ಸಮಾಜದ ಕೆಲಸ ಮಾಡಲು ಜಾಗೃತಿ, ಸಂಘಟನೆ ಹಾಗೂ ನಾಯಕತ್ವ ಅಗತ್ಯವಾಗಿ ಬೇಕಿದೆ ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ರಾಜಾಧ್ಯಕ್ಷ ಉಡಚಪ್ಪ ಮಾಳಗಿ ಹೇಳಿದರು.
ಹಾವೇರಿ ನಗರದಲ್ಲಿ ಕಲ್ಯಾಣ ಸಮಿತಿ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರ ನೀಡಿ ಮಾತನಾಡಿದರು.
“ನಮ್ಮ ಕಲ್ಯಾಣ ಸಮಿತಿ ಎಲ್ಲ ಅಹಿಂದ ವರ್ಗದ ಜನರ ಆಶೋತ್ತರ-ಬೇಡಿಕೆಗಳನ್ನು ಈಡೇರಿಸುವ ಉದ್ದೇಶವನ್ನು ಹೊಂದಿದೆ. ಕಲ್ಯಾಣ ಸಮಿತಿಯ ತತ್ವ ಮತ್ತು ಸಿದ್ಧಾಂತಗಳಿಗೆ ಬದ್ಧರಾಗಿ ಸಂಘಟನೆಯನ್ನು ಗಟ್ಟಿಗೊಳಿಸಬೇಕಾಗಿದೆ. ಸಮುದಾಯದ ಜಾಗೃತಿಗಾಗಿ ಹಾಗೂ ಸಂವಿಧಾನಾತ್ಮಕ ಹಕ್ಕೊತ್ತಾಯಕ್ಕಾಗಿ ಜವಾಬ್ದಾರಿ ತೆಗೆದುಕೊಂಡವರು ಸಕ್ರಿಯರಾಗಬೇಕು” ಎಂದು ಉಡಚಪ್ಪ ಮಾಳಗಿ ಸಂಘಟನೆಯ ಬಗ್ಗೆ ತಿಳಿಸಿದರು.
ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ರಾಣೇಬೆನ್ನೂರ ತಾಲೂಕಿನ ರಾವುತನಕಟ್ಟಿ ಗ್ರಾಮದ ಮಂಜಪ್ಪ ಹನಮಂತಪ್ಪ ಮಾದರ ಅವರನ್ನು ಗ್ರಾಮ ಘಟಕದ ಅಧ್ಯಕ್ಷರನ್ನಾಗಿ ಮತ್ತು ಲಕ್ಷ್ಮಣ ಪರಸಪ್ಪ ಮಾದರ ಇವರನ್ನು ಗ್ರಾಮ ಘಟಕದ ಉಪಾಧ್ಯಕ್ಷರನ್ನಾಗಿ, ರಾಜ್ಯಾಧ್ಯಕ್ಷ ಉಡಚಪ್ಪ ಮಾಳಗಿ ಮತ್ತು ಜಿಲ್ಲಾಧ್ಯಕ್ಷ ಮಂಜಪ್ಪ ನಾಗಪ್ಪ ಮರೋಳ ನೇಮಕ ಮಾಡಿ ಆದೇಶ ಪತ್ರ ನೀಡಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಕೋಮುವಾದಿ ಪಕ್ಷ ಸೋಲಿಸಿ ಪ್ರಜಾಪ್ರಭುತ್ವ ಗೆಲ್ಲಿಸಿ: ಎದ್ದೇಳು ಕರ್ನಾಟಕದ ಜಿಲ್ಲಾ ಸಂಚಾಲಕಿ ಇಂದಿರಾ
ಅಲೆಮಾರಿ ಸಮಾಜದ ಜಿಲ್ಲಾಧ್ಯಕ್ಷ ಶೆಟ್ಟಿ ವಿಬೂತಿ, ಹಾನಗಲ್ ತಾಲೂಕಧ್ಯಕ್ಷ ಜಗದೀಶ ಹರಿಜನ, ಮುಖಂಡರುಗಳಾದ ನಾಗರಾಜ ಎಚ್, ಚೌಡಪ್ಪ ಎಚ್, ಮೌನೇಶ ಎನ್ ಎಚ್, ನಾಗರಾಜ ಎನ್, ರವಿಚಂದ್ರ ಬಿ ಎಚ್, ಹನಮಂತ ಎಸ್ ಎಚ್, ಅಣ್ಣಪ್ಪ ಎಚ್, ಬಸವರಾಜ ಎಸ್ ಎಚ್, ಮಂಜುನಾಥ ಎಚ್ ಸೇರಿದಂತೆ ಇತರರು ಇದ್ದರು.
