ನಿಗಮ-ಮಂಡಳಿಗಳ ಖಾಲಿ ಹುದ್ದೆಗಳಿಗೆ ನಡೆಸಲಾಗಿದ್ದ ಪರೀಕ್ಷೆಯ ಫಲಿತಾಂಶ ಪ್ರಕಟ

Date:

Advertisements

ಕಿಯೋನಿಕ್ಸ್ ಸೇರಿದಂತೆ ವಿವಿಧ ನಿಗಮಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಪರೀಕ್ಷೆಗಳ ಫಲಿತಾಂಶವನ್ನು ಮಾ.7ರಂದು ಸಂಜೆ ಪ್ರಕಟಿಸಲಾಗಿದೆ.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್, ಕರ್ನಾಟಕ ಆಹಾರ‌ ಮತ್ತು ನಾಗರಿಕ ಸರಬರಾಜು ನಿಗಮಗಳ ಒಟ್ಟು 670 ಖಾಲಿ ಹುದ್ದೆಗಳಿಗೆ‌ ಕೆಇಎ ಪರೀಕ್ಷೆ ನಡೆಸಿತ್ತು.

ಕೆಇಎ ಈ ಸದರಿ ಸಂಸ್ಥೆಗಳ ಹುದ್ದೆಗಳಿಗೆ ಕಳೆದ ಅಕ್ಟೋಬರ್ 28 ರಿಂದ ನವೆಂಬರ್ 25 ರ ವರೆಗೆ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ನಡೆಸಿತ್ತು.

Advertisements

ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ನಲ್ಲಿನ‌ ಲಿಂಕ್‌ಗೆ ಹೋಗಿ ಫಲಿತಾಂಶ ಪಡೆಯಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಕೆಇಎ ಈ ಕೆಳಗಿನ ನಿಗಮ, ಮಂಡಳಿಗಳು, ಸಂಸ್ಥೆಗಳ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡೆಸಿತ್ತು.

ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ’ದ ಹುದ್ದೆಗಳು
ಸಹಾಯಕ ವ್ಯವಸ್ಥಾಪಕರು : 10
ಗುಣಮಟ್ಟ ನಿರೀಕ್ಷಕರು : 23
ಹಿರಿಯ ಸಹಾಯಕರು (ಲೆಕ್ಕ): 33
ಹಿರಿಯ ಸಹಾಯಕರು: 57
ಕಿರಿಯ ಸಹಾಯಕರು: 263
ಒಟ್ಟು ಹುದ್ದೆಗಳು : 386

ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹುದ್ದೆಗಳು
ಕಲ್ಯಾಣ ಅಧಿಕಾರಿ : 12
ಕ್ಷೇತ್ರ ನಿರೀಕ್ಷಕರು : 60
ಪ್ರಥಮ ದರ್ಜೆ ಸಹಾಯಕರು: 12
ಆಪ್ತ ಸಹಾಯಕರು : 02
ದ್ವಿತೀಯ ದರ್ಜೆ ಸಹಾಯಕರು: 100.
ಒಟ್ಟು ಹುದ್ದೆಗಳು : 186

ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿ
ಸಹಾಯಕ ವ್ಯವಸ್ಥಾಪಕರು (ತಾಂತ್ರಿಕ)- ಗ್ರೂಪ್‌ ಬಿ : 4
ಸಹಾಯಕ ವ್ಯವಸ್ಥಾಪಕರು (ತಾಂತ್ರಿಕೇತರ)-ಗ್ರೂಪ್‌ ಬಿ : 2
ಆಪ್ತ ಕಾರ್ಯದರ್ಶಿ – ಗ್ರೂಪ್ ಸಿ : 1
ಹಿರಿಯ ಸಹಾಯಕರು (ತಾಂತ್ರಿಕ) ಗ್ರೂಪ್‌ ಸಿ : 4
ಹಿರಿಯ ಸಹಾಯಕರು (ತಾಂತ್ರಿಕೇತರ) ಗ್ರೂಪ್ ಸಿ : 3
ಸಹಾಯಕರು (ತಾಂತ್ರಿಕ) ಗ್ರೂಪ್‌ ಸಿ: 6
ಸಹಾಯಕರು (ತಾಂತ್ರಿಕೇತರ) ಗ್ರೂಪ್ ಸಿ : 6

ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್ ಲಿಮಿಟೆಡ್’ನ ಹುದ್ದೆಗಳು
ಸಹಾಯಕ ವ್ಯವಸ್ಥಾಪಕರು : 23
ಮೇಲ್ವಿಚಾರಕರು : 23
ಪದವೀಧರ ಗುಮಾಸ್ತರು : 6
ಗುಮಾಸ್ತರು : 14
ಲೆಕ್ಕಗುಮಾಸ್ತರು : 06
ಸೇಲ್ಸ್‌ ಇಂಜಿನಿಯರ್ : 04
ಸೇಲ್ಸ್‌ ಮೇಲ್ವಿಚಾರಕರು: 19
ಮಾರಾಟ ಪ್ರತಿನಿಧಿ : 6

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ಪಂಚ ಗ್ಯಾರಂಟಿ ಯೋಜನೆಗಳ ಜಾರಿಯಿಂದ ಆರ್ಥಿಕ ಸಬಲೀಕರಣ; ಸಚಿವ ಡಿ.ಸುಧಾಕರ್ ಅಭಿಮತ

"ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಜಾರಿಗೆ ತಂದ ಪಂಚ ಗ್ಯಾರಂಟಿ...

ದಾವಣಗೆರೆ | ಹಿರೇಗಂಗೂರು ಡಾ.ಬಿಆರ್ ಅಂಬೇಡ್ಕರ್ ಪ್ರತಿಮೆ ಬಳಿ ಹಾಗೂ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೇಗಂಗೂರು ಗ್ರಾಮದಲ್ಲಿರುವ ಸಂವಿಧಾನ ಶಿಲ್ಪಿ ಡಾ....

ದಾವಣಗೆರೆ | ಸರ್ಕಾರಿ ಶಾಲೆ ಮುಚ್ಚುವಿಕೆ ವಿರೋಧಿಸಿ ಎಐಡಿಎಸ್‍ಒ 50 ಲಕ್ಷ ಸಹಿ ಸಂಗ್ರಹ; ಮುಖ್ಯಮಂತ್ರಿಗಳಿಗೆ ಸಲ್ಲಿಕೆ

ಕರ್ನಾಟಕ ರಾಜ್ಯ ಸರ್ಕಾರವು 6,200 ಸರ್ಕಾರಿ ಶಾಲೆಗಳನ್ನು "ವಿಲೀನ"ಗೊಳಿಸುವ ಹೆಸರಿನಲ್ಲಿ ಮುಚ್ಚಲು...

Download Eedina App Android / iOS

X