ವಿಜಯಪುರದ 13ನೇ ಸಾಂಸ್ಕೃತಿಕ ಜನೋತ್ಸವ’ದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾರ್ಚ್ 31ರಂದು ಬೆಳಿಗ್ಗೆ 11ಕ್ಕೆ ‘ಸಾಮಾಜಿಕ ಬದಲಾವಣೆಯಲ್ಲಿ ಯುವಜನರ ಪಾತ್ರ’ ಎಂಬ ವಿಷಯದ ಕುರಿತು ಚರ್ಚಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯುವಜನರೊಂದಿಗೆ ಚರ್ಚೆ ಕಾರ್ಯಕ್ರಮವನ್ನು ಲೇಖಕಿ ರೂಪ ಹಾಸನರವರು ನಡೆಸಿಕೊಡುವರು ಎಂದು ಎಐಡಿಎಸ್ಒ ತಿಳಿಸಿದೆ.
ಎಐಡಿಎಸ್ಒ ಜಿಲ್ಲಾ ಸಂಚಾಲಕರು ಪತ್ರಿಕಾ ಪ್ರಕಟಣೆ ನೀಡಿದ್ದು, “ಎಐಡಿಎಸ್ಒ ಜಿಲ್ಲಾಧ್ಯಕ್ಷೆ ಸುರೇಖಾ ಕಡಪಟ್ಟಿ ಪ್ರಾಸ್ತಾವಿಕವಾಗಿ ಮಾತನಾಡುವರು. ಎಐಎಂಎಸ್ಎಸ್ನ ಜಿಲ್ಲಾ ಸಹ ಸಂಚಾಲಕಿ ಗೀತಾ ಎಚ್ ಅಧ್ಯಕ್ಷತೆ ವಹಿಸುವರು” ಎಂದು ತಿಳಿಸಿದ್ದಾರೆ.
ಸಿನಿಮಾ ಪ್ರದರ್ಶನ ಮತ್ತು ಸಂವಾದ : ಭಾನುವಾರ ಸಂಜೆ 5-30ಕ್ಕೆ ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧಾರಿತ ಸಿನೆಮಾ ‘ಡೇರ್ ಡೆವಿಲ್ ಮುಸ್ತಫಾ’ದ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಈ ಸಿನೆಮಾವನ್ನು ಶಶಾಂಕ ಸೋಗಲ್ ಅವರು ನಿರ್ದೇಶಿಸಿದ್ದು, 100 ಮಂದಿ ತೇಜಸ್ವಿಯವರ ಅಭಿಮಾನಿಗಳು ಸೇರಿ ನಿರ್ಮಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ನಾಲ್ಕೈದು ಮಂದಿ ಬಂದು ನನ್ನಿಂದ ಒತ್ತಾಯವಾಗಿ ಸಹಿ ಹಾಕಿಸಿಕೊಂಡರು: ಮಲ್ಲಿಕಾರ್ಜುನ ಸ್ವಾಮೀಜಿ
ಸಿನಿಮಾ ಪ್ರದರ್ಶನದ ನಂತರ ನಿರ್ದೇಶಕ ಶಶಾಂಕ ಸೋಗಲ್ ಅವರು ಸಿನಿಮಾ ಕುರಿತು ಸಂವಾದವನ್ನು ನಡೆಸಿಕೊಡುವರು. ನಾಯಕ ನಟರಾದ (ಸಿನೆಮಾ ಹೀರೋ) ಶಿಶಿರ ಬೈಕಾಡಿಯವರೂ ಉಪಸ್ಥಿತರಿರುವರು. ಎಐಡಿಎಸ್ಒನ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತರವರು ಪ್ರಾಸ್ತಾವಿಕವಾಗಿ ಮಾತನಾಡುವರು. ಎಐಎಂಎಸ್ಎಸ್ನ ಜಿಲ್ಲಾ ಸಂಚಾಲಕಿ ಶಿವಬಾಳಮ್ಮ ಕೊಂಡಗೂಳಿಯವರು ಅಧ್ಯಕ್ಷತೆ ವಹಿಸುವರು.