ರಾಯಚೂರು | ರಾಜಧನ ಆಧಾರಿತ ಮರಳು ಸಾಗಾಣಿಕೆಗೆ ಅವಕಾಶ ಕಲ್ಪಿಸುವಂತೆ ಆಗ್ರಹ

Date:

Advertisements

ರಾಯಚೂರು ಜಿಲ್ಲೆಯಲ್ಲಿ ರಾಜಧನ ಆಧಾರಿತ ಮರಳು ಸಾಗಾಣಿಕೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಜಿಲ್ಲಾ ಟಿಪ್ಪರ್ ಮಾಲೀಕರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.

“ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಜನಪ್ರತಿನಿಧಿಗಳ ಅನ್ಯಾಯ ಧೋರಣೆ ಮತ್ತು ವೈಯಕ್ತಿಕ ಪ್ರತಿಷ್ಠೆಯಿಂದಾಗಿ ರಾಯಲ್ಟಿ ಆಧಾರಿತ ಮರಳು ಸಾಗಾಣಿಕೆಯನ್ನೇ ಉಪ ಜೀವನವನ್ನಾಗಿಸಿಕೊಂಡ ನೂರಾರು ಟಿಪ್ಪರ್ ಮಾಲೀಕರು, ಚಾಲಕರ ಬದುಕು ಬೀದಿಗೆ ಬರುವಂತಾಗಿದೆ. ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದಿರುವ ಡಾ. ಶರಣ ಪ್ರಕಾಶ್ ಪಾಟೀಲ್ ಅವರು ಜಿಲ್ಲೆಗೆ ನೆಪ ಮಾತ್ರಕ್ಕೆ ಮಾತ್ರ ಉಸ್ತುವಾರಿ ಸಚಿವರಾಗಿದ್ದು, ನಮ್ಮ ಸಮಸ್ಯೆಗಳನ್ನೇ ಆಲಿಸದ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ಸಕಾರಣವಿಲ್ಲದೇ ಕಳೆದ 6 ತಿಂಗಳಿಂದ ಕಾನೂನಾತ್ಮಕ ಮರಳು ಸಾಗಾಣಿಕೆಗೆ ನಿರ್ಬಂಧವೇರಿರುವುದು ಸಮಂಜಸವಲ್ಲದ ನಿರ್ಧಾರವಾಗಿದೆ” ಎಂದು ದೂರಿದರು.

“ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಕಟ್ಟಡ, ಸೇತುವೆ, ಬ್ರಿಡ್ಜ್, ಪ್ರಮುಖ ರಸ್ತೆಗಳು ಸಾರ್ವಜನಿಕ ಮನೆ ನಿರ್ಮಾಣ ಸೇರಿ ಇತರೆ ಮೂಲಸೌಕರ್ಯಗಳ ಕಾಮಗಾರಿಗೆ ಮರಳು ಪೂರೈಕೆ ಅನಿವಾರ್ಯವಾಗಿದ್ದು, ಮರಳು ಸಾಗಾಣಿಕೆಯನ್ನೇ ಅವಲಂಬಿಸಿ ಸಾಲಮಾಡಿ ಖರೀದಿಸಿರುವ ಕಂತು ಕಟ್ಟಲಾಗದ ಸ್ಥಿತಿಯ ಖಾಸಗಿ ಫೈನಾನ್ಸ್ ಕಿರುಕುಳಕ್ಕೆ ಟಿಪ್ಪರ್ ಮಾಲೀಕರು ಬೇಸತ್ತಿದ್ದು, ಬರಗಾಲ ಭೀಕರತೆಯಲ್ಲಿ ಚಾಲಕರ ಕುಟುಂಬಗಳ ಬದುಕು ಬೀದಿಗೆ ಬರುವಂತಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisements

“ಕಲಬುರಗಿ ಸೇರಿದಂತೆ ಸೇಡಂ, ಚಿತ್ತಾಪುರ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಮರಳುಗಾರಿಕೆ ರಾಜಾರೋಷವಾಗಿ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಮಾತ್ರ ನಮ್ಮ ಹಕ್ಕಾಗಿರುವ ರಾಯಲ್ಟಿ ಆಧಾರಿತ ಮರಳು ಸಾಗಾಣಿಕೆಗೆ ನಿರ್ಬಂಧವೇರಿರುವುದು ಖಂಡನೀಯ” ಎಂದರು.

ಕಳೆದ 6 ತಿಂಗಳಿಂದ ಜಿಲ್ಲಾದ್ಯಂತ ಜಲ್ಲಿ ಕ್ರಷರ್, ಮಣ್ಣು ಮತ್ತು ಮರಳು ಸಾಗಾಣಿಕೆಗೆ ಪ್ರತ್ಯಕ್ಷ ಸಹಕರಿಸಿ, ಪ್ರತ್ಯಕ್ಷವಾಗಿ ಕಣ್ಮರೆಯಾಗುವ ಉಸ್ತುವಾರಿ ಸಚಿವರು, ಕನಿಷ್ಟಪಕ್ಷ ಕಾನೂನಾತ್ಮಕ ಮರಳು ಸಾಗಾಣಿಕೆ ಸಭೆಗೆ ಯಾವುದೇ ಮುತುವರ್ಜಿ ವಹಿಸದೇ ಕಲಬುರಗಿ ಜಿಲ್ಲೆಯ ಮರಳು ಸಾಗಾಣಿಕೆಗೆ ಬೆಣ್ಣೆ, ರಾಯಚೂರು ಜಿಲ್ಲೆಗೆ ಸುಣ್ಣ ಎನ್ನುವ ಧೋರಣೆ ಅನುಸರಿಸುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಹಲವು ವರ್ಷಗಳಿಂದಲೂ ಮರಳು ಸಾಗಾಣಿಕೆಯ ರಾಜಧನ ಮತ್ತು ಕೋಟ್ಯಂತರ ತೆರಿಗೆ ಸಂಗ್ರಹದಲ್ಲಿ ರಾಜ್ಯದಲ್ಲಿಯೇ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಕಳೆದ 6 ತಿಂಗಳಿಂದ ಜಿಲ್ಲೆಯಲ್ಲಿ ಮರಳು ಸಾಗಾಣಿಕೆ ನಿರ್ಬಂಧ ಹಿನ್ನೆಲೆ ಜಿಲ್ಲಾಡಳಿತಕ್ಕೆ ಸಂದಾಯವಾಗಬೇಕಿದ್ದ ಕೋಟ್ಯಂತರ ತೆರಿಗೆ ಹಣ ನಷ್ಟವಾಗುವಂತಾಗಿದೆ. ಪ್ರಗತಿ ಹಂತದ ಕಾಮಗಾರಿ ನಿರ್ಮಾಣಕ್ಕಾಗಿ ಜಿಲ್ಲಾಡಳಿತದಿಂದ ಮರಳು ಸಾಗಾಣಿಕೆ ಮಾಡಲು ಹಟ್ಟಿ ಚಿನ್ನದ ಗಣಿಯಿಂದ ಜಿಲ್ಲೆಯಲ್ಲಿ ಪ್ರತ್ಯೇಕ 3 ಕ್ವಾರಿಗಳ ನಿರ್ವಹಣೆಗೆ ಜಿಲ್ಲಾಡಳಿತ ಪರವಾನಗಿ ನೀಡಿದ್ದಾರೆ” ಎಂದರು.

“ನಿರ್ದಿಷ್ಟ ಕಾರಣಗಳಿಲ್ಲದೇ ಮರಳು ಸಾಗಾಣಿಕೆಗೆ ಜನಪ್ರತಿನಿಧಿಗಳ ಮೌಖಿಕ ನೆಪ ಹೇಳಿ ಅವಕಾಶ ಕಲ್ಪಿಸದಿರುವುದು ಅತ್ಯಂತ ಖೇದಕರವಾಗಿದ್ದು, ಜಿಲ್ಲಾಡಳಿತ ಈ ಕೂಡಲೇ ಎಚ್ಚೆತ್ತು, ಟಿಪ್ಪರ್ ಮಾಲೀಕರ ಸಮಸ್ಯೆಗಳಿಗೆ ಸಕಾರಾತ್ಮಕ ಸ್ಪಂದಿಸಿ ಕಾನೂನಾತ್ಮಕವಾಗಿ ರಾಜಧನ ಆಧಾರಿತ ಮರಳು ಸಾಗಾಣಿಕೆಗೆ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದಲ್ಲಿ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಧೋರಣೆ ಖಂಡಿಸಿ ರಸ್ತೆಯುದ್ದಕ್ಕೂ ಟಿಪ್ಪರ್ ನಿಲುಗಡೆ ಮಾಡಿ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತದೆ” ಎಂದು ಎಚ್ಚರಿಸಿದರು.

ಈ ಸುದ್ದಿ ಓದಿದ್ದೀರಾ? ತುಮಕೂರು | ಕಾಂಗ್ರೆಸ್‌ ಮುಖಂಡನ ಮೇಲೆ ಗುಬ್ಬಿ ಶಾಸಕ ಶ್ರೀನಿವಾಸ್ ಹಲ್ಲೆ; ಪ್ರಕರಣ ದಾಖಲು

ಈ ಸಂದರ್ಭದಲ್ಲಿ ಅಧ್ಯಕ್ಷ ಕೆ ಸಿ ಅಣ್ಣಯ್ಯ, ಉಪಾಧ್ಯಕ್ಷ ಶಿವಮೂರ್ತಿ ಮಾಲೀ ಪಾಟೀಲ್, ಅಶೋಕ ಪೋತಗಲ್, ಪ್ರಸಾದ್, ವಿನೋದರೆಡ್ಡಿ, ರಾಮನಗೌಡ, ಆಂಜನೇಯ, ಶೇಖರ್, ಮಧು ಪಾಟೀಲ್, ಶಿವನಗೌಡ, ರವಿ, ಪ್ರಕಾಶ, ಹನುಮಂತ್ರಾಯ, ಶಿವರಾಜ, ರಾಜೇಶ, ಲಕ್ಷ್ಮಿಕಾಂತರೆಡ್ಡಿ, ಶಶಿಕುಮಾರ್ ಸೇರಿದಂತೆ ಇತರರು ಇದ್ದರು.

ವರದಿ : ಹಫೀಜುಲ್ಲ

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

Download Eedina App Android / iOS

X