ಬೆಳಗಾವಿ ಲೋಕಸಭೆ | ಅತಿ ಹೆಚ್ಚು ಬಾರಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಲಿಂಗಾಯತರು

Date:

Advertisements

ವೇಣುಗ್ರಾಮ ಎಂದು ಕರೆಯಲ್ಪಡುತ್ತಿದ್ದ ಬೆಳಗಾವಿಯನ್ನು ಕದಂಬರು, ರಾಷ್ಟ್ರಕೂಟರು, ದೇವಗಿರಿಯ ಯಾದವರು, ದೆಹಲಿಯ ಬಹುಮನಿ ಸುಲ್ತಾನರು, ಮೊಘಲರು, ಮರಾಠ ಪೇಶ್ವೆಗಳು ಆಳಿದ್ದಾರೆ. ಇಂತಹ ಐತಿಹಾಸಿಕ ಮಹತ್ವವನ್ನು ಹೊಂದಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ರಾಜಕೀಯ ಇತಿಹಾಸವನ್ನು ಗಮನಿಸಿದಾಗ ಅತ್ಯಂತ ರೋಚಕವಾಗಿದೆ.

2024ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರವು ರಾಜ್ಯದ ಗಮನವನ್ನು ಸೆಳೆಯುತ್ತಿದೆ ಲಿಂಗಾಯತರೆ ಅಧಿಕವಾಗಿರುವ ಈ ಕ್ಷೇತ್ರದಲ್ಲಿ ಇಲ್ಲಿನ ಮತದಾರರು ಲಿಂಗಾಯತರನ್ನೆ ಹೆಚ್ಚು ಬಾರಿ ಸಂಸದರನ್ನಾಗಿ ಆಯ್ಕೆ ಮಾಡಿದ್ದು ಸ್ವಾತಂತ್ರ್ಯ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾದ ಲೋಕಸಭಾ ಸದಸ್ಯರ ವಿವರ ಈ ಕೆಳಗಿನಂತಿವೆ

1957ರಿಂದ 1962ರ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬಲವಂತರಾವ್ ದಾತಾರ್.
1963ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೇಮಾನಂದ ಕೌಜಲಗಿ.
1967ರಲ್ಲಿ ಕಾಂಗ್ರೆಸ್ ಪಕ್ಷದಿಂದ ಎನ್ ಎಮ್ ನಬಿಸಾಬ್,
1971 ಮತ್ತು 1977 ಕಾಂಗ್ರೆಸ್ ಪಕ್ಷದಿಂದ ಅಪ್ಪಯಪ್ಪ ಕೊಟ್ರಶೆಟ್ಟಿ,
1980.1984,1989,1991ರ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಷಣ್ಮುಖಪ್ಪ ಸಿದ್ನಾಳ.
1996ರಲ್ಲಿ ಜನತಾದಳ ಪಕ್ಷದಿಂದ ಶಿವಾನಂದ ಕೌಜಲಗಿ.
1998 ಭಾರತೀಯ ಜನತಾ ಪಕ್ಷದ ಬಾಬಾಗೌಡ ಪಾಟಿಲ್.
1999ರಲ್ಲಿ ಕಾಂಗ್ರೆಸ್ ಪಕ್ಷದಿಂದ ಅಮರಸಿಂಹ ಪಾಟಿಲ್.
2004, 2009, 2014, 2019 ರ ಅವಧಿಯಲ್ಲಿ ಬಿಜೆಪಿ ಪಕ್ಷದಿಂದ ಸುರೇಶ್ ಅಂಗಡಿ.
2021 ಸುರೇಶ್ ಅಂಗಡಿ ಅಕಾಲಿಕ ಮರಣದಿಂದ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಅವರ ಪತ್ನಿ ಮಂಗಳಾ ಅಂಗಡಿಯವರು ಆಯ್ಕೆ.

Advertisements

ಅತಿ ಹೆಚ್ಚು ಬಾರಿ ಸಂಸದರಾಗಿದ್ದ ಸುರೇಶ ಅಂಗಡಿ ಮತ್ತು ಷಣ್ಮುಖಪ್ಪ ಸಿದ್ನಾಳ

ಬೆಳಗಾವಿ ಲೋಕಸಭಾ ಇತಿಹಾಸದಲ್ಲಿ ಬಿಜೆಪಿ ಪಕ್ಷದಿಂದ ಸುರೇಶ ಅಂಗಡಿಯವರು 4 ಅವಧಿಗೆ ಸಂಸಂದರಾಗಿ ಆಯ್ಕೆ ಆಗಿ ಕೇಂದ್ರ ಸರ್ಕಾರದ ಮಂತ್ರಿ ಮಂಡಲದ ರಾಜ್ಯ ರೈಲ್ವೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಷಣ್ಮುಖಪ್ಪ ಸಿದ್ನಾಳವರು ಸಹ 4 ಬಾರಿ ಸಂಸದರಾಗಿದ್ದಾರೆ

ಬೆಳಗಾವಿ ಲೋಕಸಭಾ ಜಾತಿ ಲೆಕ್ಕಾಚಾರ

ಬೆಳಗಾವಿ ಲೋಕಸಭೆಯಲ್ಲಿ ಒಟ್ಟು 18 ಲಕ್ಷ ಮತದಾರರಿದ್ದು ಸುಮಾರು 8ಲಕ್ಷ ಅಂದರೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತ ಸಮುದಾಯದ ಮತಗಳೆ ನಿರ್ಣಾಯಕ ವಾಗಿದ್ದು ನಂತರ ಕುರುಬ ಸಮುದಾಯ ಮತ್ತು ಮರಾಠಾ ಮಾತುಗಳು ಹಾಗೂ ಹಿಂದುಳಿದ, ಪರಿಶಿಷ್ಟ ಸಮುದಾಯದ ಮತಗಳು ಸಹ ಚುನಾವಣೆಯ ಮೇಲೆ ಪ್ರಭಾವ ಬೀರಲಿವೆ.

ಸ್ವಾತಂತ್ರ್ಯ ನಂತರ ನಡೆದ ಲೋಕಸಭಾ ಚುನಾವಣೆಗಳಲ್ಲಿ ಇಲ್ಲಿಯವರೆಗೆ 14 ಬಾರಿ ಲಿಂಗಾಯತ ಸಮುದಾಯದ ಅಭ್ಯರ್ಥಿಗಳೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಮರಾಠಾ, ಹಾಗೂ ಅಹಿಂದ ಸಮುದಾಯದ ಮತಗಳು ನಂತರದ ಸ್ಥಾನದಲ್ಲಿವೆ.

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಬಲಾಬಲ

ಬೆಳಗಾವಿ ಲೋಕಸಭೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ 5 ಶಾಸಕರಿದ್ದಾರೆ
ಬೆಳಗಾವಿ ಗ್ರಾಮಿಣ: ಲಕ್ಷ್ಮೀ ಹೆಬ್ಬಾಳ್ಕರ
ಬೆಳಗಾವಿ ಉತ್ತರ: ರಾಜು (ಆಸಿಫ್ ಸೆಠ್)
ಬೈಲಹೊಂಗಲ: ಮಹಾಂತೇಶ ಕೌಜಲಗಿ
ಸವದತ್ತಿ: ವಿಶ್ವಾಸ ವೈದ್ಯ
ರಾಮದುರ್ಗ: ಅಶೋಕ ಪಟ್ಟಣ‌.

ಬಿಜೆಪಿ ಪಕ್ಷದ 3 ಶಾಸಕರಿದ್ದು
ಅರಭಾವಿ: ಬಾಲಚಂದ್ರ ಜಾರಕಿಹೊಳಿ
ಗೋಕಾಕ: ರಮೇಶ ಜಾರಕಿಹೊಳಿ
ಬೆಳಗಾವಿ ದಕ್ಷಿಣ: ಅಭಯ ಪಾಟೀಲ.

2024ರ ಲೋಕಸಭಾ ಚುನಾವಣೆ ಬಿಜೆಪಿಯಿಂದ ಜಗದೀಶ್‌ ಶೆಟ್ಟರ್‌ಗೆ ಟಿಕೆಟ್‌ ಘೋಷಣೆಯಾಗಿದೆ. ಕಾಂಗ್ರೆಸ್‌ ಅಭ್ಯರ್ಥಿ ಹೆಸರು ಇನ್ನೂ ಪ್ರಕಟವಾಗಿಲ್ಲ. ಲಕ್ಷ್ಮೀ ಹೆಬ್ಬಾಳಕರ ಅವರ ಪುತ್ರನ ಹೆಸರು ಚಾಲ್ತಿಯಲ್ಲಿದೆ.

ಸುನಿಲ್
ಸುನಿಲ್ ಹಂಪನ್ನವರ
+ posts

ಬೆಳಗಾವಿ ಜಿಲ್ಲಾ ಸಂಯೋಜಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸುನಿಲ್ ಹಂಪನ್ನವರ
ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

Download Eedina App Android / iOS

X