ಖಲಿಸ್ತಾನ್ ಗುಂಪುಗಳು ಎಎಪಿ ಪಕ್ಷಕ್ಕೆ 2014ರಿಂದ 2022ರವರೆಗೆ ಅಂದಾಜು 133.54 ಕೋಟಿ ರೂ. ಹಣಕಾಸು ನೆರವು ನೀಡಿದೆ ಎಂದು ಖಲಿಸ್ತಾನ್ ಉಗ್ರ ಗುರ್‌ಪತ್ವಂತ್ ಸಿಂಗ್ ಪನ್ನೂನ್ ಆರೋಪಿಸಿದ್ದಾನೆ.
ಸಾಮಾಜಿಕ ಮಾಧ್ಯಮದ ಮೂಲಕ ವಿಡಿಯೋ ಸಂದೇಶದಲ್ಲಿ ತಿಳಿಸಿರುವ ಪನ್ನೂನ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಣಕಾಸು ನೆರವಿನ ಬದಲಿಯಾಗಿ ದೇವೇಂದರ್ ಸಿಂಗ್ ಬುಳ್ಳಾರ್ ಅವರನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಬುಳ್ಳಾರ್ 1993ರ ದೆಹಲಿ ಬಾಂಬ್ ಸ್ಫೋಟದ ಅಪರಾಧಿಯಾಗಿದ್ದು, ಈ ಘಟನೆಯಲ್ಲಿ 9 ಮಂದಿ ಮೃತಪಟ್ಟು 31 ಮಂದಿ ಗಾಯಗೊಂಡಿದ್ದರು.
ಖಲಿಸ್ತಾನಿ ಉಗ್ರ ಪೊನ್ನೂನ್ ಭಾರತದ ವಿರುದ್ಧ ಹಲವು ಬೆದರಿಕೆಗಳನ್ನು ಹಾಕಿದ್ದಾನೆ. ಸಂಸತ್ತಿನ ಮೇಲೆ ದಾಳಿ ಮಾಡುವುದಾಗಿ ಹೇಳಿದ್ದ.
ಈ ಪ್ರತ್ಯೇಕವಾದಿ ನಾಯಕನ ಹತ್ಯೆಗೆ ಭಾರತ ಸಂಚು ರೂಪಿಸಿದೆ ಎಂದು ಅಮೆರಿಕ ಆರೋಪಿಸಿದೆ. ಈ ಹತ್ಯೆಯ ಸಂಚಿನ ಹಿಂದೆ ಭಾರತದ ತನಿಖಾ ಸಂಸ್ಥೆಗಳ ಕೆಲವು ಏಜೆಂಟರು ಇದ್ದಾರೆ ಎಂದು ಅಮೆರಿಕ ಆರೋಪಿಸಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚುನಾವಣೆ – ಐಪಿಎಲ್ ಕ್ರಿಕೆಟ್‌ನಲ್ಲಿ ಅಪ್ಪ-ಮಗನ ಆಟ
ಈ ನಡುವೆ ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಭಾಗಿಯಾಗ ಆರೋಪದ ಮೇಲೆ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಬಮಧನದಿಂದ ರಕ್ಷಣೆ ನೀಡಬೇಕೆಂದು ಕೋರಿದ್ದ ಕೇಜ್ರಿವಾಲ್ ಅರ್ಜಿಯನ್ನು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು. ಕೇಜ್ರಿವಾಲ್ ಸದ್ಯ ಮಾ.28ರವರೆಗೂ ಇ.ಡಿ ಕಸ್ಟಡಿಯಲ್ಲಿದ್ದಾರೆ.
ಕಸ್ಟಡಿಯಲ್ಲಿದ್ದರೂ ದೆಹಲಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಎಎಪಿ ತಿಳಿಸಿದೆ. ಪಕ್ಷವು ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ‘ಮೇ ಬಿ ಕೇಜ್ರಿವಾಲ್’ ಎಂಬ ಅಭಿಯಾನ ಆರಂಭಿಸಲು ಉದ್ದೇಶಿಸಿದೆ.
ಅಬಕಾರಿ ಹಗರಣದಲ್ಲಿ ಕೇಜ್ರಿವಾಲ್ ಬಳಸಿದ್ದ ಪೋನ್ ನಾಪತ್ತೆಯಾಗಿದೆ ಎಂದು ಇ.ಡಿ ಆರೋಪಿಸಿದೆ. ಆದರೆ ಜೈಲಿನಲ್ಲಿರುವಾಗ ಎಎಪಿ ನಾಯಕನಿಗೆ ಕಂಪ್ಯೂಟರ್ ಅಥವಾ ಪತ್ರಗಳನ್ನು ನೀಡುವುದಿಲ್ಲ ಎಂದು ಇ.ಡಿ ತಿಳಿಸಿದೆ.
ಚುನಾವಣಾ ಬಾಂಡ್‌ಗಳ ಹಗರಣದ ದಾರಿ ತಪ್ಪಿಸಲು ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದ್ದು, ಇದರ ವಿರುದ್ಧ ಮಾ.31ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುವುದಾಗಿ ವಿಪಕ್ಷಗಳು ತಿಳಿಸಿವೆ.
Terror support Alert 🚨
AAP supporterd Farmers protests & played a key role in Red Fort Khalistan Flag rioting
Khalistani Terrorist Pannun claims Khalistani group gave AAP $16 million when Kejriwal offered to release terrorist Bhullar in exchange for money. He says Arvind… pic.twitter.com/Q5DmKRx4cb
— 𝐒𝐮𝐝𝐡𝐢𝐫 भारतीय 🇮🇳 (@seriousfunnyguy) March 25, 2024
