ಹಾಸನ | ಆದಂ ಪಾಷಾ ಅಪರೂಪದ ವ್ಯಕ್ತಿ; ಶಶಿಧರ್ ಮೌರ್ಯ ಶ್ಲಾಘನೆ

Date:

Advertisements

ಒಂದೊಂದು ಅಡಿಗೂ ಸ್ವಂತ ಸಹೋದರರೇ ಕಿತ್ತಾಡುವ ನಿದರ್ಶನಗಳನ್ನು ನಾವು ಕಾಣುತ್ತಿದ್ದೇವೆ. ನ್ಯಾಯಾಲಗಳಲ್ಲಿ ಶೇ.90ರಷ್ಟು ಜಮೀನು ವ್ಯಾಜ್ಯದ ಪ್ರಕರಣಗಳೇ ದಾಖಲಾಗಿವೆ. ಜಮೀನಿಗಾಗಿ ಹೊಡೆದಾಟ ಬಡಿದಾಟ ಕೊಲೆ ಸುಲಿಗೆ ಸೇರಿದಂತೆ ಇನ್ನೂ ಅನೇಕ ದುರ್ಘಟನೆಗಳು ನಡೆಯುತ್ತಲೇ ಇವೆ. ಆದರೆ, ಇಲ್ಲೊಬ್ಬರು ತನ್ನ ಪಾಲಿಗೆ ಬಂದಿದ್ದ ಜಮೀನನ್ನು ಇನ್ನೊಬ್ಬರಿಗೆ ಹಸ್ತಾಂತರಿಸಲು ನಿರ್ಧರಿಸಿರುವುದು ಹೆಮ್ಮೆಯ ವಿಷಯ ಎಂದು ಸಾಮಾಜಿಕ ಹೋರಾಟಗಾರ ಶಶಿಧರ್ ಮೌರ್ಯ ಶ್ಲಾಘಿಸಿದರು.

ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬಂಟೇನಹಳ್ಳಿ ಗ್ರಾಮದ ನಿವಾಸಿ ಆದಂ ಪಾಷಾ ಅವರಿಗೆ ಬೇಲೂರಿನ 24×7 ಸಮಾಜ ಸೇವ ತಂಡ ಮತ್ತು ಸಮಾನ ಮನಸ್ಕರೆಲ್ಲರೂ ಸೇರಿ ಗೌರವ ಸಮರ್ಪಣೆ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿದರು.

“ಆದಂ ಪಾಷಾರಂತಹ ವ್ಯಕ್ತಿ ಬಹುಶಃ ದೇಶದಲ್ಲಿ ಹುಡುಕಿದರೂ ಸಿಗದಿರುವ ವ್ಯಕ್ತಿ ಎನ್ನಬಹುದು. ಪಾಲಿಗೆ ಬಂದಿದ್ದು ಪಂಚಾಮೃತವೆಂದು ಜೀವನ ನಡೆಸುವ ಈ ಕಾಲಘಟ್ಟದಲ್ಲಿ, ಅಪರೂಪದ ವ್ಯಕ್ತಿತ್ವವುಳ್ಳ ಉದಾರ ಮನಸ್ಸಿನವರು ಇವರು. ಯಾಕೆಂದರೆ, ಇಂದಿರಾಗಾಂಧಿ ಆಡಳಿತದಲ್ಲಿ ಬಂದಂತ “ಉಳುವವನೇ ಭೂಮಿಯ ಒಡೆಯ” ಎಂಬ ಕಾನೂನಿನ ಅಡಿಯಲ್ಲಿ ಆದಂ ಪಾಷಾ ಅವರ ತಾತನಿಗೆ ಸರ್ಕಾರದಿಂದ ಸುಮಾರು 4 ಎಕರೆ ಜಮೀನು ಮಂಜೂರಾಗಿತ್ತು. ಅದರ ಪಾಲಾಗಿ ಸುಮಾರು ಮುಕ್ಕಾಲು ಎಕರೆ ಜಮೀನು ಆದಂ ಪಾಷರವರಿಗೆ ಸೇರಿತ್ತು” ಎಂದು ಹೇಳಿದರು.

Advertisements

“ಜೀವನಕ್ಕಾಗಿ ಸುಮಾರು ವರ್ಷಗಳಿಂದ ಕೃಷಿ ಮಾಡುತ್ತಾ ಬಂದಿದ್ದಾರೆ. ಇದೀಗ ಪದೇ ಪದೆ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಎಷ್ಟೇ ನುರಿತ ವೈದ್ಯರಿಗೆ ತೋರಿಸಿದರೂ ಇವರ ಆರೋಗ್ಯ ಸಮಸ್ಯೆ ಬಗೆಹರಿಯಲಿಲ್ಲ. ನಂತರ ಮುಸ್ಲಿಂ ಧರ್ಮ ಗುರು ಅವರ ಅಪ್ಪಣೆಯಂತೆ ʼಭೂಮಿಯ ಮೂಲ ಒಡೆಯ ಯಾರಿದ್ದಾರೆ, ಅವರಿಗೆ ತಮ್ಮ ಭೂಮಿ ಹಿಂತಿರುಗಿಸಿʼ ಎಂದು ಸಲಹೆ ನೀಡಿದರು. ಧರ್ಮಗುರು ಅವರ ಸಲಹೆಯಂತೆ ಭೂಮಿಯ ಮೂಲ ಹಕ್ಕುದಾರರಿಗೆ ತನ್ನ ಪಾಲಿಗೆ ಬಂದಿದ್ದ ಮುಕ್ಕಾಲು ಎಕರೆ ಕೃಷಿ ಭೂಮಿಯನ್ನು ಉದಾರ ಮನಸ್ಸಿನಿಂದ ಪೇಟೆ ನಿವಾಸಿ ಮುಜಮ್ಮಿಲ್ ಅವರಿಗೆ ಹಸ್ತಾಂತರಿಸಲು ನಿರ್ಧರಿಸಿದ್ದಾರೆ” ಎಂದು ತಿಳಿಸಿದರು.

“ಕಿತ್ತು ತಿನ್ನುವ ಈ ಕಾಲಘಟ್ಟದಲ್ಲಿ ಬಂಡವಾಳ ಶಾಹಿಗಳು ಬಡವರಿಗೆ ಮಾಡುವ ಅನ್ಯಾಯಗಳನ್ನು ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಸ್ವಂತ ಅಣ್ಣ-ತಮ್ಮಂದಿರೇ ಜಮೀನುಗಳಿಗಾಗಿ ಕಚ್ಚಾಡುವ ಇಂತಹ ಸಂದರ್ಭದಲ್ಲಿ ಆದಂ ಪಾಷಾ ಅವರ ಉದಾರ ಮನಸ್ಥಿತಿ ನಿಜಕ್ಕೂ ಶ್ಲಾಘನೀಯ. ಇಂತಹ ಅಪರೂಪದ ವ್ಯಕ್ತಿಯನ್ನು ನಮ್ಮ ಬೇಲೂರಿನವರೆಂದು ಹೇಳಿಕೊಳ್ಳಲು ನಮಗೆ ತುಂಬಾ ಹೆಮ್ಮೆಯಾಗುತ್ತದೆ” ಎಂದರು.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿ ಸಾವು; ತನಿಖೆಗೆ ಆಗ್ರಹ

ಈ ಸಂದರ್ಭದಲ್ಲಿ ಗುರುಗಳಾದ ಇಫ್ತೇಕಾರ್ ಕೊನ್ನೇರ್ಲು ಹರೀಶ್, ಸಂಪತ್ ಮಾಸ್ಟರ್, ಭೀಮ್ ಆರ್ಮಿ ತಾಲೂಕು ಘಟಕದ ಅಧ್ಯಕ್ಷ ಕೀರ್ತಿ, ಪತ್ರಕರ್ತ ಸುನಿಲ್ ರಾಯಪುರ, ಕೋಟೆ ರಫೀಕ್ ಮಸೂದ್ ಥೋಫೀಕ್, ಪುರಸಭೆ ಸದಸ್ಯ ಫಯಾದ್ ಅಹ್ಮದ್, ಹಾಸನ್ ಟೈಯರ್ ಮಾಲೀಕ ರೋಮನ್, ಜನತಾ ಎಲೆಕ್ಟ್ರಿಕಲ್ ಮಾಲೀಕ ಸಾಕಿಬ್, ಸಮಾಜ ಸೇವಕ ನೂರ್ ಅಹಮದ್, ಶಫಿಕ್ ಅಹಮದ್‌, ಜಸ್ಏ ಅಹ್ಮದ್ ಹುಸೇನ್, ಅಖ್ತಾರ್ ರಜಾ, ಅಬಾನ್ ರಜಾ ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X