ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆಯಲ್ಲಿ ʼಮಾದಿಗ ಸಮುದಾಯಕ್ಕೆ ಅನ್ಯಾಯʼವಾದರೆ ಸಹಿಸುವುದಿಲ್ಲ: ಮಂಜುನಾಥ ಕೊಂಡಪಲ್ಲಿ

Date:

Advertisements

ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಹಿನ್ನೆಲೆಯಲ್ಲಿ ʼಮಾದಿಗ ಸಮುದಾಯಕ್ಕೆ ಅನ್ಯಾಯʼವಾದರೆ ಸಹಿಸುವುದಿಲ್ಲ ಎಂದು ಮಾದಿಗ ದಂಡೋರ ಎಂಆರ್‌ಪಿಎಸ್‌ ಉತ್ತರ ಕರ್ನಾಟಕ ಅಧ್ಯಕ್ಷ ಶ್ರೀ ಮಂಜುನಾಥ ಕೊಂಡಪಲ್ಲಿ ಎಚ್ಚರಿಕೆ ನೀಡಿದ್ದಾರೆ.

ಧಾರವಾಡದಲ್ಲಿ ಪತ್ರಿಕೆ ಹೇಳಿಕೆ ನೀಡಿರುವ ಅವರು, “ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಮಾದಿಗ ಸಮುದಾಯಕ್ಕೆ ಟಿಕೆಟ್ ತಪ್ಪಿಸಲು ನಡೆಯುತ್ತಿರುವ ಷಡ್ಯಂತ್ರಗಳನ್ನು ಇಡೀ ರಾಜ್ಯದ ಮಾದಿಗ ಸಮುದಾಯ ಎಚ್ಚರಿಕೆಯಿಂದ ಪಕ್ಷಾತೀತವಾಗಿ ಗಮನಿಸುತ್ತಿದೆ” ಎಂದರು.

“ಪರಿಶಿಷ್ಟ ಜಾತಿಗಳಲ್ಲಿಯೇ ಅತ್ಯಂತ ಬಹುಸಂಖ್ಯಾತರಾದ ಮಾದಿಗ ಸಮುದಾಯವನ್ನು ರಾಜಕೀಯವಾಗಿ ಮೂಲೆಗುಂಪು ಮಾಡಲು ನಡೆಯುತ್ತಿರುವ ಪ್ರಯತ್ನಗಳು ಇದೇ ಮೊದಲೇನಲ್ಲ. ಆದರೆ ಈ ಬಾರಿ ಕಾಂಗ್ರೆಸ್ ಪಕ್ಷದಲ್ಲಿನ ಮಾದಿಗ ವಿರೋಧಿ ಶಕ್ತಿಗಳು ತೀರ ಮುಸುಕಿನಿಂದ ಹೊರಬಂದು ಎಡಗೈ ಸಮುದಾಯಕ್ಕೆ ಟಿಕೆಟ್ ಕೊಡಲೇಬಾರದೆಂದು ಬಹಿರಂಗವಾಗಿ ಹೇಳಿಕೆ ಕೊಡುತ್ತಿರುವುದು ನಮ್ಮನ್ನು ಕೆರಳಿಸಿದೆ. ಇದರ ಪರಿಣಾಮವನ್ನು ಪ್ರಸಕ್ತ ಚುನಾವಣೆಯಲ್ಲಿ ಖಂಡಿತ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿದರು.

Advertisements

“ನಿರುಪದ್ರವಿಯಾಗಿರುವ ಮಾದಿಗ ಸಮುದಾಯ ಯಾವತ್ತಿಗೂ ಎಡಗೈ ಬಲಗೈ ಎಂಬ ಮನೋಭಾವನೆಯನ್ನು ಇಟ್ಟುಕೊಂಡು ಮಾತನಾಡಿದ ಉದಾಹರಣೆಗಳಿಲ್ಲ. 60ರ ದಶಕದ ಬಿ ಶಂಕರಾನಂದ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಂದ ಹಿಡಿದು ಇತ್ತೀಚಿನ ಎಚ್ ಸಿ ಮಹದೇವಪ್ಪನವರವರೆಗೆ ಎಲ್ಲ ಬಲಗೈ ನಾಯಕರನ್ನೂ ನಮ್ಮವರೆಂದು ಅಪ್ರತಿಮವಾಗಿ ಗೌರವಿಸಿದ ಇತಿಹಾಸ ಎಡಗೈ ಸಮುದಾಯದ್ದಾಗಿದೆ. ಆದರೆ ಕೋಲಾರದ ಬೆಳವಣಿಗೆಗಳು ಈ ಸೌಹಾರ್ದವನ್ನು ಹಾಳುಗೆಡವಲು ಮಾಡಿರುವ ಆತಂಕಕಾರಿ ಪಿತೂರಿಯಾಗಿದೆ. ಇದು ವಿರೋಧಿ ಬಣದ ವಾಸ್ತವ ಮನಸ್ಥಿತಿಯನ್ನು ತಿಳಿಸುವ ಒಂದು ಎಚ್ಚರಿಕೆಯ ಘಂಟೆಯಾಗಿದೆ” ಎಂದರು.‌

ಈ ಸುದ್ದಿ ಓದಿದ್ದೀರಾ? ಧಾರವಾಡ | ನಾಲ್ಕೈದು ಮಂದಿ ಬಂದು ನನ್ನಿಂದ ಒತ್ತಾಯವಾಗಿ ಸಹಿ ಹಾಕಿಸಿಕೊಂಡರು: ಮಲ್ಲಿಕಾರ್ಜುನ ಸ್ವಾಮೀಜಿ

“ಸಮುದಾಯದ ರಾಷ್ಟ್ರೀಯ ನಾಯಕ ಮಂದಕೃಷ್ಣ ಮಾದಿಗ ಅವರ ನಾಯಕತ್ವದಲ್ಲಿ ನಾವು ಮಾದಿಗರ ವಿರುದ್ಧ ನಡೆಯುತ್ತಿರುವ ಈ ರೀತಿಯ ಕುತಂತ್ರಗಳನ್ನು ಬಯಲಿಗೆಳೆದು ವಿರೋಧಿ ಶಕ್ತಿಗಳಿಗೆ ತಕ್ಕ ಪಾಠ ಕಲಿಸಲಿದ್ದೇವೆ” ಎಂದು ಹೇಳಿಕೆ ನೀಡಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

Download Eedina App Android / iOS

X