ಪೊಲೀಸ್ ಠಾಣೆಯಲ್ಲೇ ಪತ್ರಕರ್ತನಿಗೆ ಥಳಿಸಿದ ಬಿಜೆಪಿ ಮಂತ್ರಿಯ ಮಗ

Date:

ಮಧ್ಯ ಪ್ರದೇಶದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ನರೇಂದ್ರ ಶಿವಾಜಿ ಪಟೇಲ್‌ ಪುತ್ರ ಅಭಿಜ್ಞಾನ್‌  ಓರ್ವ ಪತ್ರಕರ್ತ ಹಾಗೂ ಮೂವರು ಸ್ಥಳೀಯರಿಗೆ ಪೊಲೀಸ್‌ ಠಾಣೆಯಲ್ಲೇ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದವರಲ್ಲಿ ಒಬ್ಬರು ಮಹಿಳೆಯರು ಸೇರಿದ್ದಾರೆ.

ಘಟನೆಯು ಭೋಪಾಲದ ಪ್ರಮುಖ ಪ್ರದೇಶದಲ್ಲಿ ನಡೆದಿದ್ದು, 30 ವರ್ಷದ ಸಚಿವ ನರೇಂದ್ರ ಶಿವಾಜಿ ಪಟೇಲ್‌ ಅವರ ಪುತ್ರ ಅಭಿಜ್ಞಾನ್‌ ಸಾರ್ವಜನಿಕ ಸ್ಥಳದಲ್ಲಿ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದವರು ಪೊಲೀಸ್‌ ಠಾಣೆಗೆ ದೂರು ನೀಡಲು ಬಂದಾಗ ಅಲ್ಲೂ ಕೂಡ ಹಲ್ಲೆ ನಡೆಸಿದ್ದಾನೆ.

ಸಚಿವರ ಪುತ್ರನಿಂದ ಹಲ್ಲೆಗೊಳಗಾದ ಪತ್ರಕರ್ತ ಹಾಗೂ ಸಾರ್ವಜನಿಕರಿಗೆ ಸೂಕ್ತ ರಕ್ಷಣೆ ನೀಡದ ಕಾರಣಕ್ಕಾಗಿ ಠಾಣೆಯ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಪೊಲೀಸ್‌ ಅಧಿಕಾರಿಗಳು ಅಮಾನತ್ತಾದ ನಂತರ ಠಾಣೆಗೆ ಮಧ್ಯರಾತ್ರಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಬಂದ ಸಚಿವರ ಪುತ್ರ ದಾಂಧಲೆ ನಡೆಸಿದ್ದಾನೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚುನಾವಣಾ ಕಾಲದಲ್ಲಿ ಮೋದಿಯ ಬಾಂಡ್ ಭಯೋತ್ಪಾದನೆ

ನಿನ್ನೆ(ಮಾ.31) ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ದಂಪತಿ ಸಾರ್ವಜನಿಕ ಸ್ಥಳದಲ್ಲಿ ನಿಂತಿದ್ದಾಗ ಕಾರಿನಲ್ಲಿ ಬಂದ ಒಂದು ಗುಂಪು ಬೈಕ್‌ನಲ್ಲಿ ಇದ್ದ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸುತ್ತಿದ್ದರು. ಇದನ್ನು ರಸ್ತೆಯಲ್ಲಿ ನಿಂತಿದ್ದ ಸ್ಥಳೀಯ ಪತ್ರಕರ್ತ ಕೂಡ ನೊಡಿದ್ದಾನೆ.

ವ್ಯಕ್ತಿಯ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಮಹಿಳೆ ಪ್ರಶ್ನಿಸಿದಾಗ ಆಕೆಯನ್ನು ಸಚಿವರ ಪುತ್ರ ಮನಬಂದಂತೆ ನಿಂದಿಸಿ ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿದ್ದಾನೆ. ಮಹಿಳೆಯ ಜೊತೆ ಆಕೆಯ ಪತಿ ಹಾಗೂ ಪ್ರಶ್ನಿಸಿದ ಪತ್ರಕರ್ತನ ಮೇಲೂ ಸಚಿವರ ಪುತ್ರ ಹಲ್ಲೆ ಮಾಡಿದ್ದಾನೆ.

ನಾಲ್ವರು ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನಿಡಲು ಹೋದಾಗ ಅವರನ್ನು ಹಿಂಬಾಲಿಸಿದ ಸಚಿವರ ಪುತ್ರ ಹಾಗೂ ಆತನ ಗುಂಪು ಅಲ್ಲಿಯೂ ಹಲ್ಲೆ ನಡೆಸಿದ್ದಾರೆ. ನಂತರ ಪೊಲೀಸರು ಗುಂಪನ್ನು ಹೊರಗಡೆ ಕಳಿಸಿದರು.

ಘಟನೆಯ ನಂತರ ಪೊಲೀಸರು ಸಚಿವರ ಪುತ್ರ ಅಭಿಜ್ಞಾನ್‌ ಹಾಗೂ ಆತನ ಸಂಗಡಿಗರ ವಿರುದ್ಧ ವಿವಿಧ ಐಪಿಸಿ ಸೆಕ್ಷನ್‌ಗಳಡಿ ಎಫ್‌ಐಆರ್‌ ದಾಖಲಿಸಿದ್ದಾರೆ.

ಬಿಜೆಪಿ ಮಂತ್ರಿಯ ಅಮಾನುಷ ಹಲ್ಲೆಯನ್ನು ಖಂಡಿಸಿರುವ ಮಧ್ಯ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಜೀತು ಪತ್ವಾರಿ, ಮದ್ಯಪಾನ ಮಾಡಿ ಮಂತ್ರಿಯ ಮಗ ಹಲ್ಲೆ ನಡೆಸಿರುವುದು ರಾಜ್ಯದಲ್ಲಿ ಅರಾಜಕತೆ ನಡೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಸರ್ಕಾರದ ಒತ್ತಡದಿಂದಾಗಿ ಬಿಜೆಪಿಯ ಮಂತ್ರಿಯ ಪುತ್ರನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2019ರಲ್ಲಿ ಮೋದಿ ಕೊಟ್ಟ ಆಶ್ವಾಸನೆಗಳ ಕತೆ ಏನಾಯಿತು?

2019ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರಮೋದಿಯವರ ಮುಖ ಹೊತ್ತ ಬಿಜೆಪಿ ಪ್ರಣಾಳಿಕೆ ಸಾಲು...

ಪಂಜಾಬ್‌| ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ರೈತರ ಪ್ರತಿಭಟನೆಯ ಬಿಸಿ

ಪಂಜಾಬ್‌ನಲ್ಲಿ ರೈತರ ಪ್ರತಿಭಟನೆ ನಿರಂತರವಾಗಿ ಮುಂದುವರೆದಿದ್ದು, ಲೋಕಸಭೆ ಚುನಾವಣೆಯ ಪ್ರಚಾರ ನಡೆಸುತ್ತಿರುವ...

ಸ್ನೇಹಿತೆ ಮೇಲೆ ಹಲ್ಲೆ, ಅತ್ಯಾಚಾರ; ಆರೋಪಿ ಬಂಧನ – ಮನೆಯ ಅಕ್ರಮ ಭಾಗ ನೆಲಸಮ

ತನ್ನ ಸ್ನೇಹಿತೆ ಮೇಲೆಯೇ ಹಲ್ಲೆಗೈದು ಅತ್ಯಾಚಾರ ಎದಗಿದ್ದ ಆರೋಪದ ಮೇಲೆ 20...

ಅನಾರೋಗ್ಯ ಹಿನ್ನೆಲೆ; ರಾಹುಲ್ ಗಾಂಧಿ ಕೇರಳ ಚುನಾವಣಾ ಪ್ರಚಾರ ರದ್ದು

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಏಪ್ರಿಲ್ 22...