ದೇಶದಲ್ಲಿ ಚುನಾವಣಾ ಬಾಂಡ್ ಮೂಲಕ ಅತೀ ಅಧಿಕ ದೇಣಿಗೆಯನ್ನು ಪಡೆದ ಆಡಾಳಿತರೂಢ ಬಿಜೆಪಿ, ಚುನಾವಣಾ ಬಾಂಡ್ ಹೆಸರಿನಲ್ಲಿ ಹಗರಣ ನಡಸಿದೆ ಎಂದು ಆರೋಪಿಸಲಾಗುತ್ತಿದೆ. ಇದೇ ಸಮಯದಲ್ಲಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ “ಚುನಾವಣಾ ಬಾಂಡ್ ಒಂದು ಪ್ರಯೋಗ” ಎಂದಿದ್ದಾರೆ.
ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ಭಾನುವಾರ ದತ್ತಾತ್ರೇಯ ಹೊಸಬಾಳೆ ಅವರನ್ನು ಮೂರು ವರ್ಷಗಳ ಅವಧಿಗೆ ಸರಕಾರ್ಯವಾಹರಾಗಿ (ಪ್ರಧಾನ ಕಾರ್ಯದರ್ಶಿ) ಆಯ್ಕೆ ಮಾಡಿದೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಕೂಡಾ ಈ ಸಭೆಯಲ್ಲಿ ಭಾಗಿಯಾಗಿದ್ದರು. ಇದಾದ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ದತ್ತಾತ್ರೇಯ, “ಚುನಾವಣಾ ಬಾಂಡ್ ಒಂದು ಪ್ರಯೋಗ. ಅದು ಎಷ್ಟು ಪರಿಣಾಮಕಾರಿ ಎಂಬುವುದು ನಿಮಗೆ ಮುಂದಿನ ದಿನಗಳಲ್ಲಿ ತಿಳಿಯುತ್ತದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಚುನಾವಣಾ ಬಾಂಡ್ | ಬಿಜೆಪಿ-ಮೋದಿ ಭದ್ರಕೋಟೆ ಛಿದ್ರಗೊಳಿಸಲು ವಿಪಕ್ಷಗಳಿಗೆ ಸುವರ್ಣಾವಕಾಶ
“ಚುನಾವಣಾ ಬಾಂಡ್ ಏನು ಹೊಸತಲ್ಲ, ಇಂತಹ ಯೋಜನೆಗಳನ್ನು ಈ ಹಿಂದೆಯೂ ಜಾರಿ ಮಾಡಲಾಗಿದೆ. ಬದಲಾವಣೆಯನ್ನು ನಾವು ಪರಿಚಯಿಸಿದಾಗ ಅಲ್ಲಿ ಪ್ರಶ್ನೆಗಳು ಏಳುವುದು ಸಹಜ. ಇವಿಎಂ ಆರಂಭಿಸಿದಾಗಲೂ ಪ್ರಶ್ನೆ ಮಾಡಲಾಗಿತ್ತು” ಎಂದರು.
“ಹೊಸದಾಗಿ ಯಾವುದೇ ಯೋಜನೆ, ಕಾರ್ಯ ಆರಂಭಿಸಿದರೂ ಪ್ರಶ್ನೆಗಳು ಸಹಜ. ಆದರೆ ಅದು ಎಷ್ಟು ಪರಿಣಾಮಕಾರಿ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯುತ್ತದೆ. ಅದರಿಂದಾಗಿ ಚುನಾವಣಾ ಬಾಂಡ್ ಅನ್ನು ಈಗ ಪ್ರಯೋಗ ಮಾಡಬೇಕು ಎಂದು ಸಂಘದ ಅಭಿಪ್ರಾಯ” ಎಂದು ದತ್ತಾತ್ರೇಯ ತಿಳಿಸಿದರು.
ಚುನಾವಣಾ ಆಯೋಗವು ಗುರುವಾರ ಚುನಾವಣಾ ಬಾಂಡ್‌ನ ಮಾಹಿತಿಯನ್ನು ಬಿಡುಗಡೆ ಮಾಡಿದ್ದು, ಹಲವಾರು ಬಿಲಿಯನೇರ್‌ಗಳು, ಚಿರಪರಿಚಿತವಲ್ಲದ ಸಂಸ್ಥೆಗಳು ಬಾಂಡ್ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿರುವ ಬಹಿರಂಗವಾಗಿದೆ. ದೇಶದಲ್ಲೇ ಅತೀ ಅಧಿಕ ದೇಣಿಗೆ ಪಡೆದ ಪಕ್ಷ ಬಿಜೆಪಿಯಾಗಿದೆ. ಭಾನುವಾರ ಆಯೋಗ ಹೆಚ್ಚುವರಿ ಡೇಟಾ ಬಿಡುಗಡೆ ಮಾಡಿದ್ದು ಸಿಪಿಐಎಂ, ಸಿಪಿಐ ಸೇರಿದಂತೆ ಎಡಪಕ್ಷಗಳು ಬಾಂಡ್ ಮೂಲಕ ಯಾವುದೇ ದೇಣಿಗೆ ಪಡೆಯದ ಪಕ್ಷಗಳಾಗಿದೆ.
ಬ್ರಹ್ಮಾಂಡ ಬೃಷ್ಠಾಚಾರ ಮಾಡಲು ಒಂದೊಂದು ಪ್ರಯೋಗ,,ಜನರ ತೆರಿಗೆ ಹಣದಲ್ಲಿ ಕಟ್ಟಲಾಗಿರುವ ಸರ್ಕಾರಿ ಸಂಸ್ಥೆಗಳನ್ನು ಮತ್ತು ಬ್ಯಾಂಕುಗಳನ್ನು ದಿವಾಳಿ ಮಾಡಿ ಆಪ್ತ ಕಳ್ಳೋದ್ಯಮಿಗಳಿಗೆ ಮಾರುವುದು ಒಂದು ಪ್ರಯೋಗ,,,, ದೇಶವನ್ನು ದಿವಾಳಿ ಮಾಡಿ ಕೆಲವೇ ವರ್ಗಗಳು ಮತ್ತು ಆಪ್ತರು ಚೆನ್ನಾಗಿ ಹಣ ಮಾಡಿ ಉಳಿದ ದೇಶದ ಬಡಹಿಂದೂಗಳನ್ನು ಭಿಕ್ಷೆ ಬೇಡುವಂತೆ ಮಾಡುವುದು ಹಿಂದುತ್ವದ ರಾಜಕೀಯದ ಕೊನೆಯ ಪ್ರಯೋಗ,,,,ರಾಷ್ಟ್ರವಾದದ ಅಪರಾವತಾರಗಳು,,,, ದೇಶವನ್ನು ದೇವರೂ ಕಾಪಾಡಲಾಗದ ದುಸ್ಥಿತಿಗೆ ತಂದು ನಿಲ್ಲಿಸುವರು