ಹರಿಯಾಣದ ನೂತನ ಮುಖ್ಯಮಂತ್ರಿಯಾಗಿ ನಯಾಬ್ ಸಿಂಗ್ ಸೈನಿ ಪ್ರಮಾಣ ವಚಬ ಸ್ವೀಕರಿಸಿದರು. ಮನೋಹರ್‌ಲಾಲ್ ಕಟ್ಟರ್ ಹಾಗೂ ಅವರ ಸಂಪುಟ ದರ್ಜೆ ಸಚಿವರು ರಾಜೀನಾಮೆ ಸಲ್ಲಿಸಿದ ಕೆಲವು ಗಂಟೆಗಳಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ರಾಜ್ಯಪಾಲ ಬಂಡಾರು ದತ್ತಾತ್ರೆಯ ಪ್ರಮಾಣ ವಚನ ಸ್ವೀಕರಿಸಿದರು. ಲೋಕಸಭಾ ಚುನಾವಣೆಗಳಿಗೆ ಕೆಲವೇ ವಾರಗಳು ಬಾಕಿಯಿರುವ ಹಿನ್ನೆಲೆಯಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ.
ಕುರುಕ್ಷೇತ್ರ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಸೈನಿ ಅವರನ್ನು ಕಳೆದ ಅಕ್ಟೋಬರ್‌ನಲ್ಲಿ ಹರಿಯಾಣ ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಇವರು ಕಟ್ಟರ್ ಅವರ ನಿಕಟವರ್ತಿ ಎಂದು ಪರಿಗಣಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜನರ ಗಮನ ಬೇರೆಡೆಗೆ ಸೆಳೆಯಲು ‘ಸಿಎಎ’ ಮುಂದೆ ಮಾಡಿದ ‘ಮೋಶಾ’
ಲೋಕಸಭಾ ಚುನಾವಣೆಗೆ ಮಿತ್ರಪಕ್ಷ ಜನನಾಯಕ ಜನತಾ ಪಕ್ಷದೊಂದಿಗೆ(ಜೆಜೆಪಿ) ಸೀಟು ಹಂಚಿಕೆ ಮಾತುಕತೆ ಮುರುದುಬಿದ್ದ ಹಿನ್ನೆಲೆ ಇಂದು ಬೆಳಿಗ್ಗೆ ಮನೋಹರ್ ಲಾಲ್ ಕಟ್ಟರ್ ರಾಜೀನಾಮೆ ಸಲ್ಲಿಸಿದ್ದರು.
90 ಸದಸ್ಯರ ಹರಿಯಾಣ ವಿಧಾನಸಭೆಯಲ್ಲಿ ಬಿಜೆಪಿಯ 41 ಶಾಸಕರಿದ್ದು, ಜೆಜೆಪಿಯ 10 ಶಾಸಕರಿದ್ದಾರೆ. ಇವರೊಂದಿಗೆ ಸರ್ಕಾರಕ್ಕೆ 6 ಸ್ವತಂತ್ರ ಶಾಸಕರು ಬೆಂಬಲ ನೀಡಿದ್ದರು.
ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ 30 ಶಾಸಕರನ್ನು ಹೊಂದಿದ್ದು, ಐಎನ್‌ಎಲ್‌ಡಿ ಹಾಗೂ ಹೆಚ್‌ಎಲ್‌ಪಿ ಪಕ್ಷದಿಂದ ತಲಾ ಒಂದು ಶಾಸಕರಿದ್ದಾರೆ.
