ಜಡ್ಜ್ ಮುಂದೆಯೇ ಅನಾಮಧೇಯ ವ್ಯಕ್ತಿಯೊಬ್ಬ ಬ್ಲೇಡ್‌ನಿಂದ ಕೈ ಕತ್ತರಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕರ್ನಾಟಕ ಹೈಕೋರ್ಟ್‌ನಲ್ಲಿ ಬುಧವಾರ ನಡೆದಿದೆ.
ಅನಾಮಿಕ ವ್ಯಕ್ತಿಯೋರ್ವ ರೇಜರ್ ಹಿಡಿದು ಹೈಕೋರ್ಟ್‌ನ ಕೋರ್ಟ್ ಹಾಲ್ 1ಕ್ಕೆ ಪ್ರವೇಶಿಸಿದ್ದು, ಈ ವೇಳೆ ಕೈ ಕತ್ತರಿಸಿಕೊಂಡು ನ್ಯಾಯ ನೀಡಿ ಎಂದು ನ್ಯಾಯಾಧೀಶರ ಮುಂದೆ ಕೋರಿರುವುದಾಗಿ ವರದಿಯಾಗಿದೆ.
ಮುಖ್ಯ ನ್ಯಾಯಮೂರ್ತಿ ಅನ್ ವಿ ಅಂಜಾರಿಯಾ ಮತ್ತು ಡಾ. ನ್ಯಾಯಮೂರ್ತಿ ಎಚ್ ಬಿ ಪ್ರಭಾಕರ್ ಶಾಸ್ತ್ರಿ ಅವರ ಪೀಠದ ಮುಂದೆ ನಡೆದ ಘಟನೆ ನಡೆದಿದ್ದು, ಕೂಡಲೇ ರೇಜರ್‌ನಿಂದ ಕೈ ಕತ್ತರಿಸಿಕೊಂಡ ವ್ಯಕ್ತಿಯನ್ನು ವೈದ್ಯರ ಬಳಿಗೆ ಕರೆದೊಯ್ಯುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ವ್ಯಕ್ತಿಯನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದಿರುವುದಾಗಿ ಬಾರ್ & ಬೆಂಚ್ ವರದಿ ಮಾಡಿದೆ.
ಬಳಿಕ ಮುಖ್ಯ ನ್ಯಾಯಮೂರ್ತಿ ಅನ್ ವಿ ಅಂಜಾರಿಯಾ ಅವರು, ರೇಜರ್ ಮುಟ್ಟಬೇಡಿ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿ, ಪಂಚನಾಮೆ ನಡೆಸುವಂತೆ ರಿಜಿಸ್ಟ್ರಾರ್ ಜನರಲ್ ಅವರಿಗೆ ಸೂಚನೆ ನೀಡಿದ್ದಾರೆ.
ಅನಾಮಿಕ ವ್ಯಕ್ತಿಯಿಂದ ರೇಜರ್ ಹಿಡಿದು ಹೈಕೋರ್ಟ್‌ನ ಕೋರ್ಟ್ ಹಾಲ್ 1ಕ್ಕೆ ಪ್ರವೇಶ. ಕೈ ಕತ್ತರಿಸಿಕೊಂಡು ಮಾಡಿಕೊಂಡು ನ್ಯಾಯಕ್ಕೆ ಕೋರಿಕೆ.#KarnatakaHighCourt pic.twitter.com/rAVQ5CTgGE
— ಬಾರ್ & ಬೆಂಚ್ – Kannada Bar & Bench (@Kbarandbench) April 3, 2024
ಘಟನೆಯ ಬಳಿಕ ಪೊಲೀಸರನ್ನು ಪ್ರಶ್ನಿಸಿದ ನ್ಯಾಯಮೂರ್ತಿ ಎಚ್ ಬಿ ಪ್ರಭಾಕರ್ ಶಾಸ್ತ್ರಿ, ಕೋರ್ಟ್ ಹಾಲ್‌ನ ಭದ್ರತೆ ಅಪಾರವಾಗಿದೆ. ಆದರೂ ಈ ವ್ಯಕ್ತಿ ಹೇಗೆ ರೇಜರ್ ಹಿಡಿದುಕೊಂಡು ಬಂದಿದ್ದು ಹೇಗೆ? ಹೈಕೋರ್ಟ್ ಪೊಲೀಸರು ಎಲ್ಲಿ ಹೋಗಿದ್ದಾರೆ? ಎಂದು ಕೇಳಿದರು.
ಘಟನೆಯ ಸಂದರ್ಭದಲ್ಲಿ ಕೋರ್ಟ್ ಅಧಿಕಾರಿಯೋರ್ವರು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯ ಕಡತವನ್ನು ಹಿಡಿದುಕೊಂಡಿದ್ದನ್ನು ಗಮನಿಸಿದ ನ್ಯಾಯಾಧೀಶರು, “ಆತ ನೀಡಿದ ಕಡತವನ್ನು ನೀವೇಕೆ ಪಡೆದುಕೊಂಡಿರಿ. ಅದನ್ನು ಪಡೆದು ಬಳಿಕ ಕೆಳಗೆ ಇಟ್ಟಿದ್ದೀರಿ. ಹೀಗಾಗಿ, ನಿಮ್ಮ ಬೆರಳಚ್ಚನ್ನೂ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬೇಕು. ನ್ಯಾಯಾಲಯದ ಅನುಮತಿ ಇಲ್ಲದೇ ಕೋರ್ಟ್ ಅಧಿಕಾರಿಯು ಯಾವುದೇ ದಾಖಲೆ ಸ್ವೀಕರಿಸುವಂತಿಲ್ಲ. ವಕೀಲರು ಕಡತ ನೀಡಿದ್ದರೆ ನೋಡಬಹುದಿತ್ತು. ಆದರೆ, ಅದನ್ನು ವ್ಯಕ್ತಿಯೊಬ್ಬರು ನೀಡಿದ್ದಾರೆ” ಎಂದು ತಿಳಿಸಿದರು.
ಈ ವೇಳೆ ಸರ್ಕಾರದ ವಕೀಲ ಎಸ್ ಎಸ್ ಮಹೇಂದ್ರ, ಪ್ರಕರಣವನ್ನು ಹೈಕೋರ್ಟ್ ವ್ಯಾಪ್ತಿ ಹೊಂದಿದ ಪೊಲೀಸರಿಗೆ ತಿಳಿಸುವುದು ಸೂಕ್ತ ಎಂದು ಸಲಹೆ ನೀಡಿದರು. ಆ ಬಳಿಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ಘಟನೆಯ ಮಾಹಿತಿಯನ್ನು ಮುಖ್ಯ ನ್ಯಾಯಮೂರ್ತಿ ನೀಡಿದ ನಂತರ, ಕಲಾಪ ಮುಕ್ತಾಯಗೊಳಿಸಲಾಗಿದೆ.
ಸದ್ಯ ಕೈ ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ವಿವರಗಳು ಲಭ್ಯವಾಗಿಲ್ಲ. ಯಾವ ಪ್ರಕರಣದ ಸಂಬಂಧ ಹೈಕೋರ್ಟ್‌ಗೆ ಬಂದಿದ್ದರು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.
