ಉತ್ತರ ಕನ್ನಡ ಲೋಕಸಭಾ ಕ್ಷೇತ್ರ | ಬಿಜೆಪಿ ಭದ್ರಕೋಟೆಯಲ್ಲಿ ಹೊಸಬರಿಗೆ ಮಣೆ, ಕಾಂಗ್ರೆಸ್‌ನಿಂದ ಮಹಿಳಾ ಅಭ್ಯರ್ಥಿ ಕಣಕ್ಕೆ?

Date:

Advertisements

ಉತ್ತರ ಕನ್ನಡ ಕರಾವಳಿ ಜಿಲ್ಲೆಗಳಲ್ಲಿ ಒಂದು. ಗೋವಾ ರಾಜ್ಯ, ಧಾರವಾಡ, ಬೆಳಗಾವಿ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳೊಂದಿಗೆ ತನ್ನ ಗಡಿಗಳನ್ನು ಹಂಚಿಕೊಂಡಿದೆ. ಪಶ್ಚಿಮಕ್ಕೆ ಅರಬ್ಬಿ ಸಮುದ್ರವಿದೆ. ಅತಿಹೆಚ್ಚು ಅರಣ್ಯಪ್ರದೇಶದಿಂದ ಕೂಡಿರುವ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾದ ಕ್ಷೇತ್ರ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರವು ಹಿಂದೆ ಕೆನರಾ ಲೋಕಸಭಾ ಕ್ಷೇತ್ರ ಎಂದು ಕರೆಯಲಾಗುತ್ತಿತ್ತು. 2008ರಲ್ಲಿ ಸಂಸದೀಯ ಕ್ಷೇತ್ರಗಳ ವಿಂಗಡಣೆಯ ನಂತರ, ಈ ಕ್ಷೇತ್ರವನ್ನು ಮರುನಾಮಕರಣ ಮಾಡಲಾಯಿತು. ಕ್ಷೇತ್ರ ವಿಂಗಣೆಯ ನಂತರ ಮೂರು ಚುನಾವಣೆ ನಡೆದಿದ್ದು ಮೂರು ಬಾರಿಯೂ ಬಿಜೆಪಿಯ ಅನಂತಕುಮಾರ್ ಹೆಗಡೆ ಸಂಸದರಾಗಿ ಆಯ್ಕೆಯಾಗಿದ್ದಾರೆ.

ದಶಕಗಳಿಂದ ಬಿಜೆಪಿ ಭದ್ರಕೋಟೆಯಾಗಿರುವ ಈ ಕ್ಷೇತ್ರವು ಹಾಲಿ ಸಂಸದ ಅನಂತಕುಮಾರ್ ಹೆಗಡೆ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯರಾಗಿಲ್ಲದೆ ಹಿಂದೆ ಸರಿದಿರುವುದರಿಂದ ಬಿಜೆಪಿ ಹೊಸ ಮುಖಕ್ಕೆ ಹುಡುಕಾಟ ನಡೆಸಿದೆ. ವಿಶ್ವೇಶ್ವರ ಹೆಗಡೆ ಕಾಗೇರಿ, ಚಕ್ರವರ್ತಿ ಸೂಲಿಬೆಲೆ ಮತ್ತು ಹರಿಪ್ರಕಾಶ್ ಕೋಣೆಮನೆ ಹೆಸರು ಕೇಳಿಬರುತ್ತಿದೆ. ಇತ್ತ ಕಾಂಗ್ರೆಸ್ ಮಹಿಳಾ ಅಭ್ಯರ್ಥಿಯಾಗಿ ಅಂಜಲಿ ನಿಂಬಾಳ್ಕರ್ ಅಥವಾ ರವೀಂದ್ರ ನಾಯಕ್ ಅವರನ್ನು ಕಣಕಿಳಿಸುವ ಚಿಂತನೆ ನಡೆಸಿದೆ.

Advertisements

ಉತ್ತರಕನ್ನಡ ಲೋಕಸಭಾ ಕ್ಷೇತ್ರ ಬೆಳಗಾವಿಯ ಕಿತ್ತೂರು, ಖಾನಾಪುರ ಎರಡು ವಿಧಾನಸಭಾ ಕ್ಷೇತ್ರ ಹಾಗೂ ಉತ್ತರಕನ್ನಡದ 6 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಿತ್ತೂರು ಕ್ಷೇತ್ರ ಹಾಗೂ ಉತ್ತರಕನ್ನಡದ ಹಳಿಯಾಳ, ಶಿರಸಿ,ಕಿತ್ತೂರು, ಕಾರವಾರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರುಗಳು ಆಯ್ಕೆ ಆಗಿದ್ದಾರೆ. ಇನ್ನು ಯಲ್ಲಾಪುರ, ಕುಮಟಾ ಹಾಗೂ ಖಾನಾಪುರ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರನ್ನು ಹೊಂದಿದೆ. ಆದರೆ, ಉತ್ತರಕನ್ನಡ ಲೋಕಸಭಾ ಕ್ಷೇತ್ರ ಕಳೆದ ಮೂರು ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿದೆ.

ಕೆನರಾ – ಉತ್ತರಕನ್ನಡ ಲೋಕಸಭಾ ಕ್ಷೇತ್ರ 17 ಲೋಕಸಭಾ ಚುನಾವಣೆ ಕಂಡಿದೆ. ಇದರಲ್ಲಿ 10 ಬಾರಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದರೆ, ಸ್ವತಂತ್ರ ಅಭ್ಯರ್ಥಿ ಒಂದು ಬಾರಿ ಗೆದ್ದರೆ, ಬಿಜೆಪಿ 6 ಬಾರಿ ಗೆಲುವು ಕಂಡಿದೆ.

ಇದುವರೆಗಿನ ಸಂಸದರು
1952, 1957 ಮತ್ತು 1962 ಜೋಕಿಮ್ ಆಳ್ವಾ, ಕಾಂಗ್ರೆಸ್
1967- ದಿನಕರ ದೇಸಾಯಿ, ಸ್ವತಂತ್ರ
1971-ಬಿ.ವಿ.ನಾಯ್ಕ, ಕಾಂಗ್ರೆಸ್
1977-ಬಲ್ಸು ಪುರ್ಸು ಕದಮ್, ಕಾಂಗ್ರೆಸ್
1980, 1984,1989 ಮತ್ತು 1991 ಜಿ. ದೇವರಾಯ ನಾಯ್ಕ, ಕಾಂಗ್ರೆಸ್
1996, 1998- ಅನಂತಕುಮಾರ ಹೆಗಡೆ, ಬಿಜೆಪಿ
1999-ಮಾರ್ಗರೇಟ್ ಆಳ್ವಾ, ಕಾಂಗ್ರೆಸ್
2004, 2009, 2014 ಮತ್ತು 2019-ಅನಂತಕುಮಾರ ಹೆಗಡೆ, ಬಿಜೆಪಿ

ಸಾರ್ವತ್ರಿಕ ಚುನಾವಣೆ – 2014
ಅನಂತ್ ಕುಮಾರ್ ಹೆಗಡೆ – 5,46,939 – ಬಿಜೆಪಿ
ಪ್ರಶಾಂತ ಆರ್. ದೇಶಪಾಂಡೆ – 4,06,239 – ಕಾಂಗ್ರೆಸ್
ಗೆಲುವಿನ ಅಂತರ – 1,40,700

ಸಾರ್ವತ್ರಿಕ ಚುನಾವಣೆ – 2019
ಅನಂತ್ ಕುಮಾರ್ ಹೆಗಡೆ – 7,86,042 – ಬಿಜೆಪಿ
ಆನಂದ್ ಅಸ್ನೋಟಿಕರ್ – 3,06,393 – ಜೆಡಿ(ಎಸ್)
ಗೆಲುವಿನ ಅಂತರ – 4,79,649

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಳಿಯಾಳ, ಕಾರವಾರ, ಕುಮಟಾ, ಭಟ್ಕಳ, ಶಿರಸಿ, ಯಲ್ಲಾಪುರ, ಕಿತ್ತೂರು, ಖಾನಾಪುರ, ವಿಧಾನಸಭಾ ಕ್ಷೇತ್ರ ಸೇರಿ 8 ವಿಧಾನಸಭಾ ಕ್ಷೇತ್ರಗಳು ಒಳಗೊಂಡಿದೆ.
ಕ್ಷೇತ್ರದಲ್ಲಿ ಒಟ್ಟು ಮತದಾರರು 16,22,857
ಪುರುಷರು – 8,15,599
ಮಹಿಳೆಯರು – 8,07,242 ಮತದಾರರಿದ್ದಾರೆ.

ಜಾತಿವಾರು ಮತದಾರರು
ನಾಮಧಾರಿ- 2 ಲಕ್ಷ, ಬ್ರಾಹ್ಮಣ- 1.6 ಲಕ್ಷ, ಗೌಡ (ಹಾಲಕ್ಕಿ/ಕರೆಒಕ್ಕಲಿಗ)- 1.10 ಲಕ್ಷ , ಮರಾಠ- 2.20 ಲಕ್ಷ, ಅಲ್ಪಸಂಖ್ಯಾತರು (ಮುಸ್ಲಿಂ/ಕ್ರಿಶ್ಚಿಯನ್)- 3 ಲಕ್ಷ, ಮೀನುಗಾರ- 80 ಸಾವಿರ, SC/ST/ಬುಡಕಟ್ಟು- 2 ಲಕ್ಷ, ಲಿಂಗಾಯತ- 1 ಲಕ್ಷ, ಮಡಿವಾಳ- 40 ಸಾವಿರ, ಕೋಮಾರಪಂಥ- 35 ಸಾವಿರ, ದೈವಜ್ಞ ಬ್ರಾಹ್ಮಣ- 40 ಸಾವಿರ, ಭಂಡಾರಿ- 40 ಸಾವಿರ, ಇತರರು- 82,600 ಸಾವಿರ

ಸಂತು
ಸಂತೋಷ್‌ ಎಚ್‌ ಎಂ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

Download Eedina App Android / iOS

X