ಹುಮನಾಬಾದ ಪಟ್ಟಣದ ವಿವಿಧ ಬಡಾಣೆಯಲ್ಲಿ ಸುಮಾರು 15-20 ದಿವಸಗಳಿಂದ ನೀರಿನ ಸಮಸ್ಯೆ ಎದುರಾಗಿದ್ದು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ. ಕೂಡಲೇ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಬಡಾವಣೆಯ ಮಹಿಳೆಯರು ಭಾರತೀಯ ದಲಿತ ಪ್ಯಾಂಥರ್ ನೇತ್ರತ್ವದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಪುರಸಭೆ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
“ಸುಮಾರು 15-20 ದಿವಸಗಳಿಂದ ಪಟ್ಟಣ ವಿವಿಧ ಬಡಾವಣೆಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಕುಡಿಯುವ ನೀರಿಗಾಗಿ ಅಲೆದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಕ್ಯಾರೇ ಎನ್ನುತ್ತಿಲ್ಲ. ಪಟ್ಟಣದ ಉಪಾರ ಗಲ್ಲಿಯಲ್ಲಿರುವ ಕೊಳವೆ ಬಾಔಇಯಿದ್ದರೂ ನೀರಿನ ಟ್ಯಾಂಕ್ ಇಲ್ಲದ ಕಾರಣ ನೀರು ಪೋಲಾಗುತ್ತಿದ್ದು, ಹೊಸ ನೀರಿನ ಟ್ಯಾಂಕ್ ಅಳವಡಿಸಬೇಕು” ಎಂದು ಒತ್ತಾಯಿಸಿದರು.
ಮರಿಗೆಮ್ಮಾ ದೇವಸ್ಥಾನದ ಹತ್ತಿರ ಒಂದು ಹೊಸ ಬೋರವೆಲ್ ಹಾಗೂ ನೀರಿನ ಟ್ಯಾಂಕ್ ಅಳವಡಿಸಬೇಕು. ಉಪಾರ ಗಲ್ಲಿಯಲ್ಲಿ ಅಲ್ಲಲ್ಲಿ ನೀರಿನ ಪೈಪ್ ಒಡೆದು ಹಾಳಾಗಿದ್ದು ದುರಸ್ತಿ ಮಾಡಿಸಬೇಕು. ಒಂದು ವೇಳೆ ಬಡವಣೆಗಳಲ್ಲಿನ ನೀರಿನ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಪುರಸಭೆ ಕಚೇರಿ ಮುಂದೆ ಧರಣಿ ಸತ್ಯಗ್ರಹ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಚುನಾವಣೆ ಬಾಂಡ್ | ಬಿಜೆಪಿಗೆ 6 ಸಾವಿರ ಕೋಟಿ ದೇಣಿಗೆ, ತನಿಖೆ ಮೂಲಕ ದೇಶಕ್ಕೆ ಸತ್ಯ ತಿಳಿಯಲಿ: ಮಲ್ಲಿಕಾರ್ಜುನ ಖರ್ಗೆ
ಈ ಸಂದರ್ಭದಲ್ಲಿ ಭಾರತೀಯ ದಲಿತ ಪ್ಯಾಂಥರ್ ತಾಲೂಕಾ ಅಧ್ಯಕ್ಷ ಗಣಪತಿ ಅಷ್ಟೂರೆ, ಉಪಾಧ್ಯಕ್ಷ ಪೀರಪ್ಪ ಪಡತಲ್ ಸೇರಿದಂತೆ ಧನರಾಜ ಬರ್ಲಾ, ಶ್ರೀಕಾಂತ್ ಜಂಬಗಿ, ಕಿಶೋರ್ ಸೂರ್ಯವಂಶಿ, ಅಮೀನಾ ಬೇಗಂ, ಭೀಮಾಬಾಯಿ, ಸುಶಿಲಮ್ಮ, ಶಿಲ್ಪಾ, ಪೆಂಟಮ್ಮ ಹಾಗೂ ಇತರರಿದ್ದರು.
ವರದಿ ಮಾಹಿತಿ : ಭೀಮರೆಡ್ಡಿ ಸಿಂಧನಕೇರಾ