ಮಾಧ್ಯಮಗಳನ್ನು ನಾಯಿಗೆ ಹೋಲಿಸಿ ಮತ್ತೆ ನಾಲಿಗೆ ಹರಿಬಿಟ್ಟಿ ಸಂಸದ ಅನಂತಕುಮಾರ್‌ ಹೆಗಡೆ

Date:

Advertisements

ಸಂವಿಧಾನ ಬದಲಾವಣೆ ಮಾಡಬೇಕು ಎಂದು ಹೇಳಿಕೆ ನೀಡಿದ್ದ ಸಂಸದ ಅನಂತಕುಮಾರ್‌ ಹೆಗಡೆ ಮುಜುಗರ ತಾಳಲಾರದೇ ಮಾಧ್ಯಮಗಳನ್ನು ನಾಯಿಗೆ ಹೋಲಿಸಿ ಮಾತನಾಡಿ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಅಂಕೊಲಾ ತಾಲೂಕಿನ ಹಿಲ್ಲೂರು ಗ್ರಾಮದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, “ಆನೆ ಹೊಗಿದ್ದೆ ದಾರಿ ಎಂಬಂತೆ ನಾವು ಈರಬೇಕು. ಮಾಧ್ಯಮಗಳು ಏನೂ ಬೆಕಾದ್ರೂ ಬರೆದುಕೊಳ್ಳಲಿ. ಬೇಕಾದ ಬೇವರ್ಸಿಗಳು ಏನೂ ಬೇಕಾದ್ರೂ ವದರಾಡಲಿ” ಎಂದಿದ್ದಾರೆ.

“ವಿವಾದ ಸೃಷ್ಟಿಯಾದರೂ ದೃಢವಾಗಿ ನಿಲ್ಲುವುದು ನಿಜವಾದ ನಾಯಕತ್ವ, ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗೆ ಕಾರ್ಯಕರ್ತರು ತಲೆಕೆಡಿಸಿಕೊಳ್ಳಬಾರದು” ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.

Advertisements

“ಸಾಮಾಜಿಕ ಜಾಲತಾಣದಲ್ಲಿ ಬೇಕಾದ್ದು ಚರ್ಚೆ ಆಗಲಿ. ಆದ್ರೆ ನಿವೆಲ್ಲ ಇದಕ್ಕೆ ವಿಚಲಿತರಾಗಬಾರದು. ನೀವು ಯಾವದೋ ಸಾಮಾನ್ಯ ಪಕ್ಷದ ಕಾಯರ್ತರಲ್ಲ. ದೇಶ ಆಡಳಿತ ಮಾಡುತ್ತಿರುವ ಪಕ್ಷದ ಕಾರ್ಯಕರ್ತರು. ಆನೆ ನಡೆದಿದ್ದೆ ದಾರಿ ಎಂಬಂತೆ ನಾವು ನಡಿಯಬೇಕು ಕಣ್ರಿ. ಆನೆ ನಡೆಯುತ್ತಿದ್ದರೆ ನಾಯಿಗಳು ಬೋಗಳುತ್ತಾ ಇರುತ್ತವೆ. ಆನೆ ನಡೆಯುತ್ತಿದ್ದರೆ ಯಾವಗಲಾದರೂ ನಾಯಿ ಕಡೆ ಗಮನ ಕೊಡುತ್ತಾ? ನಾಯಿಗಳಿಗೂ ಗೊತ್ತು ನಾವು ಎಷ್ಟೆ ಬೊಗಳಿದ್ರು ಆನೆಗೆ ಏನು ಮಾಡುವುದಕ್ಕೂ ಆಗಲ್ಲ. ನಾಯಿಗಳು ಬೋಗಳದೆ ಇದ್ರೆ ಆನೆ ಗಾಂಭೀರ್ಯಕ್ಕೆ ಬೆಲೆ ಇರಲ್ಲ” ಎಂದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾರ್ಯಕರ್ತರನ್ನು ಕಡೆಗಣಿಸಿದ ಬಿಜೆಪಿ ‘ಗೋ ಬ್ಯಾಕ್’ ಘೋಷಣೆಗೆ ಬೆಚ್ಚಿತೇ?

“ಹೆಗಡೆ ಹೇಳಿಕೆಯಿಂದ ಎಚ್ಚೆತ್ತುಕೊಂಡ ಬಿಜೆಪಿ ನಾಯಕರು, ಅನಂತಕುಮಾರ್ ಅವರ ಸಂವಿಧಾನ ಬದಲಾವಣೆ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.

ಹಿಂದೊಮ್ಮೆ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ಮಾತನಾಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಅಲ್ಲದೇ ಸಚಿವ ಸ್ಥಾನವನ್ನೂ ಸಹ ಕಳೆದುಕೊಂಡಿದ್ದರು. ಇದೀಗ ಮತ್ತೆ ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿದ್ದು, ರಾಜ್ಯದಲ್ಲಿ ಬಿಜೆಪಿಗೆ ಮುಜುಗರ ಉಂಟು ಮಾಡಿದ್ದಾರೆ. ಅಲ್ಲದೇ ಕಾಂಗ್ರೆಸ್​ ಪ್ರಬಲ ಅಸ್ತ್ರವನ್ನು ನೀಡಿದ್ದು, ಇದನ್ನೇ ಉಲ್ಲೇಖಿಸಿ ಸಿದ್ದರಾಮಯ್ಯ ಆದಿಯಾಗಿ ಸಚಿವರು, ಶಾಸಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

4 COMMENTS

  1. ಸುಸಂಸ್ಕೃತ ಸಂಸ್ಕಾರಿಗಳ ಬಾಯಲ್ಲೇ ಏಕೆ ಈ ರೀತಿಯ ಸಂಸ್ಕಾರದ ಮಾತುಗಳು ಹೊರಬರಲು ಕಾರಣವೇನು?

  2. ಆನೆ ಹೊಗಿದ್ದೆ ದಾರಿ ಎಂಬಂತೆ ನಾವು ಈರಬೇಕು. ಮಾಧ್ಯಮಗಳು ಏನೂ ಬೆಕಾದ್ರೂ ಬರೆದುಕೊಳ್ಳಲಿ. ಬೇಕಾದ ಬೇವರ್ಸಿಗಳು ಏನೂ ಬೇಕಾದ್ರೂ ವದರಾಡಲಿ”

    ಇಂತಹ ಬೇವರ್ಸಿಗಳು ಏನೇ ಬೋಗಳಿದ್ರೂ ಮೀಡಿಯಾಗಳ ಬೆಲೆ ಕಮೆಯೇನು ಆಗೋದಿಲ್ಲ. ತೂಕದ ಕಲ್ಲಿನ ಮೇಲೆ ನಾಯಿಗಳು ಉಚ್ಚೆ ಹುಯ್ದರೂ ಅದ್ರ ತೂಕ ಯೇನು ಕಡಿಮೆಯಾಗೋದಿಲ್ಲ… ಟಿಕೇಟ್ ಕೈತಪ್ಪುವ ಅತಂಕದಲ್ಲಿ ಈ ಮನುಷ್ಯ ಮತಿಭ್ರಮಣಿತನಂತೆ ವರ್ತಿಸುತ್ತಿದ್ದಾನೆ…ಕೊಳಕುಬಾಯಿಯ ನಿನಗೆ ಏನೇ ಅದ್ರೂ ಅನಂತಕುಮಾರ್ ಹೆಗ್ದೆ ನಿನಗಂತೂ ಟಿಕೇಚ್ ಸಿಗೋದಿಲ್ಲ ಬಿಡು…

  3. ಆನೆ ಹೋಗಿದ್ದೇ ದಾರಿ ಎಂಬಂತೆ ನಾವಿರಬೇಕು.. ಮಾಧ್ಯಮಗಳು ಏನೊ ಬೇಕಾದ್ರೂ ಬರೆದುಕೊಳ್ಳಲಿ, ಬೇಕಾದ ಬೇವರ್ಸಿಗಳು ಏನೂ ಬೇಕಾದ್ರೂ ವದರಾಡಲಿ…

    ಇಂತಹ ಬೇವರ್ಸಿಗಳು ಏನೇ ಬೋಗಳಿದ್ರೂ ಮೀಡಿಯಾಗಳ ಬೆಲೆ ಕಮೆಯೇನು ಆಗೋದಿಲ್ಲ. ತೂಕದ ಕಲ್ಲಿನ ಮೇಲೆ ನಾಯಿಗಳು ಉಚ್ಚೆ ಹುಯ್ದರೂ ಅದ್ರ ತೂಕ ಯೇನು ಕಡಿಮೆಯಾಗೋದಿಲ್ಲ… ಟಿಕೇಟ್ ಕೈತಪ್ಪುವ ಅತಂಕದಲ್ಲಿ ಈ ಮನುಷ್ಯ ಮತಿಭ್ರಮಣಿತನಂತೆ ವರ್ತಿಸುತ್ತಿದ್ದಾನೆ…ಕೊಳಕುಬಾಯಿಯ ನಿನಗೆ ಏನೇ ಅದ್ರೂ ಅನಂತಕುಮಾರ್ ಹೆಗ್ದೆ ನಿನಗಂತೂ ಟಿಕೇಚ್ ಸಿಗೋದಿಲ್ಲ ಬಿಡು…

  4. ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವ್ರ ಸಂವಿಧಾನವನ್ನೇ ಬದಲಿಸಲು ಹೊರಟಿರುವ ಸಂಸದ ಅನಂತಕುಮಾರ್ ಹೆಗ್ಜೆ ಅವನಂತಹ ಲುಚ್ಚ-ಲಫಂಗಗಳು ಸಂಸದರಾಗಿರೋದು ಮಾತ್ರ ದೇಶದ ದುರಂತವೇ ಸರಿ. ಇಂತಹ ಹುಚ್ಚು ನಾಯಿಗಳನ್ನು ದೂರ ಇಡಬೇಕಿದೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸತೀಶ್ ಸೈಲ್ ಮನೆ ಮೇಲೆ ಇಡಿ ದಾಳಿ | ಪ್ರಕರಣದ ಸುತ್ತ ಒಂದು ರಾಜಕೀಯ ಒಳನೋಟ

ಉತ್ತರ ಕನ್ನಡ ಜಿಲ್ಲೆಯ ರಾಜಕೀಯ ರಂಗದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ರಾಜ್ಯ ರಾಜಕಾರಣದಲ್ಲೂ...

ಅಲೆಮಾರಿ ಸಮುದಾಯಗಳಿಗಾಗಿರುವ ಘೋರ ಅನ್ಯಾಯ ಸರಿಪಡಿಸಿ: 277 ಸಮಾನ ಮನಸ್ಕರಿಂದ ಸಿಎಂಗೆ ಮನವಿ

ಅತೀ ಹಿಂದುಳಿದ ಅಲೆಮಾರಿ -ಅರೆ ಅಲೆಮಾರಿ ಸಮುದಾಯಗಳಿಗಾಗಿರುವ ಘೋರ ಅನ್ಯಾಯ ಸರಿಪಡಿಸಿ...

ಆಧಾರ್ ಕಾರ್ಡ್‌ ಪೌರತ್ವದ ಪುರಾವೆಯಲ್ಲ: ಬಿಜೆಪಿಯ ಅಮಿತ್ ಮಾಳವೀಯ

ಆಧಾರ್ ಕಾರ್ಡ್‌ ಪೌರತ್ವದ ಪುರಾವೆಯಲ್ಲ. ಸುಪ್ರೀಂ ಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ...

ಕಾಂಗ್ರೆಸ್ ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಆ.28ರ ವರೆಗೆ ಇ.ಡಿ. ವಶಕ್ಕೆ

ಅಕ್ರಮ ಬೆಟ್ಟಿಂಗ್ ಪ್ರಕರಣದಲ್ಲಿ ಸಿಲುಕಿದ್ದ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ ಸಿ...

Download Eedina App Android / iOS

X