ಲಿಂಗ ಸಮಾನತೆ ಬಗ್ಗೆ ಮಕ್ಕಳಿಂದ ಕಿರುಚಿತ್ರವನ್ನು ತೋರಿಸುವುದರ ಮೂಲಕ ಮಹಿಳೆಯರಿಗೆ ಜಾಗೃತಿ ಮೂಡಿಸಲಾಯಿತು. ನಮ್ಮ ದೀಪಾಲಯ ಸಂಸ್ಥೆ ಹೆಣ್ಣು ಮಕ್ಕಳಲ್ಲಿ ಜಾಗೃತಿ ಮೂಡಿಸುವುದರ ಮೂಲಕ ಸ್ವಸಹಾಯ ಗುಂಪುಗಳನ್ನು ಕಟ್ಟಿಕೊಂಡು ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು ಮುಖ್ಯ ಕೆಲಸವಾಗಿದೆ ಎಂದು ಸಂಸ್ಥೆಯ ಹಿಲರಿ ಪಿಂಟೋ ಹೇಳಿದರು.
ವಿಜಯಪು ಜಿಲ್ಲೆಯ ಇಂಡಿ ನಗರದಲ್ಲಿ ದೀಪಾಲಯ ಸಂಸ್ಥೆ ಹಾಗೂ ಸ್ವಸಹಾಯ ಸಂಸ್ಥೆಗಳ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದರು.
ಮಹಾಂತೇಶ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಅಂತಾರಾಷ್ಟ್ರೀಯ ಮಹಿಳಾ ದಿನ, ಮಹಿಳೆಯರಿಗೆ ಅತ್ಯಂತ ಸ್ಪೂರ್ತಿದಾಯಕ ದಿನವಾಗಿದೆ. ಇತಿಹಾಸದ ಉದ್ದಕ್ಕೂ ಸಮಾಜಕ್ಕೆ ಮಹಿಳೆಯರ ಕೊಡುಗೆ ಅಪಾರವಾಗಿದೆ. ಅದನ್ನು ಸ್ಮರಿಸಿಕೊಳ್ಳಲೇಬೇಕಾದ ಅವಶ್ಯಕತೆ ಇಂದಿನ ತುರ್ತು ಅಗತ್ಯ” ಎಂದರು.
ಒಡಲ ಮಹಿಳಾ ಧ್ವನಿ ಒಕ್ಕೂಟ ಜಿಲ್ಲಾ ಮುಖಂಡೆ ಡಾ. ಭುವನೇಶ್ವರಿ ಕಾಂಬಳೆ ಮಾತನಾಡಿ, “ಮಹಿಳೆಯರು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತವಾಗಿರದೆ, ಸಮಾಜದ ಪ್ರಗತಿಗೆ ಮಹಿಳೆ ತುಂಬಾ ಪ್ರಮುಖ ಪಾತ್ರವಹಿಸಿದ್ದಾಳೆ. ಹಿಂದಿನ ದಿನಮಾನಗಳಲ್ಲಿ ಮಹಿಳೆಯನ್ನು ತುಚ್ಛ ಭಾವನೆಯಿಂದ ನೋಡುತ್ತಿದ್ದರು. ಆದರೆ ಅದೀಗ ಬದಲಾಗಿದೆ. ಮಹಿಳೆಯೂ ಕೂಡ ಪುರಷನಿಗೆ ಸಮಾನಳು ಎಂಬುದನ್ನು ತೋರಿಸಿದ್ದಾಳೆ. ಪುರುಷರಂತೆ ಮಹಿಳೆಯೂ ಕೂಡ ಕೆಲಸ ಮಾಡಬಲ್ಲಳೆಂದು ತೋರಿಸಿಕೊಟ್ಟಿದ್ದಾಳೆ” ಎಂದರು.
“ಪುರುಷ ಪ್ರಧಾನ ವ್ಯವಸ್ಥೆಯನ್ನು ಮೆಟ್ಟಿನಿಂತು ಅದರ ವಿರುದ್ಧ ಧೈರ್ಯವಾಗಿ ಮುನ್ನಡೆಯುತ್ತಿರುವುದು ತುಂಬಾ ಆಶಾದಾಯಕ ಬೆಳವಣಿಗೆ” ಎಂದರು.
ಕಾರ್ಯಕ್ರಮವನ್ನು ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭ ಮಾಡಿ, ಉದ್ಘಾಟನೆಯ ಮೊದಲು ಸಂವಿಧಾನ ಪೀಠಿಕೆ ಬೋಧನೆ ಮಾಡಿದರು.
ಈ ಸುದೆದಿ ಓದಿದ್ದೀರಾ? ತುಮಕೂರು | ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಮರುಕಳಿಸಬಾರದು: ಡಾ. ನಾಗಲಕ್ಷ್ಮೀ ಚೌಧರಿ
ಸಭೆಯ ಅಧ್ಯಕ್ಷತೆಯನ್ನು ಸಹೋದರಿ ಜಾಸಿಂತ ಮಾಚಾದೊ ವಹಿಸಿದ್ದರು. ಶೈಲಜಾ ಜಾಧವ, ಸ್ವಸಹಾಯ ಮಹಿಳಾ ಒಕ್ಕೂಟದ ಅಧ್ಯಕ್ಷರು, ಶಕ್ತಿ, ಜ್ಞಾನ, ದೀಪಾ, ಶಾಂತಿ, ಸಾಧನೆ, ಸುರಕ್ಷಾ ಒಕ್ಕೂಟದಿಂದ ಅಧ್ಯಕ್ಷೆಯರಾದ ಯು ಮಾದೇವಿ ಚೆನ್ನಿರಪ್ಪಗೋಳ, ಜಯಶ್ರೀ, ಮಾತಾಬಾಯಿ ಮಾದರ, ಸವಿತಾ ಚವಾಣ್, ದೇವಿಕಾ, ರೇಣುಕಾ ನಾಟೆಕರ, ಶಾರದಾ ಮೊಸಲೆ,
ಸಿದ್ದಮ್ಮ ಗುಣಕಿ, ಶೀಲವಂತರ ಸರ್, ರಾಧಾ ನಿಂಬಳಕರ ಇದ್ದರು.