ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ವು ಪ್ರಮುಖ ರಾಜಕಾರಣಿಗಳ ಸಂಬಂಧಿಕರಾಗಿದ್ದ ಜಿಲ್ಲಾ ಪೊಲೀಸ್ ಮುಖ್ಯಸ್ಥರನ್ನು ವರ್ಗಾವಣೆಗೊಳಿಸಿ ಆದೇಶಿಸಿದೆ.
ಗುಜರಾತ್, ಪಂಜಾಬ್, ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿನ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಎಸ್‌ಪಿ ಮಟ್ಟದ ಹುದ್ದೆ ಹೊಂದಿರುವ ಕೇಡರ್ ರಹಿತ ಅಧಿಕಾರಿಗಳನ್ನು ಸಹ ವರ್ಗಾವಣೆಗೊಳಿಸಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಎಸ್‌ಪಿ ಮಟ್ಟದ ಅಧಿಕಾರಿಗಳು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಾಗಿರುತ್ತಾರೆ.
ಗುಜರಾತ್‌ನ ಅಹಮದಾಬಾದ್ ಗ್ರಾಮಾಂತರ ಪ್ರದೇಶ ಹಾಗೂ ಚೋಟಾ ಉದಯಪುರದ ಎಸ್‌ಪಿ ಅವರನ್ನು ವರ್ಗಾವಣೆಗೊಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಎಲ್ಲೆಲ್ಲೂ ಪುರುಷರದೇ ಪಾರುಪತ್ಯ; ಮಹಿಳಾ ಪ್ರಾತಿನಿಧ್ಯ ಕನ್ನಡಿಯೊಳಗಿನ ಗಂಟು
ಪಂಜಾಬ್ ಜಿಲ್ಲೆಯ ಪಟಾನ್‌ಕೋಟ್, ಫಾಜಿಲ್ಕಾ, ಜಲಂಧರ್ ಗ್ರಾಮೀಣ ಹಾಗೂ ಮಲೇರ್‌ಕೋಟ್ಲಾ ಎಸ್‌ಎಸ್‌ಪಿ ಅಧಿಕಾರಿಗಳನ್ನು ಸ್ಥಳಾಂತರಿಸಲಾಗಿದೆ.
ಒಡಿಶಾದ ಧೆನಕಲ್, ದಿಯೋಘರ್ ಹಾಗೂ ಕಟಕ್ ಗ್ರಾಮೀಣ ಅಧಿಕಾರಿಗಳನ್ನು ಸ್ಥಳಾಂತರಿಸಲಾಗಿದೆ. ಹಾಗೆಯೇ ಪಶ್ಚಿಮ ಬಂಗಾಳದ ಪುರ್ಬಾ ಮಿಡ್ನಾಪುರ್, ಜರ್‌ಗ್ರಾಮ್, ಪುರ್ಬಾಬರ್ದಾಮನ್ ಅಧಿಕಾರಿಗಳನ್ನು ಕೂಡ ಚುನಾವಣಾ ಆಯೋಗದ ಆದೇಶದ ಮೇರೆಗೆ ವರ್ಗಾಯಿಸಲಾಗಿದೆ.
ಇತ್ತೀಚಿಗಷ್ಟೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗೆ ಹೆಚ್ಚು ನಿಕಟವರ್ತಿ ಆಗಿದ್ದ ಅಲ್ಲಿನ ಡಿಜಿಪಿ ರಾಜೀವ್ ಕುಮಾರ್ ಅವರನ್ನು ಒಳಗೊಂಡು ಆರು ರಾಜ್ಯದ ಗೃಹ ಕಾರ್ಯದರ್ಶಿಗಳನ್ನು ಚುನಾವಣಾ ಆಯೋಗ ವರ್ಗಾವಣೆಗೊಳಿಸಿತ್ತು.
