ಕಳೆದ ಎರಡು ವರ್ಷಗಳಿಂದ ಯೆಮೆನ್‌ನ 21 ವರ್ಷದ ಯುವಕನ ಎದೆ ಭಾಗದಲ್ಲಿದ್ದ ಗುಂಡನ್ನು ಬೆಂಗಳೂರಿನ ಆಸ್ಟರ್ ಆರ್‌ವಿ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದಾರೆ.
ಯೆಮೆನ್‌ನ ವಾಸಿಂ (ಹೆಸರು ಬದಲಿಸಲಾಗಿದೆ) ಗುಂಡೇಟಿಗೆ ತುತ್ತಾಗಿ, ಗಾಯಗೊಂಡಿದ್ದರು. ಒಂದು ಗುಂಡು ಅವರ ಬಲ ಶ್ವಾಸಕೋಶದಲ್ಲಿ ಸಿಲುಕಿಕೊಂಡಿತ್ತು. ಅಲ್ಲದೇ, ಅವರು ತೋಳಿನ ಮೂಳೆಯೂ ಮುರಿದಿತ್ತು.
ಯೆಮೆನ್‌ನಲ್ಲಿನ ವೈದ್ಯರು ಆತನಿಗೆ ಶಸ್ರ್ರಚಿಕಿತ್ಸೆ ನಡೆಸಿ, ಮೂಳೆ ಮುರಿತಕ್ಕೆ ಚಿಕಿತ್ಸೆ ನೀಡಿದ್ದರು. ಆದರೆ, ಎದೆ ಭಾಗದಲ್ಲಿದ್ದ ಗುಂಡನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ವಾಸಿಂ ಬೆಂಗಳೂರಿನಲ್ಲಿರುವ ಶಸ್ತ್ರಚಿಕಿತ್ಸಾ ವಿಧಾನಗಳ ಬಗ್ಗೆ ಓದಿದ ನಂತರ ಯೆಮೆನ್‌ನಿಂದ ಬೆಂಗಳೂರಿಗೆ ಬಂದಿದ್ದರು.
ಈ ಸುದ್ದಿ ಓದಿದ್ದೀರಾ? ಮುಂದಿನ ಎರಡು ವಾರಗಳ ಕಾಲ ಬಿಸಿಲು – ಒಣ ಹವೆ; ಹವಾಮಾನ ಇಲಾಖೆ ವರದಿ
ಆತನಿಗೆ ಸಿಟಿ ಸ್ಕ್ಯಾನ್ ಮಾಡಿಸಿದಾಗ ಶ್ವಾಸಕೋಶ, ಯಕೃತ್ತು, ಹೃದಯ ಮತ್ತು ಡಯಾಫ್ರಾಮ್‌ಗಳ ನಡುವೆ ಗುಂಡು ಸಿಲುಕಿರುವುದು ಪತ್ತೆಯಾಗಿತ್ತು. ಬಳಿಕ, ಆಸ್ಟರ್ ಆರ್‌ವಿ ಆಸ್ಪತ್ರೆಯ ಕಾರ್ಡಿಯೊಥೊರಾಸಿಕ್ ಶಸ್ತ್ರಚಿಕಿತ್ಸಕ ಡಾ. ದಿವಾಕರ್ ಭಟ್ ಅವರು ಶಸ್ರ್ರಚಿಕಿತ್ಸೆ ನಡೆಸಿದ್ದು, ಗುಂಡನ್ನು ಹೊರತೆಗೆದಿದ್ದಾರೆ.