ಬೆಂಗಳೂರು | 2 ವರ್ಷದಿಂದ ಯೆಮೆನ್‌ ವ್ಯಕ್ತಿಯಲ್ಲಿದ್ದ ಗುಂಡನ್ನು ಹೊರ ತೆಗೆದ ವೈದ್ಯರು

Date:

ಕಳೆದ ಎರಡು ವರ್ಷಗಳಿಂದ ಯೆಮೆನ್‌ನ 21 ವರ್ಷದ ಯುವಕನ ಎದೆ ಭಾಗದಲ್ಲಿದ್ದ ಗುಂಡನ್ನು ಬೆಂಗಳೂರಿನ ಆಸ್ಟರ್ ಆರ್‌ವಿ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದಾರೆ.

ಯೆಮೆನ್‌ನ ವಾಸಿಂ (ಹೆಸರು ಬದಲಿಸಲಾಗಿದೆ) ಗುಂಡೇಟಿಗೆ ತುತ್ತಾಗಿ, ಗಾಯಗೊಂಡಿದ್ದರು. ಒಂದು ಗುಂಡು ಅವರ ಬಲ ಶ್ವಾಸಕೋಶದಲ್ಲಿ ಸಿಲುಕಿಕೊಂಡಿತ್ತು. ಅಲ್ಲದೇ, ಅವರು ತೋಳಿನ ಮೂಳೆಯೂ ಮುರಿದಿತ್ತು.

ಯೆಮೆನ್‌ನಲ್ಲಿನ ವೈದ್ಯರು ಆತನಿಗೆ ಶಸ್ರ್ರಚಿಕಿತ್ಸೆ ನಡೆಸಿ, ಮೂಳೆ ಮುರಿತಕ್ಕೆ ಚಿಕಿತ್ಸೆ ನೀಡಿದ್ದರು. ಆದರೆ, ಎದೆ ಭಾಗದಲ್ಲಿದ್ದ ಗುಂಡನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ವಾಸಿಂ ಬೆಂಗಳೂರಿನಲ್ಲಿರುವ ಶಸ್ತ್ರಚಿಕಿತ್ಸಾ ವಿಧಾನಗಳ ಬಗ್ಗೆ ಓದಿದ ನಂತರ ಯೆಮೆನ್‌ನಿಂದ ಬೆಂಗಳೂರಿಗೆ ಬಂದಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಮುಂದಿನ ಎರಡು ವಾರಗಳ ಕಾಲ ಬಿಸಿಲು – ಒಣ ಹವೆ; ಹವಾಮಾನ ಇಲಾಖೆ ವರದಿ

ಆತನಿಗೆ ಸಿಟಿ ಸ್ಕ್ಯಾನ್ ಮಾಡಿಸಿದಾಗ ಶ್ವಾಸಕೋಶ, ಯಕೃತ್ತು, ಹೃದಯ ಮತ್ತು ಡಯಾಫ್ರಾಮ್‌ಗಳ ನಡುವೆ ಗುಂಡು ಸಿಲುಕಿರುವುದು ಪತ್ತೆಯಾಗಿತ್ತು. ಬಳಿಕ, ಆಸ್ಟರ್ ಆರ್‌ವಿ ಆಸ್ಪತ್ರೆಯ ಕಾರ್ಡಿಯೊಥೊರಾಸಿಕ್ ಶಸ್ತ್ರಚಿಕಿತ್ಸಕ ಡಾ. ದಿವಾಕರ್ ಭಟ್ ಅವರು ಶಸ್ರ್ರಚಿಕಿತ್ಸೆ ನಡೆಸಿದ್ದು, ಗುಂಡನ್ನು ಹೊರತೆಗೆದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಂದ್ರಶೇಖರ್‌ ಆತ್ಮಹತ್ಯೆ | ಸರ್ಕಾರದ ಖಜಾನೆಯನ್ನೇ ಲೂಟಿ ಮಾಡಿದ ಹಗರಣವಿದು: ಗೋವಿಂದ ಕಾರಜೋಳ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿ ಇಲಾಖಾ ಸಚಿವ ನಾಗೇಂದ್ರ ಅವರು...

ಪರಿಷತ್‌ ಚುನಾವಣೆ | ನನ್ನ ಅಭಿಪ್ರಾಯ ತಪ್ಪಾಗಿ ಅರ್ಥೈಸಿಕೊಳ್ಳಬೇಕಿಲ್ಲ: ಗೃಹ ಸಚಿವ ಪರಮೇಶ್ವರ್‌

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ಬಂಧನಕ್ಕೆ ಪಕ್ಷ...