ಕೇಂದ್ರ ಸರ್ಕಾರ ಪಕ್ಷ ಹಾಗೂ ಪ್ರಾಂತ್ಯಗಳ ಆಧಾರದ ಮೇಲೆ ತಾರತಮ್ಯ ಮಾಡುವ ಮೂಲಕ ದಕ್ಷಿಣ ರಾಜ್ಯಗಳ ಮೇಲೆ ಅನ್ಯಾಯ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಆರೋಪಿಸಿದರು.
ತುಮಕೂರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, “ಕೇಂದ್ರ ಸರ್ಕಾರ ತೆರಿಗೆ ಹಣ ದುರ್ಬಳಕೆ ಮಾಡಿಕೊಂಡು ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ. ರಾಜ್ಯದ ಹಿತ ಕಾಯುವಲ್ಲಿ ಹಿಂದೆ ಬಿದ್ದಿರುವ ಬಿಜೆಪಿ ಸಂಸದರನ್ನು ಶಕ್ತಿ ಹೀನರು, ದ್ರೋಹಿಗಳೆಂದು ಕರೆಯಬೇಕಾ, ಬೇಡವಾ” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ತಂದೆ-ಮಗ ಸೇರಿದಂತೆ ನಾಲ್ವರು ನೀರಿನಲ್ಲಿ ಮುಳುಗಿ ಸಾವು
“ರಾಜ್ಯಕ್ಕೆ ಬರಗಾಲದ ಎನ್‌ಡಿಆರ್‌ಎಫ್ ಹಣ ಬಿಡುಗಡೆ ಮಾಡಬೇಕು. ಅದಕ್ಕೆ ನಿರ್ದಿಷ್ಟವಾದ ಕಾನೂನು ಕೂಡ ಇದೆ. ಆದರೂ ಹಣ ಬಿಡುಗಡೆಯಾಗಿಲ್ಲ. ನಮ್ಮ ಪಾಲು ಪಡೆಯಬೇಕಾದರೆ ಸಮಸ್ಯೆಗಳ ಬಗ್ಗೆ ಬಿಜೆಪಿ ಸಂಸದರು ಚಕಾರ ಎತ್ತುತಿಲ್ಲ. ಹಾಗಾಗಿ ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ಕೇಂದ್ರಕ್ಕೆ ಸಂದೇಶ ರವಾನೆ ಮಾಡಬೇಕಿದೆ” ಎಂದರು.
