ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಜಾತ್ಯತಿತ ಪ್ರಗತಿಪರ ಒಕ್ಕೂಟದ ಮೈತ್ರಿಗೆ ನಟ ಕಮಲ್ ಹಾಸನ್ ನೇತೃತ್ವದ ಮಕ್ಕಳ್ ನೀದಿ ಮೇಯಮ್ ಪಕ್ಷ ಸೇರ್ಪಡೆಗೊಂಡಿದೆ.
ಮೈತ್ರಿ ಹಿನ್ನೆಲೆಯಲ್ಲಿ ಎಂಎನ್ಎಂ ಪಕ್ಷ 2025ರ ಚುನಾವಣೆಯಲ್ಲಿ ಒಂದು ರಾಜ್ಯಸಭಾ ಸ್ಥಾನ ಪಡೆಯಲಿದೆ.
“ದೇಶದ ಸಲುವಾಗಿ ಯಾವುದೇ ಹುದ್ದೆಯ ಪರಿಗಣನೆ ಇಲ್ಲದೆ ಡಿಎಂಕೆ ನೇತೃತ್ವದ ಪಕ್ಷಕ್ಕೆ ಸೇರ್ಪಡೆಗೊಳ್ಳಲಾಗಿದೆ” ಎಂದು ಕಮಲ್ ಹಾಸನ್ ತಿಳಿಸಿದ್ದಾರೆ.
ಕಾಂಗ್ರೆಸ್ ಮುಖಂಡರು ಶೀಘ್ರದಲ್ಲೇ ಡಿಎಂಕೆ ನಾಯಕರನ್ನು ಭೇಟಿ ಮಾಡಿ ಲೋಕಸಭಾ ಚುನಾವಣೆಯಲ್ಲಿನ ಸೀಟು ಹಂಚಿಕೆಯನ್ನು ಅಂತಿಮಗೊಳಿಸಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ʼಮಹಿಳಾ ದಿನʼ ಅರ್ಥಪೂರ್ಣವಾಗೋದು ಆಕೆಗೆ ಘನತೆಯಿಂದ ಬದುಕಲು ಬಿಟ್ಟಾಗ ಮಾತ್ರ
ಎಂಎನ್ಎಂ ಪಕ್ಷವು ಲೋಕಸಭೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ ಪಕ್ಷವು ಪ್ರಚಾರ ಹಾಗೂ ಬೆಂಬಲ ಕೈಗೊಳ್ಳುತ್ತದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣಾಚಲಂ ತಿಳಿಸಿದ್ದಾರೆ.
‘ಇಂಡಿಯಾ’ ಒಕ್ಕೂಟದ ಭಾಗವಾಗಿರುವ ಡಿಎಂಕೆ ಪಕ್ಷ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ನೊಂದಿಗೆ ಮಾತುಕತೆ ನಡೆಸುತ್ತಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆಯು ಸಿಪಿಐ, ಸಿಪಿಎಂ ಹಾಗೂ ವಿಸಿಕೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ತಮಿಳುನಾಡಿನ 39 ಸ್ಥಾನಗಳ ಪೈಕಿ ಅಮೋಘ 38 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಅಲ್ಲಿನ ಪ್ರತಿಪಕ್ಷ ಎಐಎಡಿಎಂಕೆ ಒಂದು ಸ್ಥಾನಕ್ಕೆ ಮಾತ್ರ ತೃಪ್ತಿಪಟ್ಟುಕೊಂಡಿತ್ತು.
