ಭಾರತದ ಜನರನ್ನು ಬಳಸಿಕೊಂಡು ಭಾರತೀಯರಿಗೆ ಮೋಸ ಮಾಡುತ್ತಿದ್ದ ಜಾಲವೊಂದು ಪತ್ತೆಯಾಗಿದೆ. ಹೌದು, ಕಳೆದ ಆರು ತಿಂಗಳಿನಲ್ಲಿ 5000 ಭಾರತೀಯರನ್ನು ಕಾಂಬೋಡಿಯಾದಲ್ಲಿ ಒತ್ತೆಯಾಳಾಗಿ ಇಟ್ಟುಕೊಂಡು ಸೈಬರ್ ವಂಚನೆ ಜಾಲ ನಡೆಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಡೇಟಾ ಎಂಟ್ರಿ ಎಂದು ಉದ್ಯೋಗದ ಆಮಿಷ್‌ವೊಡ್ಡಿ ಭಾರತೀಯನ್ನರು ಕಾಂಬೋಡಿಯಾಗೆ ಕರೆಯಿಸಿಕೊಳ್ಳಲಾಗುತ್ತಿದೆ. ಬಳಿಕ, ಅಲ್ಲಿ ಸೈಬರ್ ಕ್ರೈಂ ವಂಚನೆಗೆ ಭಾರತೀಯರನ್ನು ಬಳಸಿಕೊಳ್ಳಲಾಗುತ್ತಿದೆ. ಆನ್ಲೈನ್ ವಂಚನೆ ಮಾಫಿಯಾ ಜಾಲದಲ್ಲಿ ಸಿಲುಕಿಕೊಂಡಿವರ ಪೈಕಿ ದಕ್ಷಿಣ ಭಾರತೀಯರೇ ಹೆಚ್ಚು.
ದುಷ್ಕರ್ಮಿಗಳು ಮೊದಲಿಗೆ ಕಾಂಬೋಡಿಯಾದಲ್ಲಿ ಭಾರತೀಯರನ್ನು ಕೂಡಿ ಹಾಕಿ ವಂಚನೆಗೆ ಒಪ್ಪಿಸಿ ಬಳಿಕ ಸೈಬರ್ ವಂಚನೆ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಕೆಲಸ ಅರಸಿ ಕಾಂಬೋಡಿಯಾಗೆ ತೆರಳಿದ ಭಾರತೀಯರು ತಮ್ಮ ಇಚ್ಛೆಗೆ ವಿರುದ್ಧವಾಗಿ ಮತ್ತು ಒತ್ತಾಯಪೂರ್ವಕವಾಗಿ ತಮ್ಮದೇ ಜನರಿಗೆ ಸೈಬರ್ ವಂಚನೆ ಎಸಗುವಂತೆ ಕಾಂಬೋಡಿಯಾ ದುಷ್ಕರ್ಮಿಗಳು ಭಾರತೀಯರಿಗೆ ಹಿಂಸೆ ನೀಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಇಡಿ ಅಧಿಕಾರಿಗಳ ಸೋಗಿನಲ್ಲಿ ಬೆದರಿಕೆಯೊಡ್ಡಿ ಹಣ ಕೀಳುವುದು, ಜಾಲತಾಣಗಳಲ್ಲಿ ನಕಲಿ ಖಾತೆ ತೆರೆದು ಭಾರತೀಯರಿಗೆ ವಂಚನೆ, ಕ್ರಿಪ್ಟೋಕರೆನ್ಸಿ, ಷೇರುಮಾರುಕಟ್ಟೆ ಹೂಡಿಕೆ ಹೆಸರಲ್ಲಿ ವಂಚನೆ ಮಾಡಿಸಲಾಗುತ್ತಿದೆ. ಭಾರತೀಯರಿಂದಲೇ ಭಾರತದ ಜನರಿಗೆ ಒತ್ತಾಯಪೂರ್ವಕವಾಗಿ ವಂಚನೆ ಮಾಡಿಸಲಾಗುತ್ತಿದೆ. ಕಳೆದ ಆರು ತಿಂಗಳಲ್ಲಿ ವಂಚಕರು ಭಾರತದಲ್ಲಿನ ಜನರಿಗೆ ಕನಿಷ್ಠ ಪಕ್ಷ ₹500 ಕೋಟಿ ವಂಚಿಸಿದ್ದಾರೆ ಎಂದು ಸರ್ಕಾರ ಅಂದಾಜಿಸಿದೆ.
ಇನ್ನು ಕೆಲವು ಪ್ರಕರಣಗಳಲ್ಲಿ ಪಾರ್ಸೆಲ್‌ಗಳಲ್ಲಿ ಕೆಲವು ಸಂಶಯಾಸ್ಪದ ವಸ್ತುಗಳನ್ನು ಪತ್ತೆ ಮಾಡಿದ್ದೇವೆ ಎಂದು ಕಾನೂನು ಜಾರಿ ಪ್ರಾಧಿಕಾರದ ಅಧಿಕಾರಿಗಳ ಸೋಗಿನಲ್ಲಿ ಜನರನ್ನು ಸುಲಿಯಲೂ ಬಳಸಿಕೊಳ್ಳಲಾಗುತ್ತಿದೆ. ಈವರೆಗೆ ಕಾಂಬೋಡಿಯಾದಲ್ಲಿ ಸಿಲುಕಿಕೊಂಡಿದ್ದ ಮೂವರು ಬೆಂಗಳೂರು ನಿವಾಸಿಗಳನ್ನು ಮರಳಿ ಭಾರತಕ್ಕೆ ಕರೆ ತರಲಾಗಿದೆ.
ಕಳೆದ ವರ್ಷ ಡಿಸೆಂಬರ್ 30ರಂದು ಒಡಿಶಾದಲ್ಲಿನ ರೂರ್ಕೆಲಾ ಪೊಲೀಸರು ಸೈಬರ್ ಅಪರಾಧ ಗುಂಪನ್ನು ಭೇದಿಸಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಕಾಂಬೋಡಿಯಾಗೆ ಜನರನ್ನು ಸಾಗಿಸುವ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಎಂಟು ಮಂದಿಯನ್ನು ಬಂಧಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಕಾನೂನು ಗೌರವಿಸದ ಪೊಲೀಸ್ ಅಧಿಕಾರಿಗೆ ಸಹಾನುಭೂತಿ ಇಲ್ಲ: ಹೈಕೋರ್ಟ್
ಇನ್ನು ಈ ಘಟನೆ ಸಂಬಂಧ ಭಾರತೀಯರನ್ನು ರಕ್ಷಿಸಲು ಗೃಹ ಸಚಿವಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ಹಾಗೂ ಇನ್ನಿತರ ರಕ್ಷಣಾ ತಜ್ಞರು ಸಭೆ ನಡೆಸಿದ್ದಾರೆ.
ಕಾಂಬೋಡಿಯಾದಲ್ಲಿ ನಡೆಯುತ್ತಿರುವ ಸೈಬರ್ ಅಪರಾಧದಿಂದ ಕಳೆದ ಆರು ತಿಂಗಳಲ್ಲಿ ಭಾರತೀಯರು ₹500 ಕೋಟಿ ನಷ್ಟ ಅನುಭವಿಸಿದ್ದಾರೆ. ಬಹುತೇಕ ದೇಶದ ದಕ್ಷಿಣ ಭಾಗದ ಜನರನ್ನು ಬಲೆಗೆ ಕೆಡವಿಕೊಳ್ಳುತ್ತಿದ್ದು, ಅವರನ್ನೆಲ್ಲ ಡಾಟಾ ಎಂಟ್ರಿ ಉದ್ಯೋಗದ ನೆಪದಲ್ಲಿ ಕಾಂಬೋಡಿಯಾಗೆ ರವಾನಿಸುತ್ತಿದ್ದಾರೆ. ಅಲ್ಲಿ ಅವರನ್ನು ಸೈಬರ್ ವಂಚನೆಗೆ ಒತ್ತಾಯಪೂರ್ವಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಸಭೆ ಬಳಿಕ ಅಧಿಕಾರಿಗಳು ಮಾಹಿತಿ ನೀಡಿದ್ದರು.