ದಕ್ಷಿಣ ಕನ್ನಡ | ರೈಲು ನಿಲ್ದಾಣವನ್ನೇ ಸಭಾಂಗಣ ಮಾಡಿಕೊಂಡು ಕಾರ್ಯಕ್ರಮ ಆಯೋಜಿಸಿದ್ದ ಸಂಘಪರಿವಾರ; ಸಾರ್ವಜನಿಕರ ಆರೋಪ

Date:

Advertisements

ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ನಗರದ ಸೆಂಟ್ರಲ್‌ ರೈಲು ನಿಲ್ದಾಣವನ್ನು ಸಂಘ ಪರಿವಾರವು ಸಭಾಂಗಣ ಮಾಡಿಕೊಂಡು ಕಾರ್ಯಕ್ರಮ ಆಯೋಜಿಸಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ವೈರಲ್‌ ಆಗಿರುವ ವೀಡಿಯೊ ಇತ್ತೀಚೆಗೆ ಸಂಘಪರಿವಾರದ ಕಾರ್ಯಕರ್ತರು ಮಂಗಳೂರಿನಿಂದ ಅಯೋಧ್ಯೆಗೆ ತೆರಳುವಾಗ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಮಾಡಿದ್ದ ಕಾರ್ಯಕ್ರಮದ್ದು ಎನ್ನಲಾಗಿದೆ.

ವೈರಲ್‌ ವೀಡಿಯೊದಲ್ಲಿ ರೈಲು ನಿಲ್ದಾಣದಲ್ಲಿ ನೂರಾರು ಮಂದಿ ಕುಳಿತುಕೊಳ್ಳಲು ಮಾಡಲಾಗಿದ್ದ ಕುರ್ಚಿಗಳನ್ನು ಜೋಡಿಸಿರುವುದು ಕಾಣಿಸುತ್ತಿದೆ. ಮೈಕ್‌ ಬಳಸಿಕೊಂಡು ಆರ್‌ಎಸ್‌ಎಸ್‌ನ ಪ್ರಾರ್ಥನೆ ಹೇಳುತ್ತಿರುವುದು ಹಾಗೂ ಅಲ್ಲಿರುವವರೆಲ್ಲರೂ ಆ ಪ್ರಾರ್ಥನೆಯನ್ನು ಪುನಾರಾವರ್ತಿಸುತ್ತಿರುವುದು ಕೇಳಿಸುತ್ತಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ಅವರೂ ಕೈ ಎತ್ತಿಕೊಂಡು ಪ್ರಾರ್ಥನೆ ಹೇಳುತ್ತಿರುವುದು ವೀಡಿಯೊದಲ್ಲಿದೆ.

Advertisements

ಪ್ರಾರ್ಥನೆ ಹೇಳುತ್ತಿರುವಾಗ ಪೊಲೀಸರು ನಿಂತಿರುವುದು ವೀಡಿಯೊದಲ್ಲಿ ಕಾಣಿಸುತ್ತಿದೆ. ಪ್ರಾರ್ಥನೆ ಹೇಳಲು ಸಂಘ ಪರಿವಾರದವರು ಬಳಸಿದ್ದ ಮೈಕ್‌ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸೂಚನೆ ನೀಡಲು ಬಳಸುವ ಮೈಕ್‌ ಎಂಬ ಆರೋಪವೂ ಕೇಳಿಬಂದಿದೆ. ಆದರೆ ಈ ಬಗ್ಗೆ ಖಚಿತ ಮಾಹಿತಿಯಿಲ್ಲ.

“ಸಾರ್ವಜನಿಕ ಸ್ಥಳ ಹಾಗೂ ಭದ್ರತೆಯ ದೃಷ್ಠಿಯಿಂದ ಸೂಕ್ಷ್ಮ ಸ್ಥಳವಾಗಿರುವ ರೈಲು ನಿಲ್ದಾಣವನ್ನು ಸಭಾಂಗಣದಂತೆ ಮಾರ್ಪಾಡು ಮಾಡಿಕೊಂಡು, ನೂರಾರು ಮಂದಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿ ಕಾರ್ಯಕ್ರಮ ಆಯೋಜಿಸಲು ಅವಕಾಶ ನೀಡಿದವರು ಯಾರು” ಎಂದು ಸಾರ್ವಜನಿಕರು ಸರ್ಕಾರ ಮತ್ತು ರೈಲ್ವೇ ಇಲಾಖೆಯನ್ನು ಪ್ರಶ್ನಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊಗಳು ಭಾರೀ ಪ್ರಮಾಣದಲ್ಲಿ ವೈರಲ್‌ ಆಗುತ್ತಿದ್ದರೂ, ರೈಲು ನಿಲ್ದಾಣದ ಭದ್ರತೆಗೆ ಅಡ್ಡಿ ಪಡಿಸಿರುವ ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆ ಉಂಟುಮಾಡಿರುವ ಕುರಿತು ರೈಲು ನಿಲ್ದಾಣದ ಅಧಿಕಾರಿಗಳು ಈವರೆಗೆ ಯಾವುದೇ ದೂರನ್ನು ದಾಖಲಿಸಿರುವ ವರದಿ ಬಂದಿಲ್ಲ. ರೈಲ್ವೇ ಪೊಲೀಸರಿಂದಲೂ ಯಾವುದೇ ಕ್ರಮವಾದ ಬಗ್ಗೆ ಮಾಹಿತಿಯಿಲ್ಲ.

ಈ ಸುದ್ದಿ ಓದಿದ್ದೀರಾ? ರಾಯಚೂರು | ಅಪರಾಧ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ: ಎಸ್‌ಪಿ ನಿಖಿಲ್ ಬಿ

“ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಪಾಲಿಸಬೇಕಾಗಿದ್ದ ನಿಯಮಗಳನ್ನು ಪಾಲಿಸದೇ ಈ ರೀತಿ ಸಂಘಪರಿವಾರದ ಕಾರ್ಯಕ್ರಮ ನಡೆಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ನಗರದ ಹೃದಯಭಾಗದಲ್ಲಿರುವ ರೈಲು ನಿಲ್ದಾಣದಲ್ಲಿ ಭದ್ರತೆಗೆ ಸವಾಲಾಗಿರುವ, ಕಾನೂನುಗಳನ್ನು ಗಾಳಿಗೆ ತೂರಿರುವ ಸಂಘಪರಿವಾರ ಕಾರ್ಯಕರ್ತರ ಮೇಲೆ ಮಂಗಳೂರು ನಗರ ಪೊಲೀಸರೂ ಸ್ವಯಂ ಪ್ರೇರಿತ ಪ್ರಕರಣ ದಾಖಸಿ ಕ್ರಮಕೈಗೊಂಡಿಲ್ಲ” ಎಂದು ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ |‌ ಕುರುಬರಿಗೆ ಎಸ್‌ಟಿ ಮೀಸಲಾತಿ ಕಲ್ಪಿಸುವಂತೆ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಆಗ್ರಹ

ಕುರುಬರಿಗೆ ಎಸ್‌ಟಿ(ಪರಿಶಿಷ್ಟ ಪಂಗಡ) ಮೀಸಲಾತಿಯನ್ನು ಕಲ್ಪಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಂದೆ ನಿಂತು...

ಬೀದರ್‌ | ದೇಶಕ್ಕೆ ಬರಹಗಾರರ ಕೊಡುಗೆ ಅನನ್ಯ

ದೇಶದ ಸ್ವಾತಂತ್ರ್ಯಕ್ಕೆ ಸಾಹಿತಿ, ಬರಹಗಾರರ ಕೊಡುಗೆ ಅನನ್ಯವಾಗಿದೆ. ಲೇಖನಿ ಖಡ್ಗಕ್ಕಿಂತ ಹರಿತವಾದದ್ದು,...

ಮೈಸೂರು | ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ; ಮೀಲಾದ್ ಘೋಷಣಾ ಜಾಥಾ

ಮೈಸೂರು ನಗರದ ಅಶೋಕ ರಸ್ತೆಯಲ್ಲಿರುವ ಮೀಲಾದ್ ಪಾರ್ಕ್ ವೃತ್ತದಲ್ಲಿ 'ಸುನ್ನಿ ಯುವಜನ...

ಮೈಸೂರು | ಗಣೇಶನ ವೇಷಧರಿಸಿ ರಕ್ತದಾನದ ಜಾಗೃತಿ

ಮೈಸೂರು ಜೀವಧಾರ ರಕ್ತ ನಿಧಿ ಕೇಂದ್ರದ ವತಿಯಿಂದ ರಾಮಸ್ವಾಮಿ ವೃತದಲ್ಲಿ ವಾಹನ...

Download Eedina App Android / iOS

X