ಭಾರತದ ಅಪೆಕ್ಸ್ ಕ್ರಿಕೆಟ್ ಬೋರ್ಡ್ ಪ್ರಕಟಿಸಿದ ಆಟಗಾರರ ಪಟ್ಟಿಯಲ್ಲಿ ಶೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್‌ರನ್ನು ಕೈಬಿಟ್ಟಿರುವ ಬಿಸಿಸಿಐ ವಿರುದ್ಧ ಭಾರತ ತಂಡದ ಮಾಜಿ ಸ್ಪನ್ನರ್ ಹರ್ಭಜನ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ. ಅವರನ್ನು ಹೊರಗಿಟ್ಟಿರುವುದು ಕ್ರಿಕೆಟ್ ಹಾದಿಯ ಅಂತ್ಯವೇನಲ್ಲ. ಮುಂದಿನ ಕ್ರಿಕೆಟ್ ಸರಣಿಗಳಲ್ಲಿ ತಂಡಕ್ಕೆ ಅವರ ಅವಶ್ಯಕತೆ ಇದ್ದೇ ಇರುತ್ತದೆ ಎಂದು ಹರ್ಭಜನ್ ಹೇಳಿದ್ದಾರೆ.
“ಪ್ರತಿ ಆಟಗಾರರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ, ಯಾರು ಆಯ್ಕೆಯಾಗುತ್ತಾರೆ ಎಂಬುದು ವಿಭಿನ್ನ ಅಂಶವಾಗಿದೆ. ಆಯ್ಕೆಯು ಅವರ ಫಾರ್ಮ್ ಮತ್ತು ತಂಡಕ್ಕೆ ಅವರ ಅಗತ್ಯವಿದೆಯೇ ಎಂಬುದನ್ನು ಅವಲಂಬಿಸಿರುತ್ತದೆ. ಅಪೆಕ್ಸ್ ಕ್ರಿಕೆಟ್ ಬೋರ್ಟ್‌ನಲ್ಲಿ ಅವರು ಸ್ಥಾನ ಪಡೆಯದೇ ಇರುವುದರ ಅರ್ಥ, ಅವರ ಹಾದಿಯ ಅಂತ್ಯವೆಂದಲ್ಲ” ಎಂದು ಹರ್ಭಜನ್ ವಿವರಿಸಿದ್ದಾರೆ.
“ಅವರನ್ನು ಹೊರಗಿಟ್ಟಿರುವುದು ಅವರಿಗೆ ಕಲಿಕೆಗೆ ಸಮಯ ನೀಡುತ್ತದೆ. ನಾನು ಇದನ್ನು ರಚನಾತ್ಮಕ ರೀತಿಯಲ್ಲಿ ನೋಡುತ್ತೇನೆ. ಇಲ್ಲಿಂದ ಅವರು ಉತ್ತಮ ಆಟಗಾರರಾಗಿ ಹೊರಹೊಮ್ಮಬಹುದೆಂದು ನಾನು ಭಾವಿಸುತ್ತೇನೆ. ಆದರೆ, ನಾವು ಇನ್ನೂ ಅವರ ಮನಸ್ಸಿನಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಯಲಾಗಿಲ್ಲ. ಇಬ್ಬರೂ ಅದ್ಭುತ ಕ್ರಿಕೆಟಿಗರು. ಭವಿಷ್ಯದಲ್ಲಿ ಅವರು ಭಾರತಕ್ಕಾಗಿ ಸಾಕಷ್ಟು ಪಂದ್ಯಗಳನ್ನು ಗೆಲ್ಲುತ್ತಾರೆ” ಎಂದು ಹರ್ಭಜನ್ ಹೇಳಿದ್ದಾರೆ.
Very well said bhajji