ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಆಮ್ ಆದ್ಮಿ ಪಾರ್ಟಿ ರಾಯಚೂರು ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಿದ್ದು, ದೇಶದಲ್ಲಿ ಲೋಕತಂತ್ರ ಹತ್ಯೆ ಮಾಡುವ ಕೆಲಸವಾಗಿದ್ದು, ಸಂವಿಧಾನದ ನಿಯಮವನ್ನು ಗಾಳಿಗೆ ತೂರಿ ಇಂದಿನ ಬಿಜೆಪಿ ಕೇಂದ್ರ ಸರ್ಕಾರ ದುರಾಡಳಿತ ಮಾಡುತ್ತಿರುವುದು ಖಂಡನೀಯ” ಎಂದರು.
“ಲೋಕಸಭಾ ಚುನಾವಣೆ ಘೋಷಣೆಯ ಹಿನ್ನೆಲೆಯಲ್ಲಿ ಬಿಜೆಪಿಯ ಕೇಂದ್ರ ಸರ್ಕಾರವು ಅರವಿಂದ ಕೇಜ್ರಿವಾಲ್ ಅವರು ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಪ್ರವಾಸ ಮಾಡಿ ಪ್ರಚಾರ ಮಾಡುವ ಸಂದರ್ಭದಲ್ಲಿ ಯಾವುದೇ ತರಹದ ಆಧಾರಗಳಿಲ್ಲದೆ ಅರವಿಂದ್ ಕೆಜ್ರಿವಾಲ್ ಅವರನ್ನು ಬಂಧಿಸಿದ್ದು, ಲೋಕಸಭಾ ಚುನಾವಣೆಗೆ ಎದುರಾಳಿಗಳು ಇಲ್ಲದಂತೆ ಮಾಡಲು ಕೇಂದ್ರ ಬಿಜೆಪಿ ಸರ್ಕಾರದ ದುರುದ್ದೇಶವಾಗಿದೆ” ಎಂದು ದೂರಿದರು.
“ಆಮ್ ಆದ್ಮಿ ಪಕ್ಷ ದೇಶದಲ್ಲಿ ಎಲ್ಲ ಕಡೆ ಬೆಳವಣಿಗೆ ಮತ್ತು ಅಧಿಕಾರಕ್ಕೆ ಬರುತ್ತಿರುವುದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಹಿಸಲಾಗುತ್ತಿಲ್ಲ. ಬಿಜೆಪಿ ಕೇಂದ್ರ ಸರ್ಕಾರವು ಸಿಬಿಐ ಮತ್ತು ಇಡಿ ಈ ಎರಡು ಇಲಾಖೆಯವರನ್ನು ಬಳಸಿಕೊಂಡು ರಾಜಕೀಯ ವ್ಯಕ್ತಿಗಳನ್ನು ಬಂಧಿಸಿ ಜೈಲಿಗೆ
ಹಾಕುತ್ತಿದ್ದಾರೆ. ದೇಶದಲ್ಲಿ ಎಲ್ಲಿ ಬಿಜೆಪಿ ಪಕ್ಷವನ್ನು ತಿರಸ್ಕಾರ ಮಾಡುತ್ತಾರೆನ್ನುವ ಭಯದ ವಾತಾವರಣ ಇದೆ. ದೇಶದಲ್ಲಿ ಹಿಟ್ಲರ್ ದೂರಾಡಳಿತ ಮಾಡುತ್ತಿರುವ ಮೋದಿ ಸರ್ಕಾರವು ದೇಶಕ್ಕೆ ಯಾವ ಕೊಡುಗೆಗಳನ್ನು ಕೊಟ್ಟಿದ್ದಾರೆಂಬುದು ಜನಸಾಮಾನ್ಯರಿಗೆ ಗೊತ್ತಿದೆ” ಎಂದು ಹೇಳಿದರು.
“ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಬಂಧನದಿಂದ ಬಿಡುಗಡೆಗೊಳಿಸಬೇಕು. ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಅವರಿಗೆ ಸೂಕ್ತವಾದ ನ್ಯಾಯ ಒದಗಿಸಿಕೊಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಬೇಸಿಗೆಯಲ್ಲಿ ಮೃಗಾಲಯದ ಪ್ರಾಣಿಗಳಿಗೆ ‘ಐಸ್’ನಂತೆ ತಂಪಾದ ಉಪಚಾರ
ಜಿಲ್ಲಾಧ್ಯಕ್ಷ ಡಿ ವಿರೇಶ ಕುಮಾರ, ಆನಂದ, ಸೈಯದ್ ನೂಸ್ರತ್ ಅಲಿ, ಮಕ್ಬೂಲ್ ಪಾಷಾ, ಶೇಖ್ ಖಾದರ್ ಪಾಷಾ, ರೂಫ್, ಸುನಿಲ್, ವೀರೇಶ, ಸಂಗಪ್ಪ, ಸೈಯದ್ ಬದ್ರಿ, ಡಾ.ಮಜೀದ್ ಸೇರಿದಂತೆ ಇತರರು ಇದ್ದರು.
ವರದಿ : ಹಫೀಜುಲ್ಲ
