ದಿಂಗಾಲೇಶ್ವರ ಸ್ವಾಮಿಗಳು ಜೋಶಿ ಸೋಲಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ. ಕೇಂದ್ರ ಬಿಜೆಪಿ ಸಚಿವ ಪ್ರಲ್ಹಾದ್ ಜೋಶಿ ಟಿಕೆಟ್ ಬದಲಾವಣೆ ಕುರಿತು ಬಿಜೆಪಿ ಹೈಕಮಾಂಡ್‌ಗೆ ಫಕೀರ ದಿಂಗಾಲೇಶ್ವರ ಸ್ವಾಮಿಗಳು 31ರವರೆಗೆ ಗಡುವು ನೀಡಿದ್ದರು. ಗಡುವು ನೀಡಿದ್ದ ದಿನದಂದೆ ಯಡಿಯೂರಪ್ಪ ಪ್ರಲ್ಹಾದ್ ಜೋಶಿ ಟಿಕೆಟ್ ಬದಲಾವಣೆ ಸಾಧ್ಯವಿಲ್ಲ ಎಂದು ಸುದ್ಧಿಗೋಷ್ಠಿಯೊಂದರಲ್ಲಿ ತಿಳಿಸಿದ್ದರು.
ಮಾರ್ಚ್ 30 ರಂದು ಶಿರಹಟ್ಟಿಯ ಮಠದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿ ಒಂದು ವೇಳೆ ಯಡಿಯೂರಪ್ಪನವರು ನುಡಿದದ್ದೇ ಕಡೆಯಾದರೆ ನಮಗೆ ಜೋಶಿ ಸೋಲಿಸುವುದು ಅನಿವಾರ್ಯವಾಗಿದೆ. ಪಕ್ಷವು ಬದಲಾವಣೆ ಮಾಡದಿದ್ದರೆ, ಮತದಾರರು ಜೋಶಿಯವರನ್ನು ಬದಲಾವಣೆ ಮಾಡಲು ಸನ್ನದ್ಧರಾಗಿದ್ದಾರೆ. ನಾವೂ ಜೋಶಿ ಸೋಲಿಸಲು ಏನು ತಯಾರಿ ಬೇಕೊ ಅದನ್ನು ಮಾಡಲು ಸನ್ನದ್ಧರಾಗುತ್ತೇವೆ. ಜೋಶಿ ಸೋಲಿಸುವುದು ಈ ಸಲದ ನಮ್ಮೆಲ್ಲರ ಗುರಿಯಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರಲ್ಹಾದ್ ಜೋಶಿಯವರಿಂದ ದಲಿತರು, ಹಿಂದುಳಿದವರು ಹೀಗೆ ಎಲ್ಲ ಸಮಾಜದವರೂ ನೊಂದಿದ್ದಾರೆ. ತುಳಿತಕ್ಕೊಳಗಾಗಿದ್ದಾರೆ. ಆದ್ಧರಿಂದ ಅವರನ್ನು ಬದಲಾಯಿಸುವುದೇ ನಮ್ಮ ಅಂತಿಮ ತೀರ್ಮಾನವಾಗಿದೆ ಎಂದರು. ಜೋಶಿಯವರಿಗೆ ಚುನಾವಣೆ ಬಂದಾಗ ಕ್ಷಮೆ ಕೇಳುವುದು, ತದನಂತರ ಎಲ್ಲರನ್ನು ತುಳಿಯುವುದು ರೂಢಿಗತವಾಗಿದೆ ಎಂದು ಗುಡುಗಿದರು.
