ತುಮಕೂರು | ಗಮನ ಸೆಳೆದ ಸಿದ್ಧಗಂಗಾ ಮಠದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ 

Date:

Advertisements

ಐತಿಹಾಸಿಕ ಪ್ರಸಿದ್ಧ ಸಿದ್ಧಗಂಗಾ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಸರ್ಕಾರಿ ಇಲಾಖೆಗಳು ಹಾಗೂ ಖಾಸಗಿ ಸಂಸ್ಥೆಗಳ ಜನೋಪಯೋಗಿ ಮಾಹಿತಿಯನ್ನು ರೈತರು, ಜನಸಾಮಾನ್ಯರಿಗೆ ಒದಗಿಸುವ ಹಾಗೂ ಕೈಗಾರಿಕೆಗೆ ಚೈತನ್ಯ ತುಂಬುವ ಹಾಗೂ ಯುವಸಮೂಹ, ರೈತರಿಗೆ ಮಾಹಿತಿ ಕೋಶದ ಭಂಡಾರವಾಗುವ ಮೂಲಕ ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ.

ಗ್ರಾಮೀಣ ಪ್ರದೇಶದ ರೈತರು, ಬಡವರ ಶ್ರೇಯೋಭಿವೃದ್ಧಿಗಾಗಿ ತುಡಿತ ಹೊಂದಿದ್ದ ಲಿಂಗೈಕ್ಯ ಡಾ. ಶಿವಕುಮಾರ್ ಸ್ವಾಮೀಜಿ 1‌,964ರಲ್ಲಿ ಈ ವಿಶೇಷ ವಸ್ತು ಪ್ರದರ್ಶನ ಆರಂಭಿಸಿದ್ದರು. ಸಣ್ಣ ಪ್ರಮಾಣದಲ್ಲಿ ಆರಂಭವಾದ ಈ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಪ್ರತಿ ವರ್ಷವೂ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದು, 20ಕ್ಕೂ ಅಧಿಕ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ 150ಕ್ಕೂ ಹೆಚ್ಚು ಖಾಸಗಿ ಸಂಘ ಸಂಸ್ಥೆಗಳು ಸೇರಿದಂತೆ 170ಕ್ಕೂ ಅಧಿಕ ಮಳಿಗೆಗಳನ್ನು ತೆರೆಯುವ ಮೂಲಕ ನಾಡಿನಾದ್ಯಂತ ಪ್ರಸಿದ್ಧ ಜನೋಪಯೋಗಿ ವಸ್ತು ಪ್ರದರ್ಶನವೆಂಬ ಹೆಗ್ಗಳಿಕೆಗೆ ಶ್ರೀಮಠ ಪಾತ್ರವಾಗಿದೆ.

ಕೃಷಿ, ಆರೋಗ್ಯ, ತೋಟಗಾರಿಕೆ, ಅರಣ್ಯ, ರೇಷ್ಮೆ, ನೀರಾವರಿ, ಶಿಕ್ಷಣ, ಪಶುಪಾಲನೆ, ಮೀನುಗಾರಿಕೆ, ಮಹಿಳೆ ಮತ್ತು ಮಕ್ಕಳ ಕಲ್ಯಾಣ, ಸಿದ್ದಗಂಗಾ ಆಸ್ಪತ್ರೆ, ವಾರ್ತಾ ಇಲಾಖೆ ಸೇರಿದಂತೆ ಹಲವು ಇಲಾಖೆಗಳು, ಖಾಸಗಿ ಸಂಸ್ಥೆಗಳು ಈ ವಸ್ತು ಪ್ರದರ್ಶನದಲ್ಲಿ ಮಳಿಗೆ ತೆರೆದು ತಮ್ಮ ಇಲಾಖೆಯಲ್ಲಿ ಹಾಗೂ ಸಂಸ್ಥೆಯಲ್ಲಿ ರೈತರು ಮತ್ತು ಸಾರ್ವಜನಿಕರಿಗೆ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡುವ ಜನೋಪಯೋಗಿ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ.

Advertisements

ರಾಜ್ಯ ಸರ್ಕಾರದ ಇಲಾಖೆಗಳಲ್ಲದೆ ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟ ಇಲಾಖೆಗಳು ಇನ್ನಿತರೆ ಸಂಸ್ಥೆಗಳು ಮಳಿಗೆಗಳನ್ನು ತೆರೆದು ತಮ್ಮಲ್ಲಿನ ಯೋಜನೆಗಳು, ರೈತರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಕೆಲಸವೂ ನಡೆಯುತ್ತಿದೆ. ಖಾಸಗಿ ಸಂಘ ಸಂಸ್ಥೆಗಳವರೂ ಈ ವಸ್ತುಪ್ರದರ್ಶನದಲ್ಲಿ ಮಳಿಗೆಗಳನ್ನು ತೆರೆದು ಉತ್ತಮ ಪ್ರದರ್ಶನ ನೀಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ರೈತರು, ಯುವಜನರು, ಕೈಗಾರಿಕೋದ್ಯಮಿಗಳನ್ನು ಅಲ್ಲದೆ ಮಕ್ಕಳು, ಮಹಿಳೆಯರನ್ನೂ ಸೆಳೆಯುವ ಮನೋರಂಜನಾ ಆಟಿಕೆಗಳು, ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟ, ತಿಂಡಿ-ತಿನಿಸುಗಳ ಮಳಿಗೆಗಳನ್ನು ಶ್ರೀಕ್ಷೇತ್ರದ ವಸ್ತುಪ್ರದರ್ಶನದಲ್ಲಿ ತೆರೆಯಲಾಗಿದೆ.

ಕೃಷಿ ಇಲಾಖೆಯಿಂದ ಈ ಬಾರಿ ಪ್ರಮುಖ ಆಕರ್ಷಣೆಯಾಗಿ ಸಿರಿಧಾನ್ಯ ಬೆಳೆಸುವ ಹಲವು ತಳಿಗಳ ಮಾದರಿಗಳನ್ನು ರೈತರಿಗೆ ತಿಳಿಸುವ ಹಾಗೂ ಬೆಳೆಗಳ ತಳಿಗಳು, ಏಕದಳ, ದ್ವಿದಳ ಧಾನ್ಯಗಳ ಪ್ರಾತ್ಯಕ್ಷಿತೆ, ಮುಸುಕಿನ ಜೋಳ, ರಾಗಿ, ಗೋಧಿ, ಹಲವು ಭತ್ತದ ತಳಿಗಳು ಸೇರಿದಂತೆ ನೆಲಗಡಲೆ, ಹೊಸತಳಿಗಳ ಪ್ರಾತ್ಯಕ್ಷಿಕೆ, ಸೂರ್ಯಕಾಂತಿ, ಶೇಂಗಾ ಸೇರಿದಂತೆ ಇನ್ನಿತರೆ ಎಣ್ಣೆಕಾಳುಗಳು, ಕಬ್ಬು ಬೆಳೆ ಪ್ರಾತ್ಯಕ್ಷಿಯನ್ನು ಏರ್ಪಡಿಸಲಾಗಿದ್ದು, ವಸ್ತುಪ್ರದರ್ಶನಕ್ಕೆ ಭೇಟಿ ನೀಡುವ ಪ್ರತಿಯೊಬ್ಬರ ಪ್ರಮುಖ ಆಕರ್ಷಣೆಯಾಗಿದೆ.

ರೈತರಿಗೆ ಸಾವಯವ ಕೃಷಿ, ಸಾವಯವ ಗೊಬ್ಬರ ಬಳಕೆ, ಕಳೆ ನಿಯಂತ್ರಣ ಮಾಹಿತಿ, ವಿನೂತನ ಕೃಷಿ ಪರಿಕರಗಳ ಪರಿಚಯದೊಂದಿಗೆ ಇನ್ನಿತರ ಕೃಷಿ ವಿಧಾನಗಳ ಬಗ್ಗೆ ಬಹುಪಯೋಗಿ ಮಾಹಿತಿಯೂ ಕೃಷಿ ಇಲಾಖೆಯ ಮಳಿಗೆಯಲ್ಲಿ ಲಭ್ಯವಾಗುತ್ತಿದೆ.

ಇದರೊಂದಿಗೆ ಜಲಾನಯನ ಅಭಿವೃದ್ಧಿ ಇಲಾಖೆಯು ಇಳಿಜಾರು ಪ್ರದೇಶಗಳಲ್ಲಿ ಮಳೆ ನೀರಿನ ಸಮಗ್ರ ಬಳಕೆ, ವೈಜ್ಞಾನಿಕ ಬದಲಾವಣೆ, ಮಾದರಿ ಗ್ರಾಮ, ಅಣೆಕಟ್ಟೆ, ಕಲ್ಯಾಣಿ, ನೀರಿನ ಹೊಂಡ, ಮನರೇಗಾ ಯೋಜನೆ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಸಮಗ್ರ ಜಲಾನಯನ ನಿರ್ವಹಣಾ ಯೋಜನೆ ಬಗ್ಗೆ ಸಮಗ್ರ ಮಾಹಿತಿಯೊಂದಿಗೆ ಜನರಲ್ಲಿ ಅರಿವು ಮೂಡಿಸುವ ಕಾಯಕವೂ ಇಲ್ಲಿ ನಡೆಯುತ್ತಿದೆ.

ಇದೇ ಪ್ರಥಮ ಬಾರಿಗೆ ತೆರೆಯಲಾಗಿರುವ ಬೆಂಗಳೂರು ವಾರ್ತಾ ಇಲಾಖೆ ಮಳಿಗೆಯಲ್ಲಿ ವಸ್ತುಪ್ರದರ್ಶನಕ್ಕೆ ಭೇಟಿ ನೀಡುತ್ತಿರುವ ಶ್ರೀಮಠದ ಭಕ್ತರಿಗೆ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಸಮಗ್ರ ಮಾಹಿತಿಯೂ ಲಭ್ಯವಾಗುತ್ತಿದೆ. ರಾಮಮಂದಿರ ಈ ಬಾರಿಯ ವಿಶೇಷ.

ರಾಮಮಂದಿರ ಮಾದರಿ ವಸ್ತುಪ್ರದರ್ಶನ ಪ್ರವೇಶಿಸುತ್ತಿದ್ದಂತೆ ಆರಂಭದಲ್ಲೇ ಇರುವುದರಿಂದ ಸಾರ್ವಜನಿಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ವಸ್ತುಪ್ರದರ್ಶನಕ್ಕೆ ಆಗಮಿಸುವ ಮಕ್ಕಳಾದಿಯಾಗಿ ಎಲ್ಲರೂ ರಾಮಮಂದಿರದ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.

ಆರೋಗ್ಯ ಪ್ರದರ್ಶಿನಿ : ಸಿದ್ದಗಂಗಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಿಂದ ತೆರೆಯಲಾಗಿರುವ ಆರೋಗ್ಯ ಪ್ರಿಯದರ್ಶಿನಿ ಮಳಿಗೆಯಲ್ಲಿ ಆಸ್ಪತ್ರೆಯ ಚಿಕಿತ್ಸಾ ಸೌಲಭ್ಯಗಳ ಪ್ರದರ್ಶನದೊಂದಿಗೆ ಸ್ಥಳದಲ್ಲೇ ಉಚಿತ ತಪಾಸಣೆಗೆ ಅವಕಾಶ ಕಲ್ಪಿಸಿರುವುದು ಈ ಸಾಲಿನ ವಸ್ತುಪ್ರದರ್ಶನದ ವಿಶೇಷವಾಗಿದೆ.

ಈ ಸುದ್ದಿ ಓದಿದ್ದೀರಾ? ಮೈಸೂರು | ಮತದಾನ ಕೇಂದ್ರಗಳನ್ನು ಆಕರ್ಷಕವಾಗಿಸಿ; ಅಧಿಕಾರಿಗಳಿಗೆ ಡಿಸಿ ಸೂಚನೆ

ಜಾತ್ರೆಗೆ ಬರುವ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಗ್ರಾಮೀಣ ಜನತೆಗೆ ಕೈಗಾರಿಕಾ ಕ್ಷೇತ್ರಗಳ ಮಾಹಿತಿ ಮತ್ತು ಜ್ಞಾನ ಪ್ರಸಾರ ಮಾಡುವುದು, ವಿವಿಧ ಇಲಾಖೆಗಳ ಪ್ರಗತಿಪರ ಕಾರ್ಯಕ್ರಮಗಳ ಪ್ರದರ್ಶನ, ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ, ಹೊಸ ಕೃಷಿ ಸಂಶೋಧನೆಗಳ ಪರಿಚಯ ಈ ವಸ್ತು ಪ್ರದರ್ಶನದ ಮುಖ್ಯ ಉದ್ದೇಶವಾಗಿದೆ. ಮಾರ್ಚ್ 12ರಂದು ಈ ಜನೋಪಯೋಗಿ ವಸ್ತು ಪ್ರದರ್ಶನ ಮುಕ್ತಾಯವಾಗಲಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಐಎಎಸ್, ಐಪಿಎಸ್ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ; ಅ.ಮು ಲಕ್ಷ್ಮೀನಾರಾಯಣ ಭರವಸೆ

ಕೆಎಎಸ್, ಐಎಎಸ್ ಮತ್ತು ಐಪಿಎಸ್ ಓದಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಉಚಿತ...

ಶಿವಮೊಗ್ಗ | 15 ವರ್ಷದ ಬಳಿಕ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಆರ್. ಮಾರುತಿ ವರ್ಗಾವಣೆ!

ಶಿವಮೊಗ್ಗ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಕಳೆದ 15...

ಸಿಂಧನೂರು | ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ – ವಿದ್ಯಾರ್ಥಿನಿಯರ ಪ್ರತಿಭಟನೆ

ಸಿಂಧನೂರಿನ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದಾಗಿ...

ಶಿವಮೊಗ್ಗ | ಸೆ. 6ಕ್ಕೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಉತ್ಸವದಲ್ಲಿ ಈ ಬಾರಿ ಏನೆಲ್ಲಾ...

Download Eedina App Android / iOS

X