ಇಂದು ಚುನಾವಣಾ ಆಯೋಗವು ಲೋಕಸಭೆ ಚುನಾವಣೆ ದಿನಾಂಕ ಘೋಷಿಸುವುದರ ಜೊತೆಗೆಯೇ ನಾಲ್ಕು ರಾಜ್ಯಗಳಲ್ಲಿನ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಘೋಷಿಸಿದೆ.
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ಈ ನಾಲ್ಕು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣಾ ದಿನಾಂಕವನ್ನು ಪ್ರಕಟಿಸಿದ್ದಾರೆ.
ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ
ಆಂಧ್ರ ಪ್ರದೇಶ ವಿಧಾನಸಭೆಯ 175 ಮೇ 13ರಂದು ಮತದಾನ ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಹೊರಬೀಳಲಿದೆ. ಎಲ್ಲವೂ ಒಂದೇ ಹಂತದಲ್ಲಿ ನಡೆಯಲಿದೆ.
ಶನಿವಾರದಂದು ಭಾರತೀಯ ಚುನಾವಣಾ ಆಯೋಗವು ಘೋಷಿಸಿದ ಪೂರ್ಣ ವೇಳಾಪಟ್ಟಿ ಮತ್ತು ದಿನಾಂಕಗಳ ಪ್ರಕಾರ ಮೇ 13, 2024 ರಂದು ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಲಿದೆ.
ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯ ಮತಗಳ ಎಣಿಕೆಯ ಫಲಿತಾಂಶವು ಲೋಕಸಭೆಯ ಜೊತೆಗೆ ಪ್ರಕಟವಾಗಲಿದೆ.
SCHEDULE for General Elections to Andhra Pradesh Legislative Assembly. Details 👇#ECI #AssemblyElections2024 #ElectionSchedule #GeneralElections2024 #MCC pic.twitter.com/N8N80EeolV
— Election Commission of India (@ECISVEEP) March 16, 2024
ಸಿಕ್ಕಿಂ ಅಸೆಂಬ್ಲಿ ಚುನಾವಣೆ
ಸಿಕ್ಕಿಂ ರಾಜ್ಯದ 60 ವಿಧಾನಸಭಾ ಸ್ಥಾನಗಳಿಗೆ ಏಪ್ರಿಲ್ 19 ರಂದು ಮತದಾನ ಆರಂಭವಾಗಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ. ಪ್ರಸ್ತುತ ಸರ್ಕಾರದ ಅಧಿಕಾರಾವಧಿಯು ಜೂನ್ 2 ರಂದು ಕೊನೆಗೊಳ್ಳಲಿದೆ.
SCHEDULE for General Elections to sikkim Legislative Assembly . Details 👇#ECI #AssemblyElections2024 #ElectionSchedule #GeneralElections2024 pic.twitter.com/bwufD4jQQp
— Election Commission of India (@ECISVEEP) March 16, 2024
ಅರುಣಾಚಲ ಪ್ರದೇಶ ವಿಧಾನಸಭೆ ಚುನಾವಣೆ
ಅರುಣಾಚಲ ಪ್ರದೇಶದಲ್ಲಿ ಏಪ್ರಿಲ್ 19 ರಂದು ಚುನಾವಣೆ ನಡೆಯಲಿದೆ. ಜೂನ್ 4 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು. ಅರುಣಾಚಲ ಪ್ರದೇಶದ ಶಾಸಕಾಂಗ ಸಭೆಯು 60 ಸದಸ್ಯರನ್ನು ಹೊಂದಿದೆ. 2019ರ ಏಪ್ರಿಲ್‌ನಲ್ಲಿ ನಡೆದ ಕೊನೆಯ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು.
SCHEDULE for General Elections to Arunachal Pradesh Legislative Assembly . Details 👇#ECI #AssemblyElections2024 #ElectionSchedule #GeneralElections2024 pic.twitter.com/Tot5GKKEll
— Election Commission of India (@ECISVEEP) March 16, 2024
ಒಡಿಶಾ ವಿಧಾನಸಭೆ ಚುನಾವಣೆ
147 ಸದಸ್ಯ ಬಲದ ಒಡಿಶಾ ವಿಧಾನಸಭೆಗೆ ನಾಲ್ಕು ಹಂತಗಳಲ್ಲಿ ಮತದಾನ ನಡೆಯಲಿದೆ. ಚುನಾವಣಾ ಆಯೋಗದ ಪ್ರಕಟಣೆಯಂತೆ ಮತದಾರರು ಮೇ 13, ಮೇ 20, ಮೇ 25, ಜೂನ್ 1 ರಂದು ನಾಲ್ಕು ದಿನಾಂಕಗಳಲ್ಲಿ ಮತ ಚಲಾಯಿಸಲಿದ್ದಾರೆ. ಮತಗಳ ಎಣಿಕೆ ಜೂನ್ 4 ರಂದು ನಡೆಯಲಿದೆ.
2019 ರಲ್ಲಿ ಚುನಾಯಿತವಾಗಿರುವ ಪ್ರಸ್ತುತ ವಿಧಾನಸಭೆಯ ಅವಧಿಯು ಜೂನ್ 2, 2024 ರಂದು ಮುಕ್ತಾಯಗೊಳ್ಳಲಿದೆ.
SCHEDULE for General Elections to odisha Legislative Assembly . Details 👇#ECI #AssemblyElections2024 #ElectionSchedule #GeneralElections2024 pic.twitter.com/SXqbwU1u0d
— Election Commission of India (@ECISVEEP) March 16, 2024
