ಧಾರವಾಡ | ನಾಲ್ಕೈದು ಮಂದಿ ಬಂದು ನನ್ನಿಂದ ಒತ್ತಾಯವಾಗಿ ಸಹಿ ಹಾಕಿಸಿಕೊಂಡರು: ಮಲ್ಲಿಕಾರ್ಜುನ ಸ್ವಾಮೀಜಿ

Date:

“ಕಳೆದ ಮಾರ್ಚ್ 27ರಂದು ದಿಂಗಾಲೇಶ್ವರ ಸ್ವಾಮೀಜಿ ಪತ್ರಿಕಾಗೋಷ್ಟಿ ಮಾಡಿದ ಮರುದಿನ ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆಗೂ ನಮಗೂ ಸಂಬಂಧವಿಲ್ಲ ಎಂದಿದ್ದರು. ಈಗ ಮಾರ್ಚ್ 29ರಂದು, “ನಾನು(ಮಲ್ಲಿಕಾರ್ಜುನ ಸ್ವಾಮೀಜಿ) 28ರಂದು ಹೇಳಿದ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ” ಎಂದು ಹೇಳಿದ್ದಾರೆ.

ಮಲ್ಲಿಕಾರ್ಜುನ ಸ್ವಾಮಿಗಳು ಪತ್ರಿಕಾ ಪ್ರಕಟಣೆಗೆ ಕಳುಹಿಸಿದ ವಿಡಿಯೋವೊಂದರಲ್ಲಿ ಮಾತನಾಡಿ, “ನಿನ್ನೆ ನಾಲ್ಕೈದು ಮಂದಿ ನಮ್ಮ ಮಠಕ್ಕೆ ಬಂದು, ತಾವೇ ಒಂದು ಪತ್ರಿಕಾ ಪ್ರಕಟಣೆಯ ಪತ್ರವನ್ನು ಟೈಪ್ ಮಾಡಿಸಿಕೊಂಡು ನನ್ನ ಕೈಗೆ ಕೊಟ್ಟು ಒತ್ತಾಯವಾಗಿ ನನ್ನಿಂದ ಸಹಿ ಹಾಕಿಸಿಕೊಂಡಿದ್ದಾರೆ. ಅವರು ಟೈಪ್ ಮಾಡಿಸಿ ತಂದಿದ್ದ ಪತ್ರವನ್ನು ಓದುವ ಸಂದರ್ಭದಲ್ಲಿ ವಿಡಿಯೋವನ್ನು ಮಾಡಿ ತಾವೇ ಪತ್ರಿಕೆ ಪ್ರಕಟಣೆಗೆ ನೀಡಿ, ಮುರುಘಾಮಠಕ್ಕೂ ದಿಂಗಾಲೇಶ್ವರ ಸ್ವಾಮಿಗಳ ಹೇಳಿಕೆಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಪ್ರಕಟಿಸಿ, ಪ್ರಚಾರ ಮಾಡಿದ್ದಾರೆ ಮತ್ತು ಒತ್ತಾಯಪೂರ್ವಕವಾಗಿ ನೀಡಿದ ಹೇಳಿಕೆಯನ್ನು ಸಮಾಜದ ಹಿತದೃಷ್ಟಿಯಿಂದ ಹಿಂಪಡೆಯುತ್ತೇನೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಯಾವುದೇ ಧರ್ಮವು ಮನುಷ್ಯನಲ್ಲಿ ಪ್ರೀತಿಯ ಗುಣ ಬೆಳೆಸುತ್ತದೆ: ರಿಯಾಝ್ ಅಹ್ಮದ್ ರೋಣ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇನ್ನು‌ ವಿಚಾರವಾಗಿ ಪ್ರಲ್ಹಾದ್ ಜೋಶಿ ಬಲಗೈ ಶಕ್ತಿಯಾಗಿರುವ ಈರೇಶ ಅಂಚಟಗೇರಿ ಅವರು ತಾವೇ ಪತ್ರಿಕಾ ಪ್ರಕಟಣೆಯ ಪತ್ರಿಕೆಯನ್ನು‌ ಟೈಪ್ ಮಾಡಿಸಿ, ಮಲ್ಲಿಕಾರ್ಜುನ‌ ಸ್ವಾಮಿಗಳಿಂದ ಒತ್ತಾಯಪೂರ್ವಕವಾಗಿ ಓದಿಸಿ, ವಿಡಿಯೋ ಮಾಡಿ,‌ ಸಾಮಾಜಿಕ‌ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಮತ್ತು ಪತ್ರಿಕೆಗಳಲ್ಲಿ‌ ಬರುವಂತೆ ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಿದ್ದಾರೆಂದು ಮುರುಘಾಮಠದ ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ವರ್ಲ್ಡ್ ವಿಷನ್ ಇಂಡಿಯಾ ಸಂಸ್ಥೆಯಿಂದ ಗ್ರಾಜುಯೇಷನ್ ಡೇ ಕಾರ್ಯಕ್ರಮ

ಕಲಬುರಗಿ ಜಿಲ್ಲೆ ಶಹಾಪುರ ತಾಲೂಕಿನ ಹೋತಪೇಟೆ ಗ್ರಾಮದಲ್ಲಿ ವರ್ಲ್ಡ್ ವಿಷನ್ ಇಂಡಿಯಾ...

ಹಾವೇರಿ | ನೇಹಾ ಕೊಲೆ ಪ್ರಕರಣ; ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಎಸ್‌ಎಫ್‌ಐ ಒತ್ತಾಯ 

ಹುಬ್ಬಳ್ಳಿಯ ಬಿವಿಬಿ ಕಾಲೇಜ್ ವಿದ್ಯಾರ್ಥಿನಿ ನೇಹಾ ಎಂಬುವವರ ಹತ್ಯೆ ವಿರೋಧಿಸಿ, ತಪ್ಪಿತಸ್ಥ...

ವಿಜಯಪುರ | ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟದಿಂದ ವಿದ್ಯಾರ್ಥಿ ಯುವಜನರ ಪ್ರಣಾಳಿಕೆ ಬಿಡುಗಡೆ 

ರಾಜ್ಯದಲ್ಲಿ ಒಟ್ಟು ಎಂಟು ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟದಿಂದ 2024ರ ಈ ಬಾರಿಯ...

ವಿಜಯಪುರ | ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಸಭೆ

ರಾಜ್ಯದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ‌ ಕೆ ಶಿವಕುಮಾರ್,...