟಿಲರಿ ಮತ್ತು ಎಥನಾಲ್ ಅಂತಹ ಅಪಾಯಕಾರಿ ಘಟಕ ಬೇಡವೇ ಬೇಡ ಎಂದು ಸಾಮೂಹಿಕವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisements

ಈ ವೇಳೆ ಮಾತನಾಡಿದ ರೈತರು ಮಹಿಳೆಯರು, ಈ ಸಕ್ಕರೆ ಕಾರ್ಖಾನೆ 20ವರ್ಷಗಳ ಕಾಲ. ಈ ಕಾರ್ಖಾನೆ ರೈತರಿಗೆ ವಿಷಕಾರಿ ಹಾರುವ ಬೂದಿ ಮತ್ತು ಕಾರ್ಖಾನೆಯ ಕೊಳಚೆ ನೀರನ್ನು ಹೊರ ಬಿಟ್ಟು ಹಳ್ಳಕೊಳ್ಳದ ಮೂಲಕ ಹಾದು ಹೋಗಿ ರೈತರ ಜೀವನಾಡಿ ಹೇಮಾವತಿ ನದಿಯನ್ನು ಕಲುಷಿತಗೊಳಿಸಿ. ನದಿಯ ನೀರನ್ನು ಹಾಳು ಮಾಡುತ್ತಾ ಸಾರ್ವಜನಿಕರ ಬದುಕಿಗೆ ಮಾರಕವಾಗಿದೆ. ಪ್ರಸ್ತುತ ಸಕ್ಕರೆ ಕಾರ್ಖಾನೆಯನ್ನು ನಿಭಾಯಿಸಲು ಆಗದೇ ಕಾನೂನು ನಿಯಮಾವಳಿಯನ್ನ ಗಾಳಿಗೆ ತೂರಿ ದಿನನಿತ್ಯ ಈ ಭಾಗದ ರೈತರಿಗೆ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವ ಕಾರ್ಖಾನೆಯ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಎಂದು ತಾಲೂಕು, ಜಿಲ್ಲಾ ಮತ್ತು ರಾಜ್ಯ ಪರಿಸರ ಮಾಲಿನ್ಯ ಅಧಿಕಾರಿಗಳಿಗೆ ಹೋರಾಟದ ಮೂಲಕ ಮನವಿ ಸಲ್ಲಿಸಿದರು ಕೋಣನ ಮಂದೆ ಕಿಂದೀರೀ ಬಾರಿಸಿದಂತೆ ನಮ್ಮ ಹೋರಾಟವನ್ನು ಪರಿಗಣಿಸಿಲ್ಲ ಎಂದು ಆರೋಪಿಸಿದರು.

ಇಂತಹ ಸಂದರ್ಭದಲ್ಲಿ ಪ್ರಸ್ತುತ ಸಕ್ಕರೆ ಕಾರ್ಖಾನೆ ಹೊರತುಪಡಿಸಿ ರೈತ ಸಂಕುಲಕ್ಕೆ ಅಪಾಯಕಾರಿ ಉಂಟುಮಾಡುವ ಘಟಕಗಳು ನಿರ್ಮಾಣವಾದರೆ, ಈ ಭಾಗದ ಸಾರ್ವಜನಿಕರ ಬದುಕು ನರಕವಾಗುವುದು ಶತಸಿದ್ಧ ಹಾಗಾಗಿ ಈ ಅಪಾಯಕಾರಿ ಘಟಕ ಬೇಡವೆಂದು ನೆರೆದಿದ್ದ ಎಲ್ಲರೂ ತಮ್ಮ ಅಭಿಪ್ರಾಯ ಹೊರಹಾಕಿ ಕೋರಮಂಡಲ ಸಕ್ಕರೆ ಕಾರ್ಖಾನೆಯ ವಿರುದ್ಧ ಕಿಡಿಕಾರಿದರು.

ವಿರೋಧವೆಂದೇ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ: ಜಿಲ್ಲಾಧಿಕಾರಿ ಕುಮಾರ್

ಸಾರ್ವಜನಿಕರ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಿ ವೇದಿಕೆಯಲ್ಲೇ ಮಾತನಾಡಿದ ಜಿಲ್ಲಾಧಿಕಾರಿ ಕುಮಾರ್, ಈ ಸಭೆಯಲ್ಲಿ ಬಹುತೇಕ ಸಾರ್ವಜನಿಕರು ಡಿಸ್ಟಿಲರಿ ಮತ್ತು ಎಥನಾಲ್ ಘಟಕ ನಿರ್ಮಾಣಕ್ಕೆ ವಿರೋಧ ಅಭಿಪ್ರಾಯಗಳು ಹೆಚ್ಚು ಬಂದ ಹಿನ್ನೆಲೆಯಲ್ಲಿ, ಸರ್ಕಾರಕ್ಕೆ ವಿರೋಧವಿದೆ ಎಂದೇ ಪ್ರಾಮಾಣಿಕವಾಗಿ ವರದಿ ಸಲ್ಲಿಸುತ್ತೇನೆ. ಇದರ ಬಗ್ಗೆ ಯಾವುದು ಸಂಶಯ ಬೇಡ ಎಂದು ನೆರೆದಿದ್ದ ಸಾವಿರಾರು ರೈತರಿಗೆ ತಿಳಿಸಿದರು.

ಮುಂದಿನ ದಿನಗಳಲ್ಲಿ ಕೋರಮಂಡಲ ಸಕ್ಕರೆ ಕಾರ್ಖಾನೆ ಪ್ರಸ್ತುತವಿರುವ ಸಕ್ಕರೆ ಕಾರ್ಖಾನೆ ಹೊರತುಪಡಿಸಿ ಜನರ ಬದುಕಿಗೆ ಮಾರಕವಾಗುವ ಘಟಕಕ್ಕೆ ನಿರ್ಮಾಣಕ್ಕೆ ಚಿಂತಿಸಿದರೆ, ಉಗ್ರ ಹೋರಾಟದ ಸದಾ ಸಿದ್ಧ ಎಂದು ಎಚ್ಚರಿಕೆ ನೀಡಿದ ರೈತರು, ಪರಿಸರ ವಿರೋಧಿಗಳಿಗೆ ಸಭೆಯಲ್ಲಿ ಛೀ ಮಾರಿ ಹಾಕಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ನಾಗರಾಜು, ತಹಸೀಲ್ದಾರ್ ನಿಸರ್ಗ ಪ್ರಿಯ, ತಾಲೂಕು ಕಾರ್ಯಾ ನಿರ್ವಹಣಾಧಿಕಾರಿ ಸತೀಶ್ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿ ಅಶ್ವಿನಿ, ಪರಿಸರ ಮಾಲಿನ್ಯ ಅಭಿಯಂತರರಾದ ಗೀತಾ, ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್, ತಾಲೂಕು ರೈತ ಸಂಘ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ರೈತಪರ ಹೋರಾಟಗಾರ ಕರೋಟಿ ತಮ್ಮಯ್ಯ, ಸಾಮಾಜಿಕ ಹೋರಾಟಗಾರ ಮಾಕವಳ್ಳಿ ಯೋಗೇಶ್, ಕೋರಮಂಡಲ ಸಿಕ್ಕರೆ ಕಾರ್ಖಾನೆ ವ್ಯವಸ್ಥಾಪಕ ರವಿ ರೆಡ್ಡಿ, ರೈತ ಹಿರಿಯ ಮುಖಂಡ ಸಿಂದುಘಟ್ಟ  ಮುದ್ದುಕುಮಾರ್, ರವಿ, ಶೆಟ್ಟಹಳ್ಳಿ ಕೃಷ್ಣೇಗೌಡ, ಕರೋಟಿ ಸುಬ್ರಹ್ಮಣ್ಯ, ಮಾಕವಳ್ಳಿ ದೇವರಸೇಗೌಡ, ದೊಡ್ಡೇಗೌಡ, ರಾಮೇಗೌಡ, ರಾಮನಹಳ್ಳಿ ಡೈರಿ ಕುಮಾರ ಆರ್.ಎಸ್. ಮಂಜೇಗೌಡ, ಕುಂದನಹಳ್ಳಿ ಶಿವಕುಮಾರ್, ವೆಂಕಟೇಶ್, ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರುಗಳು, ನೂರಾರು ಮಹಿಳೆಯರು, ರೈತಪರ ಹೋರಾಟಗಾರರು,ವಿವಿಧ ಸಂಘ ಸಂಸ್ಥೆಗಳು, ಪರಿಸರ ಪ್ರೇಮಿಗಳು, ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X