ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ಎಲ್ಲ ಸರ್ಕಾರಿ ನ್ಯಾಯಬೆಲೆ ಅಂಗಡಿಗಳು ಸರ್ಕಾರದ ಆದೇಶದಂತೆ, ಸರ್ಕಾರಿ ರಜಾದಿನ ಹಾಗೂ ಪ್ರತಿ ಮಂಗಳವಾರ ಹೊರತುಪಡಿಸಿ, ಉಳಿದಂತೆ ಎಲ್ಲ ದಿನಗಳು ಬೆಳಗ್ಗೆ 7ರಿಂದ ಮದ್ಯಾಹ್ನ 12ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 8ರವರೆಗೆ ತೆರೆಯಬೇಕು ಎಂದು ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಪ್ರವೀಣ್ ಆದೇಶ ಹೊರಡಿಸಿದ್ದಾರೆ.
“ಪಡಿತರಕ್ಕೆ ಸಮಯ ನಿಗದಿ, ತಿಂಗಳು ಪೂರ್ತಿ ವಿತರಣೆ ಮಾಡದೇ ಬಡವರ ಅನ್ನಕ್ಕೆ ಕನ್ನ” ಎಂಬ ಶೀರ್ಷಿಕೆಯಡಿ ಮಾರ್ಚ್ 22ರಂದು ಈ ದಿನ.ಕಾಮ್ ವಿಶೇಷ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ ಜಿಲ್ಲಾ ಆಹಾರ ಇಲಾಖೆಯ ಆದೇಶ ಹೊರಬಿದ್ದಿದೆ.
ಈ ಕುರಿತು ಜನರಲ್ಲಿ ವಿಶೇಷ ಅರಿವು ಮೂಡಿಸಿದ್ದ ಯುವ ಸಂಚಲನ ತಂಡ ಹಾಗೂ ಪಡಿತರದಾರರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂ. ಗ್ರಾಮಾಂತರ | ಪಡಿತರಕ್ಕೆ ಸಮಯ ನಿಗದಿ; ತಿಂಗಳು ಪೂರ್ತಿ ವಿತರಣೆ ಮಾಡದೇ ಬಡವರ ಅನ್ನಕ್ಕೆ ಕನ್ನ
ಕರ್ತವ್ಯ ನಿರ್ವಹಿಸದಿದ್ದಲ್ಲಿ ಇಲಾಖೆಗೆ ಮಾಹಿತಿ ನೀಡಿ: ಆಹಾರ ಇಲಾಖೆ ಡಿಡಿ
ಜಿಲ್ಲೆಯ ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸರ್ಕಾರಿ ನ್ಯಾಯಬೆಲೆ ಅಂಗಡಿಗಳು ಸರ್ಕಾರದ ಆದೇಶದಂತೆ ಕಾರ್ಯನಿರ್ವಹಿಸದೇ ಇದ್ದಲ್ಲಿ ಆಯಾ ತಾಲೂಕು ಆಹಾರ ಶಾಖೆ ಸಿಬ್ಬಂದಿಗಳಾದ ದೇವನಹಳ್ಳಿ ತಾಲೂಕು ಆಹಾರ ಶಿರಸ್ತೇದಾರ್ ಶ್ರೀಧರ್ ಎನ್(9945724948), ದೇವನಹಳ್ಳಿ ತಾಲೂಕು ಆಹಾರ ನಿರೀಕ್ಷಕ ಕೆ ಶ್ಯಾಮ್‌ಪ್ರಸಾದ್ (9448376570), ದೊಡ್ಡಬಳ್ಳಾಪುರ ತಾಲೂಕು ಆಹಾರ ಶಿರಸ್ತೇದಾರ್ ಶಶಿಕಲಾ ಈ(9110672505), ದೊಡ್ಡಬಳ್ಳಾಪುರ ತಾಲೂಕು ಆಹಾರ ನಿರೀಕ್ಷಕರು ರಾಜು ಸಬಸ್ಟೀನ್(9945275227), ಹೊಸಕೋಟೆ ತಾಲೂಕು ಆಹಾರ ಶಿರಸ್ತೇದಾರ್ ವಿ ನಟರಾಜ್ ರೆಡ್ಡಿ(9902294444), ಹೊಸಕೋಟೆ ತಾಲೂಕು ಆಹಾರ ನಿರೀಕ್ಷಕರು ಬಿ ಶಿವಕುಮಾರ್(9902805563), ನೆಲಮಂಗಲ ತಾಲೂಕು ಆಹಾರ ಶಿರಸ್ತೇದಾರ್ ಕೃಷ್ಣಮೂರ್ತಿ(8660184016), ನೆಲಮಂಗಲ ತಾಲೂಕು ಆಹಾರ ನಿರೀಕ್ಷಕರು ಜಯಕುಮಾರ್(9886781111), ನೆಲಮಂಗಲ ತಾಲೂಕು ಆಹಾರ ನಿರೀಕ್ಷಕರು ಸೈಯದ್ ಅಮಾನುಲ್ಲಾ(9036434552) ಅರುಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಪ್ರವೀಣ್ ತಿಳಿಸಿದ್ದಾರೆ.