ಚಿಕ್ಕಬಳ್ಳಾಪುರ | ಅಂತರ್ಜಲ ಮಟ್ಟ ಕುಸಿತ; ಬರದ ನಡುವೆ ಜಲಕ್ಷಾಮದ ಭೀತಿ

Date:

ರಾಜ್ಯಾದ್ಯಂತ ಬರದ ಛಾಯೆ ಆವರಿಸಿರುವ ನಡುವೆ ಬೇಸಿಗೆಯ ಆರಂಭದಲ್ಲೇ ಹಲವೆಡೆ ಜಲಕ್ಷಾಮದ ಭೀತಿ ಶುರುವಾಗಿದೆ. ಮಿತಿಮೀರಿದ ಅಂತರ್ಜಲ ಬಳಕೆಯಿಂದ ಅಂತರ್ಜಲ ಮಟ್ಟದಲ್ಲಿ ವರ್ಷದಿಂದ ವರ್ಷಕ್ಕೆ ಕುಸಿತ ಕಾಣುತ್ತಿದೆ ಎಂದು ಅಂತರ್ಜಲ ಮೌಲೀಕರಣ ವರದಿಯಿಂದ ತಿಳಿದುಬಂದಿದೆ.

ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ, ಬೆಂ.ಗ್ರಾಮಾಂತರ, ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಅತಿಯಾದ ಅಂತರ್ಜಲ ಬಳಕೆಯಾಗಿರುವುದು ಅಂತರ್ಜಲ ಮಟ್ಟ ಕುಸಿತಕ್ಕೆ ಕಾರಣ ಎಂದು ಅಂತರ್ಜಲ ಮೌಲೀಕರಣ ವರದಿಗಳು ಹೇಳಿವೆ.

ಅಂತರ್ಜಲ ಮೌಲೀಕರಣ ವರದಿಯ ಪ್ರಕಾರ ಚಿಕ್ಕಬಳ್ಳಾಪುರ ಜಿಲ್ಲೆಯ 6 ತಾಲೂಕುಗಳಲ್ಲಿ ಫೆಬ್ರವರಿ 2023ರಲ್ಲಿ 17.52 ಮೀಟರ್ ಇದ್ದ ಸರಾಸರಿ ಸ್ಥಿರ ಅಂತರ್ಜಲ ನೀರಿನ ಮಟ್ಟವು, ಫೆಬ್ರವರಿ 2024ರಲ್ಲಿ 32.66 ಮೀಟರ್‌ನಷ್ಟಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಫೆಬ್ರವರಿ 2023ರ ವರ್ಷಕ್ಕೆ ಹೋಲಿಸಿದರೆ 2024ರ ಫೆಬ್ರವರಿ ವರ್ಷದಲ್ಲಿ ಅಂತರ್ಜಲ ಮಟ್ಟ ಇಳಿಕೆಯಾಗಿರುವುದು ಕಂಡುಬಂದಿದ್ದು, ಸರಾಸರಿ -18.14ರಷ್ಟು ಅಂತರ್ಜಲ ಮಟ್ಟ ಇಳಿಕೆಯಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇಲಾಖೆ ಮಾಹಿತಿ ಪ್ರಕಾರ ಬಾಗೇಪಲ್ಲಿ ತಾಲೂಕಿನಲ್ಲಿ- 4.05, ಚಿಂತಾಮಣಿ ತಾಲೂಕಿನಲ್ಲಿ- 14.75, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ- 22.45, ಗುಡಿಬಂಡೆ ತಾಲೂಕಿನಲ್ಲಿ- 13.23, ಗೌರಿಬಿದನೂರು ತಾಲೂಕಿನಲ್ಲಿ- 13.33, ಶಿಡ್ಲಘಟ್ಟ ತಾಲೂಕಿನಲ್ಲಿ- 41.05ರಷ್ಟು ಅಂತರ್ಜಲ ಮಟ್ಟ ಇಳಿಕೆ ಕಂಡಿದೆ.

ಅಂತರ್ಜಲ ಇಳಿಕೆಗೆ ಕಾರಣ : ಕಳೆದ ಎರಡ್ಮೂರು ವರ್ಷಗಳಲ್ಲಿ ಅತಿಯಾದ ಮಳೆಯಿಂದ ಕೆರೆ-ಕಟ್ಟೆಗಳು ತುಂಬಿದ್ದವು. ನೀರಿನ ಅಭಾವ ಕಂಡಿರಲಿಲ್ಲ. ಆದರೆ, ಈ ಬಾರಿ ಸಮಯಕ್ಕೆ ಆಗಬೇಕಾದ ಮಳೆ ಆಗದೆ, ರಾಜ್ಯಾದ್ಯಂತ ಬರಗಾಲ ಆವರಿಸಿದೆ. ಇದೀಗ ಬೇಸಿಗೆಯ ಬಿಸಿಲು ಆರಂಭವಾಗಿದೆ. ಕೆರೆ ಕಟ್ಟೆಗಳು ಬರಿದಾಗಿವೆ. ಈ ಕಾರಣದಿಂದ ರೈತರು ತೋಟ, ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲು ಕೃಷಿ ಪಂಪ್‌ಸೆಟ್‌ಗಳನ್ನೇ ಅವಲಂಬಿಸಿದ್ದು, ಹೆಚ್ಚಿನ ಅಂತರ್ಜಲ ಬಳಕೆಯಾಗುತ್ತಿದೆ. ಇದರಿಂದ ಅಂತರ್ಜಲ ಮಟ್ಟ ಕುಸಿತಗೊಂಡಿದೆ ಎಂಬುದು ಭೂ ವಿಜ್ಞಾನಿಗಳ ಅಭಿಪ್ರಾಯ.

ಅಂತರ್ಜಲ ಅಸಮತೋಲನದ ನಿವಾರಣೆ ಹೇಗೆ : ಕುಸಿತ ಕಂಡಿರುವ ಅಂತರ್ಜಲವನ್ನು ಹೆಚ್ಚಳ ಮಾಡಲು ಅಂತರ್ಜಲ ಮರುಪೂರಣ ವಿಧಾನಗಳನ್ನು ಅನುಸರಿಸಬೇಕು. ಮಳೆ ನೀರು ಇಂಗಿಸುವಿಕೆ, ಚೆಕ್‌ ಡ್ಯಾಂ, ಇಂಗು ಗುಂಡಿ, ಕೃಷಿಹೊಂಡ, ಬದು ನಿರ್ಮಾಣ ಇತ್ಯಾದಿ ವಿಧಾನಗಳನ್ನು ಅನುಸರಿಸುವ ಮೂಲಕ ಅಂತರ್ಜಲ ಅಸಮತೋಲವನ್ನು ನಿವಾರಿಸಬಹುದು.

“ಎರಡು ವರ್ಷದ ಹಿಂದೆ ಅತಿಯಾದ ಮಳೆ ಮತ್ತು ಮರುಪೂರಣ ಮಾಡಿದ ಹಿನ್ನೆಲೆ ಸರಾಸರಿ 50 ಮೀಟರ್‌ ನೀರು ಇತ್ತು. ಕಳೆದ ಬಾರಿಯಂತೆ ಈ ವರ್ಷ ಮಳೆಯಾಗಿಲ್ಲದ ಕಾರಣ ಅಂತರ್ಜಲ ಮಟ್ಟದಲ್ಲಿ ಕುಸಿತ ಕಂಡುಬಂದಿದೆ. ಅಂತರ್ಜಲ ಬಳಕೆ ಕಡಿಮೆಯಾಗಬೇಕು. ಮರುಪೂರಣ ವಿಧಾನಗಳಿಂದ ಅಂತರ್ಜಲ ಮಟ್ಟದಲ್ಲಿ ಸುಧಾರಣೆ ಕಾಣಬಹುದು” ಎನ್ನುತ್ತಾರೆ ಹಿರಿಯ ಭೂ ವಿಜ್ಞಾನಿ ಬೋರಪ್ಪ.

ಈ ಸುದ್ದಿ ಓದಿದ್ದೀರಾ? ವಿಜಯಪುರ | ಸಮಾಜದಲ್ಲಿ ಸಮಾನತೆ, ಭಾತೃತ್ವ ಮೂಡಿಸುವುದು ಪ್ರತಿಯೊಬ್ಬ ಮಹಿಳೆಯ ಪಾತ್ರ: ಮೈತ್ರೇಯಿ ಕೆ

ಒಟ್ಟಾರೆಯಾಗಿ, ಬರಗಾಲ, ಕೆರೆಗಳ ಬತ್ತುವಿಕೆ ಮತ್ತು ಅಂತರ್ಜಲದ ಅತಿಯಾದ ದುರ್ಬಳಕೆಯಿಂದ ಅಂತರ್ಜಲ ಕುಸಿತ ಕಂಡಿದ್ದು, ಜಲಕ್ಷಾಮವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಂತರ್ಜಲದ ಹಿತಮಿತ ಬಳಕೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಅಂತರ್ಜಲ ಮಟ್ಟದ ಸುಧಾರಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಡ್ಯ | ‘ಸೊಳ್ಳೆ ಉತ್ಪಾದನಾ ಕೇಂದ್ರ’ವಾದ ವೈದ್ಯಕೀಯ ಕಾಲೇಜು; ಕಣ್ಮುಚ್ಚಿ ಕುಳಿತ ಅಧಿಕಾರಿಗಳು!

ಇಡೀ ರಾಜ್ಯದಲ್ಲಿ ಡೆಂಘೀ ಜ್ವರ ಹರಡುತ್ತಾ ಇರುವಾಗ ನೈರ್ಮಲ್ಯ ಕಾಪಾಡಿ, ನೀರು...

ವಿಜಯಪುರ | ಎನ್‌ಎಸ್‌ಎಸ್ ಸ್ವಯಂ ಸೇವಕರಲ್ಲಿ ತಾಳ್ಮೆ, ಶಿಸ್ತಿನ ಜೊತೆಗೆ ಧೈರ್ಯ ತುಂಬುತ್ತದೆ: ಡಾ.ಪ್ರತಾಪ್ ಲಿಂಗಯ್ಯ

"ಎನ್‌ಎಸ್‌ಎಸ್ ಎಂಬುದು ಮನುಷ್ಯನಲ್ಲಿ ಸಹನೆ, ತಾಳ್ಮೆ ಹಾಗೂ ಶಿಸ್ತಿನ ಜೊತೆಗೆ ಧೈರ್ಯವನ್ನು...

ವಿಜಯಪುರ | ನೂತನ ವಸತಿ ನಿಲಯ ಮಂಜೂರು ಮಾಡುವಂತೆ ದಲಿತ ವಿದ್ಯಾರ್ಥಿ ಪರಿಷತ್ ಆಗ್ರಹ

ವಿಜಯಪುರ ನಗರದಲ್ಲಿರುವ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದಲ್ಲಿ ಹಿಂದುಳಿದ ವರ್ಗಗಳ ಮತ್ತು...

ಚಿಕ್ಕಬಳ್ಳಾಪುರ | ಶಾಶ್ವತ ನೀರಾವರಿ ಯೋಜನೆಗಾಗಿ ಪ್ರಧಾನಿ ಭೇಟಿ : ಶಾಸಕ ಸಮೃದ್ಧಿ ಮಂಜುನಾಥ್‌ ವಾಗ್ದಾನ

"ಬರಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ತರುವ ಕುರಿತು ಪ್ರಧಾನಿ ಮೋದಿ ಭೇಟಿಗೆ...