ನಾಗೇಂದ್ರಗಡ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಆಕಬೇಕೆಂದು ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಫಕ್ರುಸಾಬ ಕೊತವಾಲೆ ನೇತೃತ್ವದಲ್ಲಿ ಸ್ಥಳೀಯರು ಗದಗ ಜಿಲ್ಲೆಯ ಗಜೇಂದ್ರಗಡ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಸಾಮಾಜಿಕ ಹೋರಾಟಗಾರ ಫಕ್ರುಸಾಬ ಕೊತವಾಲೆ ಮತನಾಡಿ, “ಕುಡಿತದ ಚಟದಿಂದಾಗಿ ಬಡ ಕುಟುಂಬಗಳ ನೆಮ್ಮದಿಯೇ ಹಾಳಾಗುತ್ತಿದೆ. ಯುವಕರು ಇದರ ಹಿಂದೆ ಬಿದ್ದಿದ್ದು, ತಮ್ಮ ಜೀವನವನ್ನು ಹಾಳಮಾಡಿಕೊಳ್ಳುತ್ತಿದ್ದಾರೆ. ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಅಕ್ರಮ ಸಾರಾಯಿ ಮಾರಾಟವನ್ನು ಸ್ಥಗಿತಗೊಳಿಸಬೇಕು” ಎಂದು ಒತ್ತಾಯಿಸಿದರು.
“ಬರಗಾಲದಿಂದಾಗಿ ಬೆಳೆಯಿಲ್ಲದೆ, ಹಳ್ಳಿಯಲ್ಲಿ ಕುಡಿಯುವ ನೀರು ಸೇರಿದಂತೆ ಒಂದೊತ್ತಿನ ಊಟಕ್ಕೂ ಸಮಸ್ಯೆ ಎದುರಾಗಿದೆ. ಇದರ ನಡುವೆ ಅಕ್ರಮ ಮದ್ಯ ಮಾರಾಟಕ್ಕೆ ಮಾತ್ರ ಯಾವುದೇ ಕೊರಗು ಇಲ್ಲದೆ ರಾಜಾರೋಷವಾಗಿ ಕೆಲವರು ಗ್ರಾಮದಲ್ಲಿ ಸಾರಾಯಿ ಮಾರಾಟ ಮಾಡುತ್ತಿದ್ದಾರೆ. ಕೆಲವರು ಇದನ್ನೇ ನಿತ್ಯ ದಂಧೆ ಮಾಡಿಕೊಂಡಿರುವುದರಿಂದ ಹಳ್ಳಿಗಳಲ್ಲಿ ಸಾರಾಯಿ ಸೇವೆನೆಯಲ್ಲಿ ಯುವಕರು ಮಗ್ನರಾಗಿದ್ದಾರೆ. ಇದನ್ನು ಕೂಡಲೇ ನಿಲ್ಲಿಸಬೇಕು ಹಾಗೂ ಗ್ರಾಮಕ್ಕೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಜಾಹೀರಾತು ಬಿತ್ತರಿಸಿ: ರಾಜಕೀಯ ಪಕ್ಷಗಳಿಗೆ ಸೂಚನೆ
“ಕೂಲಿ ಮಾಡಿ ಹೊಟ್ಟೆ ಹೊರೆದುಕೊಳ್ಳುವ ಜನರನ್ನು ಮದ್ಯದ ವ್ಯಸನಿಗಳನ್ನಾಗಿ ಮಾಡಿ ತಾವು ಮಾತ್ರ ಜೇಬು ತುಂಬಿಸಿಕೊಳ್ಳುತ್ತಿರುವ ಅಕ್ರಮ ಸಾರಾಯಿ ಅಂಗಡಿಗಳ ಮೇಲೆ ಕೂಡಲೇ ಅಬಕಾರಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಅಕ್ರಮ ಸಾರಾಯಿ ಮಾರಾಟಕ್ಕೆ ಬ್ರೇಕ್ ಹಾಕಬೇಕು” ಎಂದು ತಹಶೀಲ್ದಾರರ ಮೂಲಕ ಅಬಕಾರಿ ಇಲಾಖೆಯ ಅಧಿಕಾರಿಗಳಿಗೂ ಮನವಿ ಸಲ್ಲಿಸಿದರು.
