ಲೋಕಸಭಾ ಚುನಾವಣೆಗೆ ಕೆಲವು ತಿಂಗಳುಗಳು ಬಾಕಿಯಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಪುನಃ ಚುನಾವಣಾಧಿಕಾರಿಗಳ ನೇಮಕದ ಕಾನೂನಿಗೆ ತಡೆ ನೀಡಲು ನಿರಾಕರಿಸಿದ್ದು, ಈ ಹಂತದಲ್ಲಿ ಮುಂದುವರೆಸಲು ಹೋದರೆ ಅವ್ಯವಸ್ಥೆಗಳು ಸೃಷ್ಟಿಯಾಗುತ್ತದೆ ಎಂದು ತಿಳಿಸಿದೆ.
ಗುರುವಾರದ ವಿಚಾರಣೆಯ ಸಂದರ್ಭದಲ್ಲಿ, ನೂತನ ಕಾನೂನಿನಡಿಯ ಸಮಿತಿಯ ಆಯ್ಕೆಯಲ್ಲಿನ ಬದಲಾವಣೆ ನಂತರ ನೂತನ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಹಾಗೂ ಸುಖ್‌ಬೀರ್ ಸಿಂಗ್ ಸಂಧು ಅವರನ್ನು ನೇಮಕಾತಿ ಮಾಡಿಕೊಂಡಿರುವುದರ ವಿರುದ್ಧ ಯಾವುದೇ ಆರೋಪಗಳು ಇಲ್ಲದಿರುವುದನ್ನು ಕೋರ್ಟ್ ಗಮನಿಸಿತು.
“ಚುನಾವಣಾ ಆಯೋಗವು ಕಾರ್ಯಾಂಗದ ಅಧಿಕಾರದಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗದು” ಎಂದು ಸಂಜೀವ್ ಖನ್ನಾ ಹಾಗೂ ದೀಪಂಕರ್ ದತ್ತ ನೇತೃತ್ವದ ಪೀಠವು ಹೇಳಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಎಲ್ಲೆಲ್ಲೂ ಪುರುಷರದೇ ಪಾರುಪತ್ಯ; ಮಹಿಳಾ ಪ್ರಾತಿನಿಧ್ಯ ಕನ್ನಡಿಯೊಳಗಿನ ಗಂಟು
ಕೇಂದ್ರದ ತಪ್ಪಿನಿಂದ ಕಾನೂನನ್ನು ಜಾರಿಗೊಳಿಸಲಾಗಿದೆ ಎಂದು ಊಹಿಸಲು ಸಾಧ್ಯವಿಲ್ಲ ಎಂದು ಅರ್ಜಿದಾರರ ವಾದವನ್ನು ಪೀಠವು ಗಮನಿಸಿತು.
“ಚುನಾವಣೆಗಳು ಹತ್ತಿರದಲ್ಲಿದ್ದು, ನೇಮಕಾತಿಯಾಗಿರುವವರ ವಿರುದ್ಧ ಯಾವುದೇ ಆರೋಪಗಳಿಲ್ಲ. ಸಮತೋಲನ ಕಾಯ್ದುಕೊಳ್ಳುವುದು ತುಂಬ ಮುಖ್ಯವಾಗಿದೆ” ಎಂದು ನ್ಯಾಯಾಧೀಶರು ಹೇಳಿದರು.
ಮುಖ್ಯ ಚುನಾವಣಾ ಆಯುಕ್ತ ಹಾಗೂ ಇತರ ಚುನಾವಣಾ ಆಯುಕ್ತರ (ನೇಮಕ, ಸೇವೆ ಮತ್ತು ಅಧಿಕಾರವಧಿಯ ನಿಯಮಗಳು)ಮಸೂದೆ, 2023 ಅನ್ನು ಸಂಸತ್ತಿನಲ್ಲಿ ಅಂಗೀಕರಿಸಿ ತರುವಾಯು ರಾಷ್ಟ್ರಪತಿಗಳು ಅಂಕಿತ ಹಾಕಿದ್ದರು.
ನೂತನ ಕಾನೂನಿನ ಅನ್ವಯ ನೂತನ ಚುನಾವಣಾ ಆಯುಕ್ತರ ನೇಮಕಾತಿ ಸಮಿತಿಯಲ್ಲಿ ಸರ್ವೋಚ್ಛ ನ್ಯಾಯಾಧೀಶರ ಬದಲಾಗಿ ಕೇಂದ್ರ ಸಚಿವರು ಇರುವುದನ್ನು ಮಾರ್ಪಡಿಸಲಾಯಿತು. ನೂತನ ಬದಲಾವಣೆಯಲ್ಲಿ ಸರ್ವೋಚ್ಛ ನ್ಯಾಯಾಧೀಶರನ್ನು ಕೈಬಿಟ್ಟಿರುವುದು ಪ್ರತಿಪಕ್ಷಗಳ ಕಳವಳಕ್ಕೆ ಕಾರಣವಾಗಿದೆ.
