‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂಬುದು ಗೊತ್ತಾಗಿ ಬಿಜೆಪಿಯಿಂದ ಎಲ್ಲರಿಗೂ ಕಿರುಕುಳ: ಡಿ ಕೆ ಶಿವಕುಮಾರ್

Date:

ಲೋಕಸಭೆ ಚುನಾವಣೆಯಲ್ಲಿ ಸೋಲಿನ ಭೀತಿಯಿಂದಾಗಿ ಕೇಂದ್ರ ಬಿಜೆಪಿ ಸರ್ಕಾರ, ಕಾಂಗ್ರೆಸ್ ಮತ್ತು ಕಮ್ಯುನಿಷ್ಟ್ ಪಕ್ಷ ಸೇರಿದಂತೆ ವಿರೋಧ ಪಕ್ಷಗಳಿಗೆ ಕಿರುಕುಳ ನೀಡುತ್ತಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, “1800 ಕೋಟಿ ತೆರಿಗೆ ಪಾವತಿಸಬೇಕು ಎಂದು ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಪಕ್ಷಕ್ಕೆ ನೋಟಿಸ್ ಜಾರಿ ಮಾಡಿದೆ. ಇದು ಪ್ರಜಾಪ್ರಭುತ್ವ ದೇಶ. ಆದರೂ ಬಿಜೆಪಿ ಸರ್ಕಾರ ಅಧಿಕಾರಿಗಳ ಮೂಲಕ ವಿರೋಧ ಪಕ್ಷಗಳಿಗೆ ಕಿರುಕುಳ ನೀಡುತ್ತಿದೆ” ಎಂದು ಆರೋಪಿಸಿದರು.

“ಸೂರ್ಯ ಮುಳುಗುತ್ತಾನೆ, ಮತ್ತೆ ಹುಟ್ಟುತ್ತಾನೆ. ಇಲ್ಲಿ ಯಾವುದೂ ಶಾಶ್ವತವಲ್ಲ. ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿಕೂಟಕ್ಕೆ ಬಿಜೆಪಿ ಸರ್ಕಾರ ಬೆದರಿದೆ. ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಅವರಿಗೆ ಅರಿವಾಗಿದೆ. ಹೀಗಾಗಿ ಅವರು ಎಲ್ಲರಿಗೂ ಕಿರುಕುಳ ನೀಡುತ್ತಿದ್ದಾರೆ” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನನಗೂ ನೋಟಿಸ್ ಬಂದಿದೆ

“ನನ್ನ ವಿರುದ್ಧದ ಪ್ರಕರಣ ಮುಕ್ತಾಯವಾಗಿದ್ದರೂ ನಿನ್ನೆ ರಾತ್ರಿ ನನಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗಿದೆ. ಕರ್ನಾಟಕದಿಂದ ಆಯ್ಕೆಯಾಗಿರುವ ಹಾಲಿ ಕೇಂದ್ರ ಸಚಿವರು ಸೇರಿದಂತೆ ಅನೇಕ ಬಿಜೆಪಿ ನಾಯಕರ ವಿರುದ್ಧವೂ ಪ್ರಕರಣಗಳಿವೆ. ಕಳೆದ ನಾಲ್ಕೈದು ವರ್ಷಗಳಿಂದ ಆ ಪ್ರಕರಣಗಳಲ್ಲಿ ಯಾವುದೇ ವಿಚಾರಣೆ, ನೋಟಿಸ್, ಆರೋಪಪಟ್ಟಿ ಸಲ್ಲಿಕೆ, ಕ್ರಮ ಇಲ್ಲವಾಗಿದೆ. ಕೇವಲ ಕಾಂಗ್ರೆಸ್ ನಾಯಕರನ್ನು ಮಾತ್ರ ಗುರಿ ಮಾಡಲಾಗುತ್ತಿದೆ. ಬಿಜೆಪಿ ಸೇರಿದರೆ ಮಾತ್ರ ಬಿ ರಿಪೋರ್ಟ್ ಸಲ್ಲಿಕೆ ಮಾಡಿ ಅವರ ವಿರುದ್ಧ ಪ್ರಕರಣ ಮುಚ್ಚಿಹಾಕಲಾಗುತ್ತದೆ” ಎಂದು ತಿಳಿಸಿದರು.

ಕೇಂದ್ರ ಸಚಿವ ಅಮಿತ್ ಶಾ ಅವರು ಚನ್ನಪಟ್ಟಣದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು ಡಿ.ಕೆ. ಸಹೋದರರನ್ನು ಟಾರ್ಗೆಟ್ ಮಾಡಲಾಗುತ್ತಿದೆಯೇ ಎಂದು ಕೇಳಿದಾಗ, “ನಾವು ಬಲಿಷ್ಠವಾದಷ್ಟು ನಮಗೆ ಹೆಚ್ಚು ಶತ್ರುಗಳು, ನಾವು ಬಲಿಷ್ಠವಾದಷ್ಟು ನಮಗೆ ಹೆಚ್ಚು ಅಧಿಕಾರ. ನಮಗೆ ಇದು ಹೊಸತಲ್ಲ. ಅಮಿತ್ ಶಾ ಅವರಾದರೂ ಬರಲಿ, ಪ್ರಧಾನಮಂತ್ರಿಗಳಾದರೂ ಬರಲಿ. ನಾವು ರಾಜಕೀಯವಾಗಿ ದೇವೇಗೌಡರು, ಅವರ ಪುತ್ರ ಕುಮಾರಸ್ವಾಮಿ, ಸೊಸೆ ಹಾಗೂ ಮೊಮ್ಮಗನನ್ನು ಎದುರಿಸಿದ್ದೇವೆ. ನಮ್ಮ ಜನಕ್ಕೆ ಪ್ರಜ್ಞೆ ಇದೆ” ಎಂದರು

ಪಕ್ಷದ ಲಕ್ಷ್ಮಣ ರೇಖೆ ಯಾರೂ ದಾಟುವಂತಿಲ್ಲ

ಕೋಲಾರದ ಅಭ್ಯರ್ಥಿ ಘೋಷಣೆಯಾಗಿರುವ ಬಗ್ಗೆ ಕೇಳಿದಾಗ, “ನಾನು ಮುನಿಯಪ್ಪ, ಬೇರೆ ನಾಯಕರ ಜತೆ ಚರ್ಚೆ ಮಾಡಿದ್ದು, ಎಲ್ಲರೂ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಲ್ಲಿ ಗುಂಪು ರಾಜಕೀಯಕ್ಕೆ ಅವಕಾಶವಿಲ್ಲ. ಶಿಸ್ತು ಇಲ್ಲಿ ಬಹಳ ಮುಖ್ಯ. ಯಾವುದೇ ಸಚಿವರು, ಶಾಸಕರು ಪಕ್ಷದ ಲಕ್ಷ್ಮಣ ರೇಖೆ ದಾಟಲು ಸಾಧ್ಯವಿಲ್ಲ ಎಂದು ಹೇಳಿದ್ದೇವೆ” ಎಂದು ಹೇಳಿದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಕಬರೀ ಮೋದಿ ಅವ್ರು ರಾಮಮಂದಿರ ಕಟ್ಟಿದ ಕೂಡಲೇ ಅವ್ರಿಗೆ ವೋಟ್ ಹಾಕ್ತಿವಿ ಅನ್ನೋದು ಸರಿಯಲ್ಲ. ಈ ಕುರಿತ ಕಾಂಗ್ರೆಸ್ ಆರೋಪ ಸರಿಯಿಲ್ಲ ಅನ್ನಿಸುತ್ತದೆ. ಈಗಾಗಲೇ 60 ವರ್ಷಗಳಿಂದ ಕಾಂಗ್ರೆಸ್ ಆಗೋದಿಲ್ಲ ಅಂದಿದ್ದ ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗದಿರುವುದು ಸೇರಿದಂತೆ ಉತ್ತಮ ಕೆಲಸಗಳು ದೇವನ್ನು ಏಕೀಕರಣದಲ್ಲಿ ಉಳಿಸಲು ಮುಂದಾಗಿರುವುದೇ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಿಸಲು ನೆರವಾಗಲಿದೆ. ಏನೇ ಆದ್ರೂ ಹಿಂದೂ ವಿರೋಧಿ ನೀತಿ ತಳೆಯುವ,ಪ್ರತಿಸಾರಿಯೂ ಮುಸ್ಲಿಂ ಪರವಾಗಿಯೇ ಕೆಲಸ ಮಾಡುವ ಕಾಂಗ್ರೆಸ್ ಅನ್ನು ಯಾವ ಹಿಂದೂ ಕೂಡ ನಂಬಲಾರರು..ಹೀಗಾಗಿ ಚುನಾಣೆಯಲ್ಲಿ ಮುಸ್ಲಿಂ ಪರನಾದ ಕಾಂಗ್ರೆಸಿಗೆ ಹಿಂದೂಗಳು ತಕ್ಕ ಪಾಠ ಕಲಿಸಲಿದ್ದಾರೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಓಡೋ.. ಓಡೋ.. ಓಡೋಲೇ – ಬೆಂಗಳೂರು ದಕ್ಷಿಣದಿಂದಲೂ ಓಡುವರೇ ತೇಜಸ್ವಿ ಸೂರ್ಯ

ಬಿಜೆಪಿಯ ಅಗ್ರಹಾರದಲ್ಲಿ ಪ್ರಬಲ ವಾಗ್ಮಿ ಎಂದೇ ಕರೆಸಿಕೊಂಡಿರುವ ತೇಜಸ್ವಿ ಸೂರ್ಯ ಅಷ್ಟೇ...

ಕರ್ನಾಟಕಕ್ಕೆ ಬರ ಪರಿಹಾರ ನೀಡಲು ಚುನಾವಣಾ ಆಯೋಗ ಸಮ್ಮತಿ, ಶೀಘ್ರವೇ ಹಣ ಬಿಡುಗಡೆ; ಸುಪ್ರೀಂಗೆ ಕೇಂದ್ರ ಮಾಹಿತಿ

ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಬರ ಪರಿಹಾರ ನೀಡಲಾಗಿದೆ. ಕರ್ನಾಟಕಕ್ಕೆ ಮೋಸವಾಗಿಲ್ಲವೆಂದು ಬೊಬ್ಬೆ...

ಡೇಂಜರ್ ಜಾಹೀರಾತು | ಅಕ್ಷರಶಃ ಇದು ಬಿಜೆಪಿಯ ಅಪಾಯಕಾರಿತನವನ್ನು ಪ್ರತಿನಿಧಿಸುತ್ತಿದೆ, ಎಚ್ಚರಿಕೆ!

ಕಾಂಗ್ರೆಸ್‌ಗೆ ವಿರುದ್ದವಾಗಿ ಇಂದು ಬಿಜೆಪಿ ಪ್ರಾಯೋಜಿಸಿರುವ ಜಾಹೀರಾತಿನಲ್ಲಿ ಯಾವುದೇ ಅಭಿವೃದ್ಧಿ ಮತ್ತು...