ಮೈಸೂರು | ನೆರವಿಗೆ ಧಾವಿಸುವಂತೆ ಸುಡಾನ್‌ನಲ್ಲಿ ಸಿಲುಕಿರುವ ಹಕ್ಕಿಪಿಕ್ಕಿ ಸಮುದಾಯದ ಜನ ಮನವಿ

Date:

Advertisements
  • ಸುಡಾನ್‌ನಲ್ಲಿ ಸಿಲುಕಿರುವ ಹುಣಸೂರು, ಎಚ್‌ ಡಿ ಕೋಟೆಯ 80ಕ್ಕೂ ಹೆಚ್ಚು ಮಂದಿ
  • ಹಕ್ಕಿಪಿಕ್ಕಿ ಸಮುದಾಯದವರು ತಾವೇ ತಯಾರಿಸುವ ಕೇಶ ತೈಲ ಮಾರಾಟಕ್ಕೆ ತೆರಳಿದ್ದರು

ಸುಡಾನ್‌ನಲ್ಲಿ ಆಂತರಿಕ ಸೈನಿಕ ದಂಗೆ ಭುಗಿಲೆದಿದ್ದಿದೆ. ಅಲ್ಲಿ, ಕರ್ನಾಟಕದ 800 ಮಂದಿ ಸಿಲುಕಿಕೊಂಡಿದ್ದಾರೆ. ಅವರಲ್ಲಿ, ಮೈಸೂರು ಜಿಲ್ಲೆಯ ಹುಣಸೂರು ಮತ್ತು ಎಚ್‌.ಡಿ ಕೋಟೆ ತಾಲೂಕಿನ ಸುಮಾರು ಹಕ್ಕಿಪಿಕ್ಕಿ ಸಮುದಾಯದ 80ಕ್ಕೂ ಹೆಚ್ಚು ಮಂದಿ ಇದ್ದಾರೆ. ಅವರೆಲ್ಲರೂ, ಜೀವ ಉಳಿಸಿಕೊಂಡು ತಾಯ್ನಾಡಿಗೆ ಮರಳುವುದು ಹೇಗೆಂಬ ಆತಂಕದಲ್ಲಿದ್ದಾರೆ. ತಮಗೆ ನೆರವಾಗುವಂತೆ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾದ ಸುಡಾನ್‌ಗೆ ಕಳೆದ ನಾಲ್ಕು ತಿಂಗಳ ಹಿಂದೆ ಹಕ್ಕಿಪಿಕ್ಕಿ ಸಮುದಾಯದವರು ತಾವೇ ತಯಾರಿಸುವ ಕೇಶ ತೈಲ ಮಾರಾಟ ಮಾಡಲು ಮತ್ತು ಮಸಾಜ್‌ ಮಾಡಲು ತೆರಳಿದ್ದರು. ಸುಡಾನ್‌ನ ಅಲ್ಲಲ್ಲಿ ಬಾಡಿಗೆ ಮನೆ, ಲಾಡ್ಜ್‌ಗಳನ್ನು ಗುರುತು ಮಾಡಿಕೊಂಡು ವಾಸಿಸುತ್ತಿದ್ದರು.

ಈ ನಡುವೆ ಮಿಲಿಟರಿ ಹಾಗೂ ಅರೆ ಸೇನಾಪಡೆಗಳ ನಡುವೆ ದಂಗೆ ಎದ್ದಿದ್ದು, ಇಡೀ ಸುಡಾನ್‌ನಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ. ವಿಮಾನ ನಿಲ್ದಾಣವನ್ನು ಧ್ವಂಸ ಮಾಡಲಾಗಿದ್ದು, ಸತತ ಗುಂಡಿನ ಮೊರೆತ ಕೇಳುತ್ತಿದೆ. ಮನೆಯಿಂದ ಹೊರಬರಲಾಗದೆ ಊಟ – ತಿಂಡಿ, ಕುಡಿಯುವ ನೀರಿಗೂ ತತ್ವಾರ ಉಂಟಾಗಿದ್ದು, ಪರಿತಪಿಸುತ್ತಿದ್ದಾರೆ.

Advertisements

ಸುಡಾನ್‌ನಲ್ಲಿ ಕರೆಂಟ್‌ ಸ್ಥಗಿತವಾಗಿದೆ. ಅಂಗಡಿಗೆ ಹೋಗಿ ಆಹಾರ ಸಾಮಗ್ರಿಗಳನ್ನು ತರಲು ಸಾಧ್ಯವಾಗುತ್ತಿಲ್ಲ. ಎಲ್ಲೆಂದರಲ್ಲಿ ಮಿಲಿಟರಿ ವಾಹನಗಳು ಸೈರನ್‌ ಹಾಕಿಕೊಂಡು ಸಂಚರಿಸುತ್ತಿವೆ. ಮನೆಯಿಂದ ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿದ್ದು, ಅಲ್ಲಿನ ದೇಶದವರು ಬೇರೆಕಡೆಗೆ ವಲಸೆ ಹೋಗುತ್ತಿದ್ದಾರೆ.

ಸುಡಾನ್‌ ನಲ್ಲಿರುವ ಹಕ್ಕಿಪಿಕ್ಕಿ ಸಮುದಾಯದ ಮಂದಿ ಪಕ್ಷಿರಾಜಪುರದ ಕುಟುಂಬದವರೊಂದಿಗೆ ವಿಡಿಯೋ ಕಾಲ್‌ ಮಾಡಿ ಮಾತನಾಡಿ ತಮ್ಮ ಆತಂಕವನ್ನು ತೋಡಿಕೊಂಡಿದ್ದಾರೆ.

ಹುಣಸೂರು

ಶಿವಮೊಗ್ಗ, ಕೇರಳ, ಬೆಂಗಳೂರು, ದಾವಣಗೆರೆ ಮತ್ತು ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಒಂದನೇ ಪಕ್ಷಿರಾಜಪುರ, ಎರಡನೇ ಪಕ್ಷಿರಾಜಪುರ, ಎಚ್‌ ಡಿ ಕೋಟೆ ತಾಲೂಕಿನ ಟೈಗರ್‌ ಬ್ಲಾಕ್‌ನಿಂದ ಸುಮಾರು 80ಕ್ಕೂ ಹೆಚ್ಚು ಮಂದಿ ಸುಡಾನ್‌ಗೆ ಹೋಗಿದ್ದು, ಕುಟುಂಬದವರಿಗೆ ಮಾಹಿತಿ ಪಡೆಯಲು ಯಾರನ್ನು ಸಂಪರ್ಕಿಸಬೇಕೆಂಬುದೇ ತಿಳಿಯದ ಪರಿಸ್ಥಿತಿ ಉಂಟಾಗಿದ್ದು, ನೆರವಿಗೆ ಧಾವಿಸುವಂತೆ ಮನವಿ ಸಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಚುನಾವಣಾ ನೀತಿ ಸಂಹಿತೆ ಸಮರ್ಪಕ ಜಾರಿಗೆ ಜಿಲ್ಲಾಧಿಕಾರಿ ಸೂಚನೆ

ಪ್ರಧಾನಿಗೆ ಮನವಿ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗೋಪನಾಳು ಮತ್ತು ಅಸ್ತಾಪನಹಳ್ಳಿ ಗ್ರಾಮದ 150 ಜನ, ಶಿವಮೊಗ್ಗ ಜಿಲ್ಲೆಯ 400, ಮೈಸೂರು ಜಿಲ್ಲೆಯ 250 ರಿಂದ 300 ಜನ ಅತಂತ್ರರಾಗಿದ್ದಾರೆ. ಮೂರ್ನಾಲ್ಕು ದಿನಗಳಿಂದ ಆಹಾರ, ನೀರು ಸಿಗದೇ ಪರಿತಪಿಸುತ್ತಿರುವುದಾಗಿ ಅವರು ಸಂಬಂಧಿಕರಿಗೆ ಕರೆ ಮಾಡಿ ತಿಳಿಸಿದ್ದಾರೆ.

ಸುಡಾನ್‌ನ ಖಾರ್ಟೂಮ್ ನಗರದಲ್ಲಿ ಕೆಲವು ದಿನಗಳಿಂದ ಬಾಂಬ್ ಮತ್ತು ಕ್ಷಿಪಣಿ ದಾಳಿಗಳು ನಡೆಯುತ್ತಿವೆ. ಅಲ್ಲಿ ಸಿಲುಕಿರುವ ಕನ್ನಡಿಗರು ಜೀವ ಭಯದಿಂದ ದಿನ ಕಳೆಯುತ್ತಿದ್ದಾರೆ. ಅತಂತ್ರರಾಗಿರುವ ಅವರೆಲ್ಲರನ್ನೂ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆ ತರುವಂತೆ ಸಮುದಾಯದ ಹಿರಿಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಶಾಲೆಗೆ ರಸ್ತೆ ಅಭಿವೃದ್ಧಿಪಡಿಸಲು ಆರನೇ ತರಗತಿ ವಿದ್ಯಾರ್ಥಿನಿ ಗ್ರಾ.ಪಂ. ಮುಂದೆ ಧರಣಿ

ಶಾಲೆಗೆ ಹೋಗುವ ರಸ್ತೆ ಸರಿಪಡಿಸಿ ಅಭಿವೃದ್ಧಿಪಡಿಸಲು ಒತ್ತಾಯಿಸಿ ಆರನೇ ತರಗತಿ ವಿದ್ಯಾರ್ಥಿನಿಯೊಬ್ಬಳು...

ಹಾವೇರಿ | ಗಣೇಶ ಚತುರ್ಥಿ ಪ್ರಯುಕ್ತ 265 ಹೆಚ್ಚುವರಿ ಸಾರಿಗೆ ಸೌಲಭ್ಯ

ಚತುರ್ಥಿಯ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ವಾಯವ್ಯ...

ಗದಗ | ಆಗಸ್ಟ್ 25ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ

ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು  ಗದಗ ಶಿರಹಟ್ಟಿ...

ಬೀದರ್‌ | ಅತಿವೃಷ್ಟಿ : ತ್ವರಿತ ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್‌ ಸಭಾ ಒತ್ತಾಯ

ಮೇ ತಿಂಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಹಲವು...

Download Eedina App Android / iOS

X