ಫ್ಯಾಕ್ಟ್‌ ಚೆಕ್ | ‘ಮೋದಿಗೆ 100 ಕೋಟಿ ರೂ. ಕೊಟ್ಟಿದ್ದೇನೆ ಎಂದರೆ, ಅವರನ್ನೂ ಬಂಧಿಸ್ತಿರಾ’; ಕೇಜ್ರಿವಾಲ್ ಪ್ರಶ್ನಿಸಿದ್ದು ಸತ್ಯವೇ?

Date:

Advertisements

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನ ದೇಶಾದ್ಯಂತ ಭಾರೀ ವಿರೋಧ-ಚರ್ಚೆಗೆ ಗುರಿಯಾಗಿದೆ. ಇದೇ ವೇಳೆ, ಕೇಜ್ರಿವಾಲ್ ಹೆಸರಿನಲ್ಲಿ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವೈರಲ್ ಪೋಸ್ಟ್‌ನಲ್ಲಿ, ‘ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಸೂರ್ಯಪ್ರಕಾಶ್ ವಿ ರಾಜು ಅವರನ್ನು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. ಅವರ ಪ್ರಶ್ನೆಗೆ ಉತ್ತರಿಸುವಲ್ಲಿ ಸೂರ್ಯಪ್ರಕಾಶ್ ವಿಫಲರಾಗಿದ್ದಾರೆ’ ಎಂದು ಹೇಳಲಾಗುತ್ತಿದೆ.

ನ್ಯಾಯಾಲಯದ ವಿಚಾರಣೆಯ ಪ್ರಶ್ನೋತ್ತರಗಳೆಂದು ಬರೆಯಲಾದ ಪೋಸ್ಟ್‌ನಲ್ಲಿ, “ಕೇಜ್ರಿವಾಲ್: ನನ್ನನ್ನು ಏಕೆ ಬಂಧಿಸಿದ್ದೀರಿ? ಎಎಸ್‌ಜಿ ರಾಜು: ನಿಮ್ಮ ವಿರುದ್ಧ ನಮ್ಮ ಬಳಿ ಆರೋಪದ ಹೇಳಿಕೆಯಿದೆ. ಕೇಜ್ರಿವಾಲ್: ಹಾಗಾದರೆ ನಾನು ಮೋದಿ ಮತ್ತು ಅಮಿತ್ ಶಾಗೆ 100 ಕೋಟಿ ರೂ. ನೀಡಿದ್ದೇನೆ ಎಂದು ಹೇಳಿದರೆ, ನೀವು ನನ್ನ ಹೇಳಿಕೆ ಆಧರಿಸಿ ಅವರನ್ನು ಬಂಧಿಸುತ್ತೀರಾ?; ನ್ಯಾಯಾಧೀಶರು ಮತ್ತು ಎಎಸ್‌ಜಿ ಇಬ್ಬರೂ ಸುಮ್ಮನಾದರು” ಎಂದು ಬರೆಯಲಾಗಿದೆ.

Latest and Breaking News on NDTV

ಪೋಸ್ಟ್‌ಅನ್ನು ಸತ್ಯವೆಂದು ನಂಬಿರುವ ಹಲವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮತ್ತು ಪೋಸ್ಟ್‌ನ ‘ಸ್ಕ್ರೀನ್‌ ಶಾಟ್‌‘ ಅನ್ನು ಹಂಚಿಕೊಳ್ಳುತ್ತಿದ್ದಾರೆ. ಪೋಸ್ಟ್‌ನಲ್ಲಿ ಹೇಳಲಾಗಿರುವುದು ಸತ್ಯವೇ ಪರಿಶೀಲಿಸೋಣ.

Advertisements

ಸತ್ಯವೇನು?
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ 100 ಕೋಟಿ ರೂ. ನೀಡಿದರೆ ಅವರನ್ನು ಬಂಧಿಸುತ್ತೀರಾ ಎಂದು ಕೇಳಿದ್ದಾರೆ ಎಂಬುದು ನಕಲಿ ಪೋಸ್ಟ್‌ ಎಂದು ‘ಬೂಮ್‌’ ಫ್ಯಾಕ್ಟ್‌ಚೆಕ್‌ ವೆಬ್‌ಸೈಟ್‌ ಕಂಡುಹಿಡಿದಿದೆ.

ನ್ಯಾಯಾಲಯದ ವಿಚಾರಣೆ ವೇಳೆಯ ಪ್ರಶ್ನೋತ್ತರಗಳಿಗೆ ಸಂಬಂಧಿಸಿದಂತೆ ಕೀವರ್ಡ್‌ ಮೂಲಕ ಹುಡುಕಿದಾಗ, ಯಾವುದೇ ವಿಶ್ವಾಸಾರ್ಹ ಮಾಧ್ಯಮಗಳು ಆ ಬಗ್ಗೆ ವರದಿ ಮಾಡಿಲ್ಲ.

ಇನ್ನು, ಕೇಜ್ರಿವಾಲ್ ಬಂಧನ ಪ್ರಕರಣದಲ್ಲಿ ನ್ಯಾಯಾಲಯದಲ್ಲಿನ ಕಲಾಪಗಳ ಬಗ್ಗೆ ವರದಿ ಮಾಡುತ್ತಿರುವ ‘ನ್ಯೂಸ್‌ಲ್ಯಾಂಡ್ರಿ’ಯ ವರದಿಗಾರ್ತಿ ತನಿಷ್ಕಾ ಸೋಧಿ ಕೂಡ ವೈರಲ್‌ ಆಗುತ್ತಿರುವ ಪೋಸ್ಟ್‌ ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ.

“ನ್ಯಾಯಾಲಯದ ಒಳಗೆ ಹಲವಾರು ವರದಿಗಾರರು ಇದ್ದರು. ನಾವು ವಿಚಾರಣೆಯ ಸಂದರ್ಭವನ್ನು ಆಲಿಸಿದ್ದೇವೆ. ಅಲ್ಲಿ, ವೈರಲ್‌ ಆಗುತ್ತಿರುವ ಪೋಸ್ಟ್‌ನಲ್ಲಿ ಉಲ್ಲೇಖಿಸಲಾದ ಸಂಭಾಷಣೆ ನಡೆದಿಲ್ಲ. ವೈರಲ್‌ ಪೋಸ್ಟ್‌ಅನ್ನು ಯಾರೋ ತಮಾಷೆಗಾಗಿ ಸೃಷ್ಟಿಸಿದ್ದಾರೆ. ಅದು ನಕಲಿ ಪೋಸ್ಟ್‌” ಎಂದು ಸೋಧಿ ಸ್ಪಷ್ಟವಾಗಿ ವಿವರಿಸಿದ್ದಾರೆ.

ಅಲ್ಲದೆ, ಪಿಟಿಐ ವರದಿಗಾರ ಅವೈಸ್ ಉಸ್ಮಾನಿ ಕೂಡ ವೈರಲ್ ಪೋಸ್ಟ್‌ ನಕಲಿ ಎಂದು ಹೇಳಿದ್ದಾರೆ. ವಿಚಾರಣೆ ವೇಳೆ ವೈರಲ್‌ಪೋಸ್ಟ್‌ನಲ್ಲಿ ಉಲ್ಲೇಖಿಸಲಾದ ಸಂಭಾಷಣೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 

39 ನಿಮಿಷಗಳ ಕಾಲ ನಡೆದ ವಿಚಾರಣೆ ಸಂಪೂರ್ಣ ಮಾಹಿತಿಯನ್ನು ‘ನ್ಯೂಸ್‌ಲ್ಯಾಂಡ್ರಿ’ ಪ್ರಕಟಿಸಿದೆ. ಹೆಚ್ಚಿನ ಮಾಹಿತಿಗಾಗಿ ಆ ವರದಿಯನ್ನು ಓದಬಹುದು.

ಪ್ರಕರಣವೇನು?

ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು 2024ರ ಮಾರ್ಚ್ 21ರಂದು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಮಾರ್ಚ್ 28 ರಂದು, ಕೇಜ್ರಿವಾಲ್ ಅವರನ್ನು ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಕೋರ್ಟ್‌ನಲ್ಲಿ ಮಾತನಾಡಿದ್ದ ಕೇಜ್ರಿವಾಲ್, “ತಮ್ಮ ಬಂಧನದ ಹಿಂದೆ ‘ರಾಜಕೀಯ ಪಿತೂರಿ’ ಇದೆ. ತಮ್ಮ ವಿರುದ್ಧ ಯಾವುದೇ ಪ್ರಕರಣ ದಾಖಲಾಗದೆ ಹಾಲಿ ಮುಖ್ಯಮಂತ್ರಿಯನ್ನು ಬಂಧಿಸಲು ಇಡಿ ಬಳಿ, ಸಾಕಷ್ಟು ಕಾರಣಗಳಿವೆಯೇ” ಎಂದು ಪ್ರಶ್ನಿಸಿದ್ದರು. ಕೇಜ್ರಿವಾಲ್ ಅವರನ್ನು ಏಪ್ರಿಲ್ 1ರವರೆಗೆ ಇಡಿ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿತ್ತು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

Download Eedina App Android / iOS

X